Advertisements

ರಸ್ತೆಯಲ್ಲಿ ಬಿದ್ದು ಕಾಲು ಸ್ವಾಧೀನ ಕಳೆದುಕೊಂಡ ಹುಡುಗಿ.. ಆದ್ರೆ ಈಕೆಯನ್ನು ಪ್ರೀತಿ ಮಾಡ್ತಿದ್ದ ಹುಡುಗ ಮಾಡಿದ್ದೇನು ನೋಡಿ..

Kannada Mahiti

ಪ್ರೀತಿಸಿದವರಿಗೆ ಕೈಕೊಟ್ಟು ಓಡೋಗೋ ಈ ಕಾಲದಲ್ಲಿ ನಿಜವಾದ ಪ್ರೀತಿಗೆ ಬೆಲೆ ಕೊಟ್ಟು, ತನ್ನ ಪವಿತ್ರ ಪ್ರೇಮವನ್ನು ಉಳಿಸಿಕೊಂಡ ಈತ ನಿಜಕ್ಕೂ ಗ್ರೇಟ್. ಪ್ರೀತಿಯಿಂದ ಫಜೀತಿ ಅನ್ನೋ ಜನಗಳ ,ಮಧ್ಯೆನೇ ಪ್ರೀತಿ ಇಲ್ಲದೇ ಬೇರೇನುಯಿಲ್ಲ, ನಮ್ಮ ಪ್ರೀತಿನೇ ಗ್ರೇಟ್ ಅಂತ ಎದೆತಟ್ಟಿ ಹೇಳೋ ಈ ಪ್ರಿಯತಮನೇ ಗ್ರೇಟ್.. ಅಷ್ಟಕ್ಕೂ ಏನ್ ವಿಷ್ಯಾ ಯಾರೀ ಪ್ರೇಮಿ. ಏನೀವನ ಕತೆ ಹೇಳ್ತೀವಿ ಕೇಳಿ.. ಚಿಕ್ಕಮಗಳೂರಿನ ಪ್ರೇಮಿಗಳಿರುವರು. ಹೆಸರು ಮನು ಹಾಗೂ ಸ್ವಪ್ನ. ಇವರಿಬ್ಬರು ಕೂಡ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡ್ತಾಯಿದ್ದರು.

[widget id=”custom_html-3″]

Advertisements

ಸ್ವಪ್ನಾ ಹತ್ತನೇ ತರಗತಿಯಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ಲು. ಎಲ್ಲ ಚೆನ್ನಾಗಿತ್ತು. ಆದ್ರೆ ಸೆಕೆಂಡ್ ಪಿಯು ಮುಗಿದು ಟೈಪಿಂಗ್ ಕ್ಲಾಸಿಂಗ್ ಹೋಗ್ತಾಯಿದ್ದಂತಹ ಸಂದರ್ಭದಲ್ಲಿ ಸ್ವಪ್ನ ಒಂದು ಸಲ ದಿಢೀರ್ ತಲೆತಿರುಗಿ ಬೀ’ಳ್ತಾಳೆ. ಬಿ’ದ್ದ’ವಳು ಎದ್ದ ಸಂದರ್ಭದಲ್ಲಿ ಆಕೆಯ ಕಾಲು ಸ್ವಾ’ಧೀ’ನ ಕಳೆದುಕೊಳ್ತು. ಸಂಪೂರ್ಣವಾಗಿ ಆಕೆ ನಡೆಯಲು ಆಗದೇ ವೀಲ್ ಚೇರ್​​​ನಲ್ಲಿಯೇ ಫಿಕ್ಸ್ ಆದ್ಲು. ಆದ್ರೆ ಮುಂದೇನಾಯ್ತು ಗೊತ್ತಾ.. ತನ್ನ ಬದುಕೇ ಮುಗೀತು, ನನ್ನಂತವರು ಬದುಕಿರಬಾರದು ಅಂತೆಲ್ಲ ನಿರ್ಧರಿಸಿದ ಸ್ವಪ್ನಾಳಿಗೆ ಆಸರೆಯಾಗಿ ನಿಂತಂತದ್ದು ಅವಳು ಪ್ರೀತಿಸಿದ ಆ ಮನುವೇ.. ನಂಬೋಕೆ ಕಷ್ಟ ಆಗ್ತಿಲ್ವಾ.. ಎಲ್ಲ ಸರಿಯಿರುವಾಗ್ಲೇ ಕುಂಟು ನೆಪ ಹೇಳಿ ಪ್ರೀತಿಯಿಂದ ಜಾರಿಕೊಳ್ಳೋ ಕೆಲವರ ಮಧ್ಯೆ ಇಂತಹ ಒಬ್ಬ ಪ್ರೇಮಿನೂ ಇದ್ದಾನಂತ. ನಾವು ಹೇಳ್ತಾಯಿರೋದು ನಿಜ.

[widget id=”custom_html-3″]

ಚಿಕ್ಕಮಗಳೂರಿನ ಈ ಪ್ರೇಮಿಗಳ ಪ್ರೇಮಕತೆಯೇ ಪ್ರೀತಿ ಮಾಡಿದ್ರೆ ಹೀಂಗೆ ಮಾಡಬೇಕಪ್ಪಾ ಅಂತ ಅನಿಸುತ್ತೆ. ಅಂದಹಾಗೇ ಮನು ಬರೇ ಆಶ್ವಾಸನೆಗಳನ್ನು ಕೊಟ್ಟಿದ್ದಾನೆ, ಮದುವೆಯೇನು ಆಗಲ್ಲ ಅಂತ ನೀವು ಅಂದುಕೊಳ್ತಾಯಿದ್ರೆ ಅದು ತಪ್ಪು,. ಎಸ್ ಮನು ಸ್ವಪ್ನಾಳನ್ನು ಸಾಮೂಹಿಕ ವಿವಾಹದಲ್ಲಿ ಸಂಪ್ರದಾಯ ಬದ್ದವಾಗಿ ಹಿರಿಯರ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾನೆ. ಇಬ್ಬರು ಈಗ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಈಗಿನ ಕಾಲದಲ್ಲಿಯೂ ತಾನೂ ಪ್ರೀತಿಸಿದ ಹುಡುಗಿಯ ಕೈ ಅನ್ನ ಬಿಡದೇ ಕಷ್ಟದಲ್ಲಿ ಜೊತೆಯಾಗಿ, ನೋವಲ್ಲಿ ಆತ್ಮಸ್ಥೈರ್ಯ ತುಂಬಿ ಪ್ರೀತಿಸಿದ ಪ್ರೇಮಿ ಗ್ರೇಟ್ ಅಲ್ವಾ..