ನಮಸ್ತೇ ಸ್ನೇಹಿತರೇ, ಈ ಜಗತ್ತಿನಲ್ಲಿ ಹಲವಾರು ರೀತಿಯ ವಿಚಿತ್ರ ಕಳ್ಳರಿದ್ದಾರೆ. ತಾವು ಕಳ್ಳತನ ಮಾಡಿದ ವಸ್ತುಗಳ ಜೊತೆ ಆದಷ್ಟು ಬೇಗ ಕದ್ದ ಸ್ಥಳದಿಂದ ಎಸ್ಕೇಪ್ ಆದರೆ ಸಾಕು ಅಂತ ಯಾವ ಕಳ್ಳನಿಗೆ ತಾನೇ ಅನ್ನಿಸೋದಿಲ್ಲ ಹೇಳಿ..ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಇವನು ದೇವಾಲಯವೊಂದರಲ್ಲಿ ಕದಿಯಲು ಹೋಗಿ ಆತ ಮಾಡಿರುವ ಕೆಲಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ಈ ವಿಚಿತ್ರವಾದ ಘಟನೆ ಮಧ್ಯಪ್ರದೇಶದ ದೇವಾಲಯವೊಂದರಲ್ಲಿ ನಡೆದಿದೆ. ಹೌದು, ದೇವಾಲಯವೊಂದರಲ್ಲಿ ಕದಿಯಲು ಸ್ಕೆಚ್ ಹಾಕಿದ ಕಳ್ಳ ಆ ದೇವಸ್ಥಾನದ ಬಾಗಿಲನ್ನ ಮುರಿದು ಒಳ ಪ್ರವೇಶ ಮಾಡಿದ್ದಾನೆ.
ಇನ್ನು ಬೆಲೆಬಾಳುವ ವಸ್ತುಗಳನ್ನ ಇಟ್ಟಿದ್ದ ದೇವಸ್ಥಾನದ ಕೊನೆಯ ಬಾಗಿಲನ್ನು ಸಹ ಮುರಿದು ಅಲ್ಲಿದ್ದದ್ದನ್ನೆಲ್ಲಾ ಗಂಟು ಕಟ್ಟಿ ಇನ್ನೇನು ಅಲ್ಲಿಂದ ಹೊರಡಬೇಕು ಅನ್ನುವಷ್ಟರಲ್ಲಿ ಆ ಕಳ್ಳನಿಗೆ ಅಲ್ಲಿಯೇ ನಿದ್ದೆ ಬಂದಿದ್ದು ಅಲ್ಲಿ ಮಂಚವೊಂದು ಇರುವುದು ಗಮನಿಸಿದ್ದಾನೆ. ಬಳಿಕ ಆ ಕೊನೆಯ ಬಾಗಿಲ ಚಿಲಕ ಹಾಕಿಕೊಂಡು ಅದೇ ಮಂಚದ ಮೇಲೆ ಮಲಗಿ, ಗಾಢವಾಗಿ ನಿದ್ರೆ ಮಾಡಿದ್ದಾನೆ. ವಿಚಿತ್ರ ಎಂದರೆ ಅವನಿಗೆ ಬೆಳಿಗ್ಗೆಯವರೆಗೂ ಎಚ್ಚರಿಕೆಯೇ ಆಗಿಲ್ಲ. ಇನ್ನು ಬೆಳಿಗ್ಗೆ ದೇವಸ್ಥಾನಕ್ಕೆ ದೇವರ ಪೂಜೆ ಮಾಡಲೆಂದು ಬಂದ ಪೂಜಾರಿ ದೇವಾಲಯದ ಬೀಗವನ್ನ ಮುರಿದಿರುವುದನ್ನ ಕಂಡು ಗಾಬರಿಗೊಂಡಿದ್ದಾನೆ. ಇನ್ನು ದೇವಸ್ಥಾನದ ಒಳಗಿನ ರೂಮ್ ಲಾಕ್ ಹಾಕಿದೆ ಎನ್ನುವುದನ್ನ ನೋಡಿ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ನಡೆದಿರುವ ವಿಷಯ ತಿಳಿಸಿದ್ದಾನೆ.

ಇನ್ನು ದೇವಸ್ಥಾನದ ಬಳಿ ಬಂದ ಪೊಲೀಸರು ಒಳಗಿನಿಂದ ಲಾಕ್ ಹಾಕಿದ್ದ ಕೊನೆಯ ಬಾಗಿಲನ್ನ ಮುರಿದು ಒಳಗಡೆ ಪ್ರವೇಶ ಮಾಡಿದ್ದಾರೆ. ಇನ್ನು ಕಳ್ಳ ಮಾತ್ರ ಸ್ವಂತ ಮನೆಯಲ್ಲಿ ನಿದ್ರೆ ಮಾಡುವಂತೆ ಬೆಚ್ಚಗೆ ನಿದ್ದೆ ಮಾಡುತ್ತಿದ್ದು ಎಚ್ಚರಿಕೆಯೇ ಆಗಿರಲಿಲ್ಲ. ಬಳಿಕ ಆ ಕಳ್ಳನನ್ನ ಪೊಲೀಸರು ಎಬ್ಬಿಸಿದ್ದು, ಎದ್ದ ತಕ್ಷಣ ತನ್ನ ಮುಂದೆ ಪೊಲೀಸರು ಪ್ರತ್ಯಕ್ಷವಾಗಿರುವುದನ್ನ ಕಂಡ ಕಳ್ಳ ಇನ್ನು ತುಂಬಾ ಚಳಿ ಇದೆ. ಇನ್ನು ಸ್ವಲ್ಪ ಹೊತ್ತು ಮಲಗಿ ಕೊಳ್ಳುತ್ತೇನೆ..ಚಳಿ ಕಡಿಮೆ ಆದ ಬಳಿಕ ಪೊಲೀಸ್ ಸ್ಟೇಷನ್ ಗೆ ಹೋಗೋಣ ಎಂದು ಹೇಳಿದ್ದಾನೆ. ಇನ್ನು ಅವನ ಮಾತುಗಳನ್ನ ಕೇಳಿ ನಕ್ಕ ಪೊಲೀಸರು ಆ ಕಲ್ಲನನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಈ ಕಳ್ಳನ ನಡುವಳಿಕೆಯನ್ನ ಕಂಡ ಗ್ರಾಮಸ್ಥರು ಈ ದೇವಸ್ಥಾನದಲ್ಲಿರುವ ದೇವರೇ ಕಳ್ಳತನವಾಗದಂತೆ ಕಾಪಾಡಿದ್ದಾಳೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.