Advertisements

ರಸ್ತೆ ಪಕ್ಕದಲ್ಲಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ ಬರೋಬ್ಬರಿ 1ಲಕ್ಷ ಹಣ ಕೊಟ್ಟು ಮಾನವೀಯತೆ ಮೆರೆದ ಸ್ಟಾರ್ ನಟ !

Cinema

ಸ್ನೇಹಿತರೇ, ಎಷ್ಟೋ ಸಿನಿಮಾ ನಟರು ತಮ್ಮ ಸಿನಿಮಾಗಳಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿದ್ರೂ ಸಹ ಸರಳತೆ ಹಾಗೂ ಮಾನವೀಯತೆಯ ಗುಣದಿಂದ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಾರೆ. ಇದಕ್ಕೆ ನೈಜ ನಿದರ್ಶನವೆಂಬಂತೆ ರಸ್ತೆ ಬದಿಯಲ್ಲಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಯೊಬ್ಬನಿಗೆ ಖ್ಯಾತ ನಟನೊಬ್ಬ ಬರೋಬ್ಬರಿ ಒಂದು ಲಕ್ಷ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ತಮ್ಮ ವಿಭಿನ್ನವಾದ ಮ್ಯಾನರಿಸಂ ನಿಂದ ಲಕ್ಷಾಂತರ ಅಭಿಮಾನಿಗಳ ಬಳಗ ಹೊಂದಿರುವ ಆ ಸ್ಟಾರ್ ನಟನೇ ತಲಾ ಅಜಿತ್. ಹಾಗಾದ್ರೆ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ ಒಂದು ಲಕ್ಷ ಕೊಟ್ಟಿದ್ದೇಕೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

Advertisements

ಹೌದು, ತುಂಬಾ ಸರಳ ವ್ಯಕ್ತಿ ಎನಿಸಿಕೊಂಡಿರುವ ನಟ ಅಜಿತ್ ಅವರು ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಬಹಳಷ್ಟು ಬಾರಿ ಅಜಿತ್ ಅವರು ಈ ರೀತಿಯ ಸಹಾಯಗಳನ್ನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ತಮ್ಮ ಮುಂದಿನ ಚಿತ್ರವಾದ ವಾಲೀಮಾ ಚಿತ್ರೀಕರಣಕೋಸ್ಕರ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲಂ ಸಿಟಿಗೆ ಬಂದಿದ್ದರು. ತಾವು ಪಾಲ್ಗೊಂಡಿದ್ದ ಚಿತ್ರದ ಶೂಟಿಂಗ್ ಸೆಟ್ ನ ಪಕ್ಕದಲ್ಲೇ ವಯಸ್ಸಾದ ವ್ಯಕ್ತಿಯೊಬ್ಬರು ಇಡ್ಲಿ ಮಾಡಿ ಮಾರುತ್ತಿದ್ದರಂತೆ. ಚಿತ್ರೀಕರಣ ನಡೆಯುವಷ್ಟು ದಿನ ಶೂಟಿಂಗ್ ನೋಡಲು ಬಂದವರಿಗೂ ಅಲ್ಲಿದ್ದವರಿಗೂ ಇಡ್ಲಿ ಮಾರಾಟ ಮಾಡುತ್ತಿದ್ದ ಆ ವ್ಯಕ್ತಿಯ ಶ್ರಮವನ್ನ ತಲಾ ಅಜಿತ್ ಗಮನಿಸಿದ್ದಾರೆ.

ನಟ ಅಜಿತ್ ಅವರು ವಯಸ್ಸಾದ ವ್ಯಕ್ತಿ ಇಡ್ಲಿ ಮಾರಾಟ ಮಾಡುತ್ತಿರುವುದನ್ನ ನೋಡಿ ಸುಮ್ಮನಾಗಲಿಲ್ಲ. ತಾವು ಆತ ಮಾಡಿದ ಇಡ್ಲಿ ತಿಂದಿದ್ದಾರೆ. ಇಡ್ಲಿಯನ್ನ ತಿಂದ ನಟ ಇಡ್ಲಿಯ ರುಚಿಗೆ ಮಾರುಹೋಗಿ ಆ ವ್ಯಕ್ತಿಗೆ ಬರೋಬ್ಬರಿ ಒಂದು ಲಕ್ಷ ಹಣ ನೀಡಿದ್ದಾರೆ. ವಯಸ್ಸಾದ ವ್ಯಕ್ತಿಯ ಶ್ರಮವನ್ನ ಕಂಡು ನೆರವಿನ ರೂಪದಲ್ಲಿ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಬಡವರ ಶ್ರಮವನ್ನ ಅರ್ಥಮಾಡಿಕೊಂಡು ಹೀಗೆ ಸಹಾಯ ಮಾಡುವ ನಟರು ಗ್ರೇಟ್ ಆಲ್ವಾ..ಹಾಗಾದ್ರೆ ಸ್ನೇಹಿತರೇ, ನೀವು ತುಂಬಾ ಮೆಚ್ಚಿದ ಸ್ಯಾಂಡಲ್ವುಡ್ ನಟ ಯಾರೆಂದು ಕಾ’ಮೆಂಟ್ ಮಾಡಿ ತಿಳಿಸಿ..