Advertisements

ರಾಮನಿಗೆ ಮಾತ್ರ ಗೊತ್ತಿದ್ದ ರಹಸ್ಯವನ್ನ ಹನುಮಂತನಿಗೆ ಹೇಳಿದ ಸೀತಾ ದೇವಿ ! ಆ ರಹಸ್ಯ ಏನು ಗೊತ್ತಾ?

Adyathma

ರಾಮಾಯಣ ಎಂದರೆ ರಾಮನ ಬಳಿಕ ಮೊದಲಿಗೆ ನೆನಪು ಬರುವುದು ಹನಮಂತ. ಸಂಕಟ ಮೋಚನ ಹನುಮಂತ ಇದ್ದಕಡೆ ಎಲ್ಲರಿಗೂ ಆನಂದವೇ ಸರಿ. ರಾಮನಿಂದ ಹಿಡಿದು ಸುಗ್ರೀವ, ವಿಭೀಷಣನವರೆಗೂ ಎಲ್ಲರಿಗೂ ಆನಂದ ತಂದವನು ಮುಖ್ಯಪ್ರಾಣ ಆಂಜನೇಯ. ಇನ್ನು ಹನುಮಂತನ ಪರಾಕ್ರಮದ ಬಗೆ ಹೇಳುವಷ್ಟು ನಾವು ಶಕ್ತರಲ್ಲ. ಇನ್ನು  ಸೀತಾ ಮಾತೆ ರಾಕ್ಷಸ ರಾವಣನ ಲಂಕಾಪಟ್ಟಣದಲ್ಲಿ ಬಂದಿಯಾಗಿದ್ದ ವೇಳೆ ಹನುಮಂತ ಸಮುದ್ರ ಹಾರುತ್ತಾ ಲಂಕೆಗೆ ಬರುತ್ತಾನೆ.

Advertisements

ಸೀತಾದೇವಿಯನ್ನು ಹುಡುಕಿಕೊಂಡು ಲಂಕಾ ಪಟ್ಟಣದಲ್ಲಿ ಓಡಾಡುತ್ತಿರುವಾಗ ಅಶೋಕ ವನದಲ್ಲಿ ರಾಕ್ಷಸ ಮಹಿಳೆಯರ ಪಹರೆ ಮಧ್ಯೆ ಸೀತಾದೇವಿ ಇರುವುದು ಹನುಮಂತನ  ಕಣ್ಣಿಗೆ ಬೀಳುತ್ತದೆ. ಆದರೆ ತಕ್ಷಣವೇ ಸೀತಾ ದೇವಿ ಬಳಿ ಹೋಗದ ಹನುಮಂತ ಅಲ್ಲೇ ಇದ್ದ ಮರವೊಂದರ ಮೇಲೆ ಕುಳಿತು ರಾಮ ಜಪ ಮಾಡಲು ಶುರು ಮಾಡುತ್ತಾನೆ. ದಶಕಂಠ ರಾವಣನ ಸಾಮ್ರಾಜ್ಯದಲ್ಲಿ ರಾಮ ನಾಮ ಜಪ ಕೇಳಿದ ಸೀತಾ ದೇವಿ ಅಚ್ಚರಿಯ ಚಕಿತಳಾಗಿ ಮರದ ಮೇಲಿದ್ದ ಹನುಮಂತನನ್ನ ನೋಡಿ ನೀನು ಯಾರೆಂದು ಕೇಳುತ್ತಾಳೆ. ಆಗ ಆಂಜನೇಯನು ಗುರುತಿಗಾಗಿ ರಾಮ ನೀಡಿದ್ದ ಮುದ್ರಿಕೆಯನ್ನ ಸೀತಾ ದೇವಿಗೆ ನೀಡಿ ಶ್ರೀರಾಮನು ನನ್ನನ್ನ ಕಳಿಸಿದ್ದಾನೆ ತಾಯಿ ಎಂದು ಹೇಳುತ್ತಾನೆ. ಮುದ್ರಿಕೆಯನ್ನ ಕಂಡ ಸೀತೆ ಸಂತೋಷಭರಿತಳಾಗಿ ತನ್ನ ಬಳಿ ಇದ್ದ ಚೂಡಾಮಣಿಯನ್ನ ಹನುಮಂತನಿಗೆ ಕೊಟ್ಟು ಯಾರಿಗೂ ತಿಳಿಯದ ರಹಸ್ಯವಾದ ಕತೆಯೊಂದನ್ನ ಹೇಳುತ್ತಾಳೆ. ಅದುವೇ ಶ್ರೀರಾಮನು ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ ಕತೆ.

ಶ್ರೀರಾಮನು, ಸೀತಾ ದೇವಿ ಲಕ್ಷ್ಮಣ ಸಮೇತ ವನವಾಸದಲ್ಲಿದ್ದ ವೇಳೆ ಚಿತ್ರಕೂಟ ಎಂಬ ಪರ್ವತದಲ್ಲಿ ತಂಗಿರುತ್ತಾರೆ. ಒಂದು ದಿನ ರಾಮ ಸೀತಾ ದೇವಿಯ ತೊಡೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿರುತ್ತಾನೆ. ಇದೇ ವೇಳೆ ಇಂದ್ರನ ಮಗ ಜಯಂತ ಕಾಗೆಯ ರೂಪದಲ್ಲಿ ಬಂದು ಸೀತೆಯ ಎದೆಯನ್ನ ಕುಕ್ಕಲು ಪ್ರಾರಂಭ ಮಾಡುತ್ತಾನೆ. ಆದರೆ ರಾಮ ನಿದ್ದೆಯಲ್ಲಿದ್ದಾನೆ. ಅಲ್ಲಾಡಿದರೆ ರಾಮನಿಗೆ ಎಚ್ಚರಿಕೆ ಆಗುತ್ತದೆ. ಸುಮ್ಮನೆ ಕುಳಿತಿದ್ದಾರೆ ಕಾಗೆ  ಕುಕ್ಕುವುದನ್ನ ನಿಲ್ಲಿಸುವುದಿಲ್ಲ ಎಂಬ ಹೆದರಿಕೆ ಬೇರೆ. ಇನ್ನು ಸೀತೆಯ ಎದೆಯಿಂದ ರಕ್ತ ಸುರಿಯಲಿ ಶುರುವಾಗುತ್ತೆ. ಈಗಿದ್ದಾಗಲೇ ರಾಮನಿಗೆ ಎಚ್ಚರವಾಗುತ್ತೆ. ಕಾಗೆಯ ಉಪದ್ರವಕ್ಕೆ ಕೋಪಗೊಂಡ ರಾಮ ಅಲ್ಲೇ ಇದ್ದ ಹುಲ್ಲುಕಡ್ಡಿಯನ್ನ ಬ್ರಹ್ಮಾಸ್ತ್ರವನ್ನ ಮಂತ್ರಿಸಿ ಪ್ರಯೋಗ ಮಾಡುತ್ತಾನೆ. ರಾಮ ಬಾಣದಿಂದ ತಪ್ಪಿಸಿಕೊಳ್ಳಲು ಕಾಗೆ ಸ್ವರ್ಗ, ಬ್ರಹ್ಮ ಲೋಕ, ಕೈಲಾಸ ಸೇರಿದಂತೆ ಇಡೀ ಬ್ರಹ್ಮಾಂಡವನ್ನು ಸುತ್ತುತ್ತಾನೆ ಯಾರೂ ಇದರ ಸಹಾಯಕ್ಕೆ ಬರುವುದಿಲ್ಲ.

ಕೊನೆಗೆ ಶ್ರೀರಾಮನ ಪದವೇ ಗತಿಯೆಂದು ರಾಮನ ಕಾಲುಗಳಿಗೆ ಬಿದ್ದು ನನ್ನನ್ನ ರಕ್ಷಿಸು ಎಂದು ಶರಣಾಗುತ್ತದೆ. ಕೊನೆಗೆ ಕಾಗೆಯ ಬಳಗಣ್ಣಿಗೆ ಮಾತ್ರ ಹಾನಿಯಾಗುವಂತೆ ಶ್ರೀರಾಮ ಮಾಡುತ್ತಾನೆ. ಒಂದು ಕಣ್ಣು ಕಳೆದುಕೊಂಡ  ಕಾಗೆಗೆ  ಶ್ರೀರಾಮ ಪ್ರಾಣ ಭಿಕ್ಷೆ ನೀಡುತ್ತಾನೆ. ಹಾಗಾಗಿ ಇಂದಿಗೂ ಕಾಗೆಗಳಿಗೆ ಗೋಲ ಎರಡಿದ್ದರೂ ಕಣ್ಣು ಕಾಣುವುದು ಒಂದೇ. ಈ ರಹಸ್ಯ ಕಥೆ ನನ್ನನ್ನ ಬಿಟ್ಟರೆ ರಾಮನಿಗೆ ಮಾತ್ರ ತಿಳಿದಿದ್ದೆ. ಈ ಕಥೆಯನ್ನು ನೀನು ರಾಮನಿಗೆ ಹೇಳು ಅವನು ಖುಷಿಯಾಗುತ್ತಾನೆ. ಹಾಗೂ ಅದಷ್ಟು ಬೇಗ ಬಂದು ರಾವಣನನ್ನ ಸಂಹಾರ ಮಾಡಿ ತನ್ನನ್ನು ಕರೆದೊಯ್ಯಲು ಹೇಳು, ಎಂದು ಹೇಳಿ ಸೀತಾದೇವಿ ಹನುಮಂತನನ್ನ ಕಳುಹಿಸಿಕೊಡುತ್ತಾಳೆ