Advertisements

ಎಷ್ಟೇ ಓದಿದ್ರು ಕೈತುಂಬ ಹಣ ಮಾಡೋ ಕೆಲಸ ಸಿಗಲಿಲ್ಲ.. ಆದ್ರೆ ಈ ರೈತ ಈಗ 1 ಕೋಟಿ ಸಂಪಾದನೆ ಮಾಡ್ತಿದ್ದಾರೆ. ಅದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ರೈತ ಶ್ರಮಜೀವಿ ಈಗಾಗಿ ಒಮ್ಮೆ ಕಷ್ಟ ಅಂಥ ಭೂಮಿ ತಾಯಿಯನ್ನ ನಂಬಿ ಒಳ್ಳೆಯ ಮನಸ್ಸಿನಿಂದ ಶರಣಾದರೆ ಸಾಕು ಭೂತಾಯಿ ಆಶ್ರಯ ನೀಡಿ ಸಾಕಿ ಸಲಹುತ್ತಾಳೆ.. ಈಗೆ ಭೂಮಿ ತಾಯಿಯನ್ನ ನಂಬಿ ಲಕ್ಷ ಲಕ್ಷ ಹಣವನ್ನ ಸಂಪಾದ್ನೆ ಮಾಡಿ ಯಶಸ್ಸಿ ಜೀವನವನ್ನ ಕಟ್ಟಿಕೊಂಡಿರುವ ಈ ರೈತರ ವಾರ್ಷಿಕ ಆದಾಯವನ್ನ ಕೇಳಿದ್ರೆ ಒಂದು ಕ್ಷಣ ಶಾ’ಕ್ ಆಗ್ತೀರಾ. ವರ್ಷಕ್ಕೆ ಕೋಟಿ ಕೋಟಿ ಸಂಪಾದ್ನೆ ಮಾಡ್ತಿರೋ ಈ ರೈತನ ಯಶೋಗಾಥೆ ಇದೇ ನೋಡಿ.. ಇವರು ಮಹಾರಾಷ್ಟ್ರದ ಉಸ್ಮನಾಬಾಧ್ ನಿವಾಸಿ ರಾಜ್ ಶೇಖರ್ ಪಾಟೀಲ್. ಪದವಿದಾರರಾದ್ರು ಸರಿಯಾದ ಉದ್ಯೋಗ ಸಿಗದ ಕಾರಣ ಸಾಮಾಜಿಕ ಕಾರ್ಯಕರ್ತ ಅಣ್ಣಾ ಅಜಾರೆ ಬಳಿ ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸಕ್ಕೆ ಸೇರಿಕೊಳ್ಳುತ್ತಾರೆ..

[widget id=”custom_html-3″]

Advertisements

ತಿಂಗಳಿಗೆ 2 ಸಾವಿರ ಸಂಭಳವನ್ನು ಕೂಡ ಪಡೆಯುತ್ತಿರುತ್ತರೆ. ನಾಲ್ಕೈದು ವರ್ಷ ಅವರ ಬಳಿ ಕೆಲಸ ಮಾಡಿದ್ರಿಂದ ಕೃಷಿಯಲ್ಲಿ ಮಿತ ಜಲ ಬಳಕೆ ಸೇರಿದಂತೆ ತೋಟಗಾರಿಕೆಯ ಮಾಹಿತಿ ಪಡೆದ ರಾಜ್ ಶೇಖರ್ ಅವರಿಗೆ ಹೊಳೆದಿದ್ದು ಬಿದರಿನ ಐಡಿಯಾ. ಇದೇ ಐಡಿಯಾ 2 ಸಾವಿರ ಸಂಭಳ ಪಡೆಯುತ್ತಿದ್ದ ರಾಜ್ ಶೇಖರ್ ಅವರನ್ನ ಕೋಟ್ಯಾಧಿಪತಿಯನ್ನಾಗಿ ಮಾಡಿತು.. ರಾಜ್ ಶೇಖರ್ ಪಾಟೀಲ್ ಅವರದ್ದು ಮೂಲತಃ ಕೃಷಿ ಕುಟುಂಬ. 30 ಎಕರೆ ಜಮೀನು ಇದ್ರು ಮಳೆಯ ಕೊರತೆಯಿಂದ ಉತ್ತಮವಾಗಿ ಇಳುವರಿ ಸಿಗೋದಿಲ್ಲಾ. ಈ ಸಮಯದಲ್ಲಿ ಪಕ್ಕದ ಊರಿನ ಓರ್ವ ರೈತ ಕಷ್ಟದ ಹಿನ್ನಲೆ ಬಿದಿರಿನ ನಾ’ಶಗೊಳಿಸಲು ಮುಂದಾಗುತ್ತಾರೆ.. ಈ ವಿಷಯ ತಿಳಿದ ರಾಜಶೇಖರ್ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಬಿದಿರಿನ ಸಸಿಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡ್ತಾರೆ.

[widget id=”custom_html-3″]

3 ವರ್ಷದ ಬಳಿಕ 20 ಲಕ್ಷ ಆಧಾಯವನ್ನು ಪಡೆಯುತ್ತಾರೆ.. ಲಾಭ ಹೆಚ್ಚಾಗಿ ಬಂದಿದ್ದರಿಂದ ಆತ್ಮ ವಿಶ್ವಾಸ ಹೆಚ್ಚಾಗಿ ಮತ್ತೆ ಬಿದುರನ್ನು ನಾಟಿ ಮಾಡಿ ಹತ್ತು ಕಿಲೋಮೀಟರ್ ಉದ್ದದ ಕಾಲುವೆಯನ್ನ ಸ್ವಚ್ಚ ಮಾಡಿ.. ಮಳೆಯ ನೀರು ಸಂಗ್ರಹವಾಗುವಂತೆ ಮಾಡಿಕೊಳ್ತಾರೆ. ಇನ್ನೂ ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದುರಗಳನ್ನ ಬೆಳೆಯುತ್ತಿರುವ ಇವರು ನರ್ಸರಿಯನ್ನ ಕೂಡ ಆರಂಭಿಸಿದ್ದಾರೆ.. ಅಲ್ಲದೇ ತಮ್ಮ ತೋಟಕ್ಕೆ ಆಗಮಿಸುವ ವಿದ್ಯಾರ್ಥಿಗಳು ರೈತರಿಗೆ ರಾಜ ಶೇಖರ್ ತರಬೇತಿಯನ್ನ ಕೂಡ ಕೊಡ್ತಾರೆ.

[widget id=”custom_html-3″]

ಇನ್ನೂ ರಾಜಶೆಖರ್ ಅವರೇ ಹೇಳುವಂತೆ ಬಿದುರು ಬೆಳೆಯಲು ನಿರ್ಧಿಷ್ಟ ಜಮೀನಿನ ಅವಶ್ಯಕತೆ ಇಲ್ಲಾ.. ಅತಿ ಹೆಚ್ಚು ನೀರು ಅಥವಾ ಆರೈಕೆಯ ಅಗತ್ಯ ಕೂಡ ಇಲ್ಲಾ. ಸಾಮಾನ್ಯವಾಗಿ ಜುಲೈನಲ್ಲಿ ಬಿದುರನ್ನ ನೆಡಲಾಗುತ್ತದೆ.. ದೇಶದಲ್ಲಿ ಬಿದರಿನ ಉತ್ಪಾದನೆ ಕಡಿಮೆ ಇರೋದ್ರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ಎಕರೆ ಬಿದರು ಬೆಳೆಯಲು 10 ಸಾವಿರ ಬೇಕಾಗುತ್ತದೆ.. ಅದೇ ಮೂರು ವರ್ಷಗಳ ನಂತ್ರ ಲಕ್ಷ ಲಕ್ಷ ಹಣ ಜೇಬು ಸೇರುತ್ತದೆ. ಒಮ್ಮೆ ಬಿದರನ್ನ ಬೆಳೆದ್ರೆ ಸಾಕು ಮೂವತ್ತರಿಂದ 40 ವರ್ಷ ಕೈ ಹಿಡಿಯುತ್ತದೆ. ಈಗಾಗಿ ವರ್ಷಕ್ಕೆ ಕೋಟಿ ಕೋಟಿ ಟರ್ನೋವರ್ ಪಡೆಯುತ್ತಿದ್ದಾರೆ..