Advertisements

KGF 2 ನಲ್ಲಿ ಕನ್ನಡ ಖ್ಯಾತ ನಟ ಇಲ್ಲ, ಅವರ ಬದಲಾಗಿ ಯಾರು ಇದ್ದಾರೆ ಗೊತ್ತಾ! ಕನ್ನಡಿಗರು ಫುಲ್ ಗರಂ.

Cinema

ನಮಸ್ತೆ ಸ್ನೇಹಿತರೆ ಇಡೀ ಭಾರತವೇ ಕನ್ನಡ ಚಿತ್ರವನ್ನು ತಿರುಗಿ ನೋಡುವಂತೆ ಮಾಡಿದ್ದು ಕೆ.ಜಿ.ಎಫ್ ಸಿನಿಮಾ, ಈ ಸಿನಿಮಾ ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ದೂಳೆಬ್ಬಿಸಿದೆ ಅಷ್ಟರ ಮಟ್ಟಿಗೆ ಈ ಸಿನಿಮಾ ಹಿಟ್ ಕಂಡಿದೆ, ಕೆ.ಜಿ.ಎಫ್ 1 ಸಿನಿಮಾ ಹಿಟ್ ಕಂಡ ನಂತರ ಈಗ ಕೆ.ಜಿ.ಎಫ್ 2 ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಕೆ.ಜಿ.ಎಫ್ ಸಿನಿಮಾ ಪ್ರಶಾಂತ್ ನಿಲ್ ಅವರ ಡೈರೆಕ್ಷನ್ ನಲ್ಲಿ ಮೂಡಿ ಬಂದಿದ್ದು ಈ ಚಿತ್ರದಲ್ಲಿ ನಟನಾಗಿ ಯಶ್, ಹಾಗೂ ಇನ್ನಿತರ ಪಾತ್ರಗಳಲ್ಲಿ ಖ್ಯಾತ ನಟ ಅನಂತ್ ನಾಗ್ ಸೇರಿದಂತೆ ಇನ್ನೂ ಹಲವು ನಟರು ಈ ಸಿನಿಮಾ ದಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಈಗ ಕೆಜಿಎಫ್ ವಿಚಾರವಾಗಿ ಸುದ್ದಿ ಒಂದು ಹರಿದಾಡುತ್ತಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಯಾಂಡಲ್ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಈ ಸುದ್ದಿ ಹರಡಿದೆ.

Advertisements

ಹೌದು ಸ್ನೇಹಿತರೆ ಕೇಜಿಎಫ್ ಒಂದರಲ್ಲಿ ಪ್ರಖ್ಯಾತಿ ಪಡೆದಿದ್ದ ಒಬ್ಬ ಕನ್ನಡದ ಹೆಮ್ಮೆಯ ಖ್ಯಾತ ನಟನ ಪಾತ್ರವನ್ನು ರಿಪ್ಲೇಸ್ ಮಾಡುತ್ತಿರೋ ವಿಚಾರವಾಗಿ ಕನ್ನಡಿಗರ ಕಿಚ್ಚಿಗೆ ಕಾರಣವಾಗಿದೆ. ಕೆಜಿಎಫ್ ಒಂದರಲ್ಲಿ ಆನಂದ್ ಇಂಗಳಗಿ ಪಾತ್ರವನ್ನು ನಿಭಾಹಿಸಿದ್ದ ಅನಂತ್ ನಾಗ್ ಅವರ ಪಾತ್ರವು ಎಲ್ಲರಿಗು ಮೆಚ್ಚುಗೆಯಾಗಿತ್ತು ಆದರೆ ಈಗ ಅವರ ಬದಲಾಗಿ ಪ್ರಕಾಶ್ ರಾಜ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಇದು ಸರಿಯಿಲ್ಲ ಎಂದು ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಜಿಎಫ್ ಚಿತ್ರತಂಡಕ್ಕೆ ಒಂದು ಮನವಿ ದಯಮಾಡಿ ಈ ಪಾತ್ರಕ್ಕೆ ಅನಂತ್ ನಾಗ್ ಸರ್ ಇರುವುದು ಉತ್ತಮ ಆ ಪಾತ್ರದಲ್ಲಿ ಅವರ ನಟನೆ ಅತ್ಯದ್ಭುತ ಈ ಪಾತ್ರದ ಬಗ್ಗೆ ಬೇರೆ ಯಾರಾದರೂ ಮಾಡಿದರೆ ನಾವು ಈ ಸಿನಿಮಾವನ್ನು ನೋಡುವುದಿಲ್ಲ ದಯಮಾಡಿ ಕರೆತನ್ನಿ ಇಲ್ಲವಾದಲ್ಲಿ ನಾವು ಈ ಸಿನಿಮಾವನ್ನು ಬಹಿಷ್ಕರಿಸಲಿದ್ದೇವೆ ನೋಡೋಣ ನಿನ್ನಿಂದ ಆಗಿದ್ದು ನೀವು ನೋಡಿ ನಮ್ಮಿಂದಾಗದು ನಾವು ಮಾಡಿ ತೋರಿಸುತ್ತೇವೆ ಎಂದು ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಕೆಜಿಎಫ್ ಒಂದರಲ್ಲಿ ಇಳಗಂಗಿ ಪಾತ್ರದಲ್ಲಿ ನಟಿಸಿರುವ ಅನಂತ್ ನಾಗ್ ಅವರು ಮುಂದಿನ ಕಥೆಯನ್ನು ನನ್ನ ಶಿಷ್ಯ ಎಕ್ ಪ್ಲೈನ್ ಮಾಡುತ್ತಾರೆ ಅಂತ ಹಿಂಟ್ ಕೊಟ್ಟು ಹೋಗ್ತಾರೇ. ಶಿಷ್ಯನ ಪಾತ್ರದಲ್ಲಿ ಪ್ರಕಾಶ್ ರೈ ಅವರು ನಟಿಸುತ್ತಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.