Advertisements

ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯ ದಿನಾಂಕವನ್ನು ಸೂಚಿಸಿದ ರಾಜ್ಯ ಸರ್ಕಾರ.

News

ಕೊರೊನಾ ರೋಗದಿಂದ ರಾಜ್ಯದ Sslc ಪರೀಕ್ಷೆಯನ್ನು ಮುಂದೂಡಲಾಗಿತ್ತು ಈಗ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದ ಜೂನ್ 25ರಿಂದ ಜುಲೈ 4ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ 2000 ಮತ್ತು ಜೂನ್ 18 ಪಿಯುಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ ರಾಜ್ಯದಲ್ಲಿ ಸುಮಾರು 8 ಲಕ್ಷದ 48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Advertisements

ಅದಕ್ಕೆ 2,879 ಪರೀಕ್ಷಾ ಕೇಂದ್ರಗಳು 43,750 ಕೊಠಡಿಗಳನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ಬಳಸಲಾಗುತ್ತದೆ. ಕೊರೊನಾ ಮಧ್ಯೆ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿಯಮಗಳನ್ನು ಆನಂದಿಸಿ ಅನುಸರಿಸುತ್ತಿವೆ ಆರೋಗ್ಯ ಇಲಾಖೆಯ ಸಲಹೆ ಪಡೆದಿರುವ ಶಿಕ್ಷಣ ಇಲಾಖೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಪಾಡಲು ಬೆಂಚುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಪರೀಕ್ಷೆಯ ಮೊದಲು ಸ್ಯಾನಿಟೈಸರ್ ನಿಂದ ಪರೀಕ್ಷಾ ಕೊಠಡಿಯನ್ನು ತೊಳೆಸಲಾಗುವುದು.

ಪ್ರತಿ ವಿದ್ಯಾರ್ಥಿಗಳು ಮಾಸ್ಕನ್ನು ಧರಿಸಲೇಬೇಕು ಮಾಸ್ಕನ್ನು ರಾಮಕೃಷ್ಣ ಮಿಷನ್ ಮತ್ತು ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೀಡಲು ಮುಂದಾಗಿದೆ, ಸ್ಯಾನಿಟೈಸರ್ ನೀಡಲು ಎಮ್ ಏನ್ ಸಿ ಕಂಪನಿ ಮುಂದಾಗಿದೆ,ಪರೀಕ್ಷೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡರೆ ಅಂತ ವಿದ್ಯಾರ್ಥಿಗಳನ್ನು ಸಪರೇಟ್ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು. ಊರಿನಲ್ಲಿರುವ ಕಾರ್ಮಿಕರ ಮಕ್ಕಳು ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಬರೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ತಿಳಿಸಿದರು.