Advertisements

7,8,9ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಕ್ಷೆ ಇಲ್ಲ. SSLC, PUC ಪರೀಕ್ಷೆ ಬಗ್ಗೆ ಎಪ್ರಿಲ್ 14ರ ನಂತರ ನಿರ್ದಾರ.

News

ಕೇಂದ್ರ ಸರ್ಕಾರದ ಆದೇಶದಂತೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ರಾಜ್ಯಗಳಲ್ಲೂ ಸಹ ಲಾಕ್ ಡೌನ್ ಇರುವ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಗೊಂದಲಗಳು ಇವೆ. ಈ ಕಾರಣ ಪೇಸ್ ಬುಕ್ ಲೈವ್ ವೀಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳ ಗೊಂದಲಗಳಿಗೆ ಸ್ವಷ್ಟಣೆ ನೀಡಿದ್ದಾರೆ.

Advertisements

ಇನ್ನೂ ಸಚಿವರು ಪರೀಕ್ಷೆಗಳ ಬಗ್ಗೆ ಮಾತನಾಡಿದ್ದು 7,8,9, ಹಾಗೂ ಎಸ್,ಎಸ್,ಎಲ್,ಸಿ ಪಿಯುಸಿ ಪರೀಕ್ಷೆಯ ಬಗ್ಗೆ ಕುರಿತು ವಿದ್ಯಾರ್ಥಿಗಳಲ್ಲಿ ಇರುವ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಹೌದು 7,8 ಹಾಗೂ 9ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಸುವಂತಿಲ್ಲ. 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ನೇರವಾಗಿ ಮುಂದಿನ‌ ತರಗತಿಗೆ ಪಾಸ್ ಮಾಡಿ ಕಳುಹಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಹೆಚ್ಚು ಗೊಂದಲ ಉಂಟಾಗಿರುವುದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು. ಹೌದು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡುವುದಿಲ್ಲ. ಹೊಸ ವೇಳಾಪಟ್ಟಿಯನ್ನು ಎಪ್ರಿಲ್ 14 ನಂತರ ಬಿಡುಗಡೆ ಮಾಡಲಾಗುತ್ತೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಬಾಕಿ ಇದ್ದು ಅದನ್ನು ರದ್ದು ಮಾಡುವುದಿಲ್ಲ.

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆಯೇ ವೇಳಾಪಟ್ಟಿ ಸಿದ್ದ ಮಾಡಿ ಎಪ್ರಿಲ್ 14 ರ ನಂತರ ವೇಳಾಪಟ್ಟಿ ಪ್ರಕಟ ಮಾಡಲಾಗುತ್ತದೆ. ಎಪ್ರಿಲ್ 14 ರ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸುರೇಶ್ ಕುಮಾರ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಮಕ್ಕಳು ಪರೀಕ್ಷೆ ಇಲ್ಲ ಎಂದು ಹೊರಗಡೆ ಎಲ್ಲೂ ಹೋಡಾಡಬೇಡಿ. ಕೊರೋನಾ ವೈರಸ್ ಇದೆ ಮನೆಯಲ್ಲೆ ಇರಿ. ಪರೀಕ್ಷೆ ಇಲ್ಲ ಎಂದು ಸುಮ್ಮನೆ ಸಮಯ ಕಳೆಯುವುದು ಬೇಡ. ನಿಮಗೆ ಹಲವು ವಿಚಾರಗಳು, ವಿಷಯಗಳು ತಿಳಿದುಕೊಳ್ಳಲು ಅವಕಾಶವಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ದೇಶ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದೆ ಸಹಕರಿಸಿ ಎಂದು ಶಿಕ್ಷಣ ಸಚೀವ ಸುರೇಶ್ ಕುಮಾರ್ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.