Advertisements

ದಾರಿಯಲ್ಲಿ ಪಕೋಡ ಮಾರುತಿದ್ದ ಹುಡುಗ, ಬಂಕ್ ನಲ್ಲಿ ಪೆಟ್ರೋಲ್ ಹಾಕ್ತಿದ್ದ ಹುಡುಗ.. ಸಾವಿರಾರು ಕೋಟಿಗೆ ಒಡೆಯನಾಗಿದ್ದು ಹೇಗೆ ಗೊತ್ತಾ?

Kannada Mahiti

ಧೀರುಬಾಯಿ ಅಂಬಾನಿ.. ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗುವ ಸಕ್ಸಸ್ಫುಲ್ ಬ್ಯುಸಿನೆಸ್ ಮ್ಯಾನ್.. ಹಾಗಂತ ಧೀರುಬಾಯಿ ಅಂಬಾನಿ ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ, ಬಡತನದ ಹೊದಿಕೆಯಲ್ಲಿ ನಾಳೆಯ ಕನಸುಗಳ ಜೊತೆ, ಹೊತ್ತಿನ ಊಟಕ್ಕೂ ಪರದಾಡುತ್ತಾ ಇರುವಾಗ ಕಿ’ತ್ತುತಿನ್ನುವ ಬಡತನದ ಮಧ್ಯೆಯೇ ಸಾಧನೆಯ ಕನಸು ಕಂಡ ಅಚಲವಾದ ಆತ್ಮಶಕ್ತಿ ಇಟ್ಟುಕೊಂಡು ಬೆಳೆದ ಛಲದಂಕಮಲ್ಲ. ಆರಂಭದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅಂಬಾನಿ ಪಕೋಡ ಮಾರಿ ಬದುಕು ಸಾಗಿಸುತ್ತಾರೆ. ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡಿ ಹೊತ್ತಿನೂಟಕ್ಕೆ ಶ್ರಮಿಸುತ್ತಿರುತ್ತಾರೆ. ಬಳಿಕ ಅದೇ ಬಂಕ್ ಅಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಾರೆ.

[widget id=”custom_html-3″]

Advertisements

ಮುಂದೆ ಒಂದು ಕಂಪನಿಯ ರವಾನೆ ಗುಮಾಸ್ತನಾಗಿ ಕೆಲಸ ಮಾಡ್ಲಿಕ್ಕೆ ಶುರು ಮಾಡ್ತಾರೆ. ಬಳಿಕ ಬಂದರಿನಲ್ಲಿ ತೈಲ ತುಂಬುವ ಘಟಕದ ಉಸ್ತುವಾರಿಯಾಗಿ ಕೆಲಸ ಮಾಡಲು ಧೀರುಬಾಯಿ ಆರಂಭಿಸ್ತಾರೆ. ಆಗ ತೈಲಗಳ ಬಗೆಗೆ ಧೀರುವಿಗೆ ಮಾಹಿತಿ ಸಿಗುತ್ತೆ. ಇನ್ನು ಇದೇ ಹೊತ್ತಲ್ಲಿ ರಯಲ್ ನಾಣ್ಯಗಳನ್ನು ಖರೀದಿಸಿ ಮಾರೋದಕ್ಕೆ ಧೀರುಬಾಯಿ ಶುರು ಮಾಡ್ತಾರೆ,. ಈ ರಯಲ್ ನಾಣ್ಯಗಳಿಗೆ ಲಂಡನ್ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದಿತ್ತು. ಇದನ್ನು ಅರ್ಥ ಮಾಡಿಕೊಂಡು ಮಾರಾಟ ಮಾಡಿ ಸಖತ್ ಹಣವನ್ನು ಧೀರುಬಾಯಿ ಮಾಡ್ತಾರೆ. ಮುಂದೆ 10 ವರ್ಷಗಳಲ್ಲಿ ರಿಲೇಯನ್ಸ್ ಕಮರ್ಷಿಯಲ್ ಕಾರ್ಪರೇಷನ್ ಅನ್ನು ಮುಂಬೈನಲ್ಲಿ ಶುರು ಮಾಡ್ತಾರೆ.

[widget id=”custom_html-3″]

ಆರಂಭದಲ್ಲಿ ಬರೇ 15 ಸಾವಿರ ಬಂಡವಾಳ ಹಾಕಿ ಒಂದಷ್ಟು ಟೇಬಲ್ ಕುರ್ಚಿ ಇಟ್ಟು ಬ್ಯುಸಿನೆಸ್ ಆರಂಭವಾಗುತ್ತೆ. ವ್ಯವಹಾರ ಕ್ಲಿಕ್ ಆಗ್ತಾಯಿದ್ದ ಹಾಗೇ ಅಹ್ಮದಾಬಾದ್ ಅಲ್ಲಿ ಮೊದಲ ಜವಳಿ ಗಿರಿಣಿ ಅಂಗಡಿ ಓಪನ್ ಮಾಡಿ ಟೆಕ್ಸ್ಟೈಲ್ ಕ್ಷೇತ್ರಕ್ಕೆ ಸಹ ಧೀರುಬಾಯಿ ಹೆಜ್ಜೆ ಹಾಕಿದ್ರು. ಮುಂದೆ ಧೀರುಬಾಯಿ ಅಂಬಾನಿಯವ ರಿಲೆಯೇನ್ಸ್ ಕಂಪನಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ಷೇತ್ರದಲ್ಲಿಯೂ ಸಹ ತನ್ನ ಛಾಪನ್ನು ಮೂಡಿಸ್ತಾ ವಿವಿಧ ಕ್ಷೇತ್ರಗಳಲ್ಲಿ ಹೆಜ್ಜೆಯಿಡುತ್ತಾ ಯಶಸ್ವಿಯಾಗಿ ಸಾಗುತ್ತೆ.

[widget id=”custom_html-3″]


ಧೀರುಭಾಯಿ ಅಂಬಾನಿಯವರ ಸಾಧನೆಗೆ ಅನೇಕ ಫ್ರಶಸ್ತಿಗಳು ಸಹ ಅವರನ್ನು ಮುಡಿಗೇರಿಸಿಕೊಂಡು ಬಂದಿದೆ. ಇನ್ನು ಇವರ ಮಕ್ಕಳಾದ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಇಬ್ಬರು ಸಹ ಒಂದೇ ಆಯಾಮದಲ್ಲಿ ಆಲೋಚಿಸಿದ್ರೆ ಇವರ ಕಂಪನಿಯನ್ನು ಇನ್ನಷ್ಟು ಎತ್ರಕ್ಕೆ ತೆಗೆದುಕೊಂಡು ಹೋಗಲಿಕ್ಕೆ ಸಾಧ್ಯವಾಗುತ್ತಿತ್ತು. ಆದ್ರೆ ಇವರಿಬ್ಬರ ಆಲೋಚನಾಶೈಲಿ ವಿರುದ್ಧವಾಗಿದೆ ಅಂತ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ..