Advertisements

ಲಾಕ್‌ಡೌನ್ ವೇಳೆ ಕಡಿಮೆಯಾಯ್ತು ಈ 4 ಸ್ಮಾರ್ಟ್ ಫೋನ್ ಗಳ ಬೆಲೆ ! ಯಾವ ಮೊಬೈಲ್ ಎಷ್ಟೆಷ್ಟು?ಈ ಲಿಸ್ಟ್ ನೋಡಿ

Tech

ಕರೋನಾ ವೈರಸ್ ನಿಂದಾಗಿ ದೇಶದಾದ್ಯಂತ ಮೇ 17ರವರೆಗೆ ಲಾಕ್ ಡೌನ್ ಇದೆ. ಆದರೂ ಸರ್ಕಾರಗಳು ಗ್ರೀನ್ ಮತ್ತು ಆರೆಂಜ್ ಜೋನ್ ಗಳಲ್ಲಿ ಡೆಲಿವರಿಗೆ ಅವಕಾಶ ಕೊಟ್ಟಿರುವುದು ಸ್ಮಾರ್ಟ್ ಫೋನ್ ಇಂಡಸ್ಟ್ರಿಗಳಿಗೆ ರಿಲೀಫ್ ಸಿಕ್ಕಂತಾಗಿದ್ದು, ಸ್ಮಾರ್ಟ್ ಫೋನ್ ಗಳ ಮಾರಾಟ ಹೆಚ್ಚಾಗಲಿದೆ. ಇದರ ನಡುವೆಯೇ ಸ್ಯಾಮ್ ಸಂಗ್ ಮತ್ತು ವಿವೊ ನಂತಹ ಟೆಕ್ ಕಂಪನಿಗಳು ತಮ್ಮ ಕೆಲವು ಆಯ್ದ ಸ್ಮಾರ್ಟ್ ಫೋನ್ ಗಳ ಬೆಲೆಗಳನ್ನ ಕಡಿಮೆ ಮಾಡಿವೆ. ಹಾಗಾದ್ರೆ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದಾದ ಈ ಎರಡು ಕಂಪನಿಗಳ ಸೆಲೆಕ್ಟೆಡ್ ಸ್ಮಾರ್ಟ್ ಫೋನ್ ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ..

Advertisements

ಒನ್ ಪ್ಲಸ್ 7ಟಿ ಪ್ರೊ : ಈ ಫೋನ್ ಬೆಲೆಯಲ್ಲಿ 6 ಸಾವಿರ ರೂಪಾಯಿಗಳನ್ನ ಕಡಿತ ಮಾಡಿದ್ದು, 8 GB ರ್ಯಾಮ್ ಜೊತೆಗೆ 256 GB ಸ್ಟೋರೇಜ್ ಹೊಂದಿದೆ. ಈಗ ಮಾರುಕಟ್ಟೆಯಲ್ಲಿ 47,999ರೂಗಳಿಗೆ ONE PLUS 7T PRO ಸಿಗಲಿದ್ದು, ಜಾಗತಿಕ ಈ ಕಾಮರ್ಸ್ ಸೈಟ್ ಅಮೆಜಾನ್ ಮತ್ತು ಒನ್ ಪ್ಲಸ್ ಆಫೀಶಿಯಲ್ ಸೈಟ್ ನಲ್ಲಿ ಈ ಸ್ಮಾರ್ಟ್ ಫೋನ್ ನಿಮಗೆ ದೊರಕಲಿದೆ. ಇನ್ನು ಈ ಫೋನ್ ಫಿಚರ್ಸ್ ಬಗ್ಗೆ ಹೇಳಬೇಕೆಂದರೆ, 6.67ಇಂಚ್ ಫುಲ್ AMOLED ಡಿಸ್ಪ್ಲೇ ಹೊಂದಿದ್ದು, ಇದರ ರೆಸಲ್ಯೂಶನ್ 3120×1440 ಫಿಕ್ಸಲ್ಸ್ ಇದೆ. ಇನ್ನು ಇದರ ಜೊತೆಗೆ ಸ್ಕ್ರೀನ್ ಪ್ರೊಟೆಕ್ಷನ್ ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3D ಸಪೋರ್ಟ್ ಇದೆ. ಇದರೆಲ್ಲಾದರ ಜೊತೆಗೆ ಫೋನ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲು ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 855 ಪ್ಲಸ್ ಚಿಪ್ ಸೆಟ್ ನೀಡಲಾಗಿದೆ.

iQOO 3 ಸ್ಮಾರ್ಟ್ ಫೋನ್ : iqoo ಸ್ಮಾರ್ಟ್ ಫೋನ್ ಕಂಪನಿಯು ತನ್ನ ಲೇಟೆಸ್ಟ್ ಸ್ಮಾರ್ಟ್ ಫೋನ್ ಆಗಿರುವ iqoo 3 ಮೊಬೈಲ್ ಫೋನ್ ಮೂಲ ಬೆಲೆಯಲ್ಲಿ 4 ಸಾವಿರ ರೂಪಾಯಿಗಳನ್ನ ಕಡಿತ ಮಾಡಿದೆ. ಇನ್ನು ಈಫೋನ್ 8 GB ರ್ಯಾಮ್ 128 GB ಸ್ಟೋರೇಜ್ ಇದರ ಈಗಿನ ಬೆಲೆ 34,990ರೂಪಾಯಿ ಇದೆ. ಇನ್ನು ಈ ಫೋನ್ ಮೂಲ ಬೆಲೆ ಇದ್ದದ್ದು 38,990ರೂಗಳು.ಇನ್ನು 8 GB ರ್ಯಾಮ್ 250gbಸ್ಟೋರೇಜ್ ವೆರೈಟಿ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕೂಡ 4 ಸಾವಿರ ರುಗಳನ್ನ ಕಡಿತ ಮಾಡಲಾಗಿದೆ. ಇನ್ನು ಈ ವೆರೈಟಿ ಫೋನ್ ನ ಮೂಲಬೆಲೆ 41,990ಇದ್ದು, ನಿಮಗೆ 4 ಸಾವಿರ ಕಟ್ ಆಗಿ 37,990ರೂಗಳಿಗೆ ಸಿಗಲಿದೆ. ಇನ್ನು ಇದೇ ಸ್ಮಾರ್ಟ್ ಫೋನ್ ನ ಮತ್ತೊಂದು ವೆರೈಟಿ 12GB ರ್ಯಾಮ್ 256gbಸ್ಟೋರೇಜ್ ಹೊಂದಿದ್ದು, 5G ವೆರಿಯಂಟ್ ಫೋನ್ ಮೂಲ ಬೆಲೆ 44,990ರೂ ಇದ್ದು 2 ಸಾವಿರ ಕಡಿತಗೊಂಡು 46,990ರೂಗಳಿಗೆ ಸಿಗಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ M21 : ಸ್ಯಾಮ್ ಸಂಗ್ ಕಂಪನಿಯು ಮತ್ತೆ ಗ್ಯಾಲಕ್ಸಿ M21 ಫೋನ್ ಬೆಲೆಯಲ್ಲಿ ಮತ್ತೆ ಇಳಿಕೆ ಮಾಡಿದೆ. 13,199ರೂ ಇದ್ದ ಫೋನ್ ಈಗ 12,699ರೂ ಗಳಿಗೆ ನಿಮ್ಮ ಕೈ ಸೇರಲಿದೆ. ಇನ್ನು ಈ ಫೋನ್ 6.4ಇಂಚ್ ಫುಲ್ ಹೆಚ್ ಡಿ ಪ್ಲಸ್ ಸೂಪರ್ AMOLED ಡಿಸ್ಪ್ಲೇ ಹೊಂದಿದ್ದು, 1080×2340 ಫಿಕ್ಸಲ್ಸ್ ರೆಸಲ್ಯೂಶನ್ ಇದರಲ್ಲಿದೆ. ಸ್ಕ್ರೀನ್ ಪ್ರೊಟೆಕ್ಷನ್ ಗಾಗಿ ಗೊರಿಲ್ಲಾ ಗ್ಲಾಸ್ 3 ಕೂಡ ಇದೆ. ಇನ್ನು ಈ ಗ್ಯಾಲಕ್ಸಿ M21ನಲ್ಲಿ Exynos 9611 ಪ್ರೊಸೆಸರ್ ಜೊತೆಗೆ Mali-G72,MP3,GPU ಕೂಡ ಇದೆ.

ವಿವೊ S1 ಮೊಬೈಲ್ : ಇನ್ನು ವಿವೊ ಕೂಡ ಇತ್ತೀಚೆಗಷ್ಟೇ ಈ ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಇನ್ನು 4GB ರ್ಯಾಮ್ 128 GB ಸ್ಟೋರೇಜ್ ಇದ್ದು, 17,990ರೂಗಳು ಇದ್ದ ಈ ಮೊಬೈಲ್ ಈಗ 16,990ರೂ ಗಳಿಗೆ ಸಿಗಲಿದೆ. ಇನ್ನು 6 GB ರ್ಯಾಮ್ 64 GB ಸ್ಟೋರೇಜ್ ಇರುವ Vivo S1 ಫೋನ್ 17,990ರೂ ಹಾಗೂ 6 GB ರ್ಯಾಮ್ 128GB ಸ್ಟೋರೇಜ್ ಹೊಂದಿರುವ ವಿವೊ S1 ಫೋನ್ 19,990ರೂಗೆ ಸಿಗಲಿದೆ. ಇನ್ನು 6.38ಇಂಚ್ ಫುಲ್ ಹೆಚ್ ಡಿ ಡಿಸ್ಪ್ಲೇ, ಮೀಡಿಯಾ ಟೆಕ್, Helio P65 ಪ್ರೊಸೆಸರ್, ಮತ್ತು ಮೂರೂ ಕ್ಯಾಮರಾಗಳು ಈ ಫೋನ್ ನಲ್ಲಿವೆ.