Advertisements

ಅಕ್ಕನ ಮಗಳು ದೊಡ್ಡವಳಾದಳು ಎಂದು ಮಾವ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ತಮಿಳುನಾಡಿನಲ್ಲಿರುವ ತಿವಣುರ್ ಎಂಬಲ್ಲಿ ಷಣ್ಮುಗ ಮತ್ತು ಪಾಂಡಿ ಎಂಬ ಅಣ್ಣ ತಮ್ಮಂದಿರು  ವಾಸ ಮಾಡುತ್ತಿದ್ದಾರೆ. ಇನ್ನೂ ಇವರಿಬ್ಬರಿಗೆ ಒಬ್ಬ ಸುಜಾತಾ ಎಂಬ ಪ್ರೀತಿಯ ಅಕ್ಕ ಕೂಡ ಇದ್ದಾರೆ‌.. ಇನ್ನೂ ಇವರ ತಂದೆ ತಾಯಿ ಸುಜಾತಾ ಅವರಿಗೆ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಗೆ ಹೋದ ನಂತರ.‌‌. ಷಣ್ಮುಗ ಮತ್ತು ಪಾಂಡಿ ಅಣ್ಣ ತಮ್ಮಂದಿರು ಮದುವೆಯಾಗಿ ಬೇರೆ ವೇರೆ ಮನೆಗಳಲ್ಲಿ ಜೀವನ ಮಾಡಲು ಶುರುಮಾಡುತ್ತಾರೆ. ಒಂದು ಕಾಲದಲ್ಲಿ ಷಣ್ಮುಗ ಅವರು ಬ್ಯುಸಿನೆಸ್ ಮ್ಯಾನ್ ಆಗಿದ್ದು  ತುಂಬಾನೆ ಹಣ ಸಂಪಾದನೆ ಮಾಡಿ ಶ್ರೀಮಂತ ವ್ಯಕ್ತಿಯಾಗಿದ್ದ. ಆದರೆ ಪಾಂಡಿ ಸಾಧಾರಣ ಬಡ ಕುಟುಂಬದ ರೀತಿ ಜೀವನ ನಡೆಸುತ್ತಿದ್ದ.

Advertisements

ಪಾಂಡಿ ಅಣ್ಣನಷ್ಟು ಶ್ರೀಮಂತನಲ್ಲ ಆದರೆ ವ್ಯವಸಾಯ ಮಾಡಿ ಬಂದ ಹಣದಲ್ಲೇ ಒಂದು ಉತ್ತಮ ಜೀವನ ನಡೆಸುತ್ತಿದ್ದಾನೆ.. ಇನ್ನೂ ಒಂದು ದಿನ ಸುಜಾತ ಅಕ್ಕನ ಮಗಳು ವಯಸ್ಸಿಗೆ ಬಂದಿದ್ದರು. ಈ ವಿಷಯವನ್ನು ತಾಯಿ ಶ್ವೇತಾ ಅವರು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ತಿಳಿಸಿ ಸಮಾರಂಭಕ್ಕೆ ಬರುವಂತೆ ಹೇಳುತ್ತಾರೆ. ಆನಂತರ ಮೊದಲು ಹಣವಂತ ಷಣ್ಮುಗ ಅಣ್ಣನ ಮನೆಗೆ ಬಂದ ಸುಜಾತಾ ಹೂ, ಹಣ್ಣು, ಬಳೆ, ಬೆಳ್ಳಿ ತಟ್ಟೆ ಎಲ್ಲವನ್ನು ತಮ್ಮನಿಗೆ ಕೊಟ್ಟು ಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬರುವಂತೆ ಹೇಳಿದಳು.. ಆಮೇಲೆ ಎರಡನೇ ತಮ್ಮ ಬಡವ ಪಾಂಡಿ ಮನೆಗೆ ಖಾಲಿ ಕೈಯಲ್ಲಿ ಬಂದ ಸುಜಾತ ಕರೆಯಲೋ ಬೇಡವೋ ಎಂದು ಮಗಳ ಕಾರ್ಯಕ್ರಮಕ್ಕೆ ಸುಜಾತ ಅವರು ಕರೆದು ಹೋದಳು.

ಅಕ್ಕ ತನ್ನನ್ನು ಬೇಕಾ ಬಿಟ್ಟಿ ರೀತಿಯಲ್ಲಿ ಕರೆದಳು ಎಂದು ಮನಸಿನಲ್ಲಿ ಬೇಸರ ಇಟ್ಟುಕೊಳ್ಳದೇ ಅಕ್ಕನ ಮಗಳ ಕಾರ್ಯಕ್ರಮಕ್ಕೆ ಹೋಗಲು ತಿರ್ಮಾನ ಮಾಡಿದ.. ಇನ್ನೂ ಅಕ್ಕನ ಮಗಳ ಕಾರ್ಯಕ್ರಮದ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಎಲ್ಲಾ ಅತಿಥಿಗಳು ಬಂದು ಆ ಹೆಣ್ಣು ಮಗಳಿಗೆ ನೀರು ಹಾಕಿ ಆಶಿರ್ವಾದ ಮಾಡುತ್ತಿದ್ದರು.. ಅಕ್ಕನ ಮಗಳಿಗೆ ಶ್ರೀಮಂತ ಅಣ್ಣ ಷಣ್ಮುಗ ತಂದಿದ್ದ ಉಡುಗೊರೆಗಿಂತ ಬಡವ ತಮ್ಮ ಪಾಂಡಿ ತಂದಿದ್ದ ಉಡುಗೊರೆಯೇ ಆ ಊರಿನ‌ ಜನಗಳ ಗಮನ ಸೆಳೆಯುತ್ತದೆ. ಅಷ್ಟಕ್ಕೂ ಪಾಂಡಿ ಏನು ಮಾಡಿದ್ದ ಅಂದರೆ 3 ಎತ್ತಿನ ಗಾಡಿಗಳನ್ನು ಅರೇಂಜ್ ಮಾಡಿ ಎತ್ತಿನ ಗಾಡಿಗಳಿಗೂ ಬರ್ಜರಿ ಅಲಂಕಾರ ಮಾಡಿ..

ಅಕ್ಕನ ಮಗಳು ಚಿಕ್ಕ ಹುಡುಗಿ ಆಗಿದ್ದಾಗಿಂದಲೂ ಇಲ್ಲಿಯವರೆಗೂ ಏನೆಲ್ಲಾ ವಸ್ತುಗಳನ್ನು ಉಪಯೋಗ ಮಾಡುತ್ತಿದ್ದಳೋ ಅವೆಲ್ಲವನ್ನು ಕೊಟ್ಟು 60 ಗ್ರಾಂ ಚಿನ್ನದ ಒಡವೆಗಳನ್ನು ಮತ್ತು ಆಕೆಯು ಮದುವೆಯಾದ ಬಳಿಕ ಉಪಯೋಗ ಮಾಡುವಂತಹ ಮನೆಯ ಸಾಮಾಗ್ರಿಗಳನ್ನು ಆ ಮೂರು ಎತ್ತಿನ‌ ಗಾಡಿಗಳಲ್ಲಿ ತುಂಬಿಕೊಂಡು ಬಂದು ಅಕ್ಕನ ಮಗಳಿಗೆ ಕೊಡುತ್ತಾನೆ.. ಇದನ್ನು ನೋಡಿದ ಊರಿನ ಜನರು ತಮ್ಮ ಅಂದರೇ ಈ ರೀತಿ ಇರಬೇಕೆಂದು ಮಾತನಾಡಿಕೊಳ್ಳುತ್ತಾರೆ. ಇನ್ನೂ ಅಕ್ಕ ಸುಜಾತ ಇದೆಲ್ಲವನ್ನು ನೋಡಿ ಒಂದು ಕ್ಷಣ ಮೌನವಾಗಿಬಿಡುತ್ತಾಳೆ..

ಅಣ್ಣ ಶ್ರೀಮಂತನಾದರು ಇಷ್ಟೊಂದು ಉಡುಗೊರೆ ಕೊಡಲು ಅವನ ಕೈಯಿಂದಲೇ ಅಗಲಿಲ್ಲ.. ನೀನು ಬಡವ ನಿನಗೆ ಹೇಗೆ ಸಾಧ್ಯವಾಯಿತು ಎಂದು ಕಣ್ಣೀರು ಇಡುತ್ತಾ ಪಾಂಡಿಯನ್ನು ಕೇಳುತ್ತಾಳೆ. ಆಗ ತಮ್ಮ ಪಾಂಡಿ ಅಪ್ಪ ಸಾಯುವ ಮೊದಲು ಒಂದು ಮಾತು ಹೇಳಿದ್ದ ಎಷ್ಟೇ ಕಷ್ಟ ಬಂದರು ಅಕ್ಕನನ್ನು ಕೈ ಬಿಡಬೇಡ ಎಂದು.. ಆ ಕಾರಣಕ್ಕಾಗಿಯೇ ಇಷ್ಟೆಲ್ಲ ಮಾಡಿದೆ ಎಂದು ಪಾಂಡಿ ಹೇಳುತ್ತಾನೆ. ಸ್ನೇಹಿತರೆ ನಾವು ನಮ್ಮ ಸಂಬಂಧಿಕರನ್ನು ಹಣದ ಮೂಲಕ ನೋಡಬಾರದು ಸಂಬಂಧಗಳಿಗೆ ಬೆಲೆ ಕೊಡಬೇಕು ಎಂಬುದಕ್ಕೆ ಈ ಸುಜಾತ ಷಣ್ಮುಗಂ ಪಾಂಡಿ ಅವರ ಜೀವನದಲ್ಲಿ ನಡೆದ ಈ ಘಟ‌‌ನೆ ಒಂದು ಉದಾಹರಣೆ..