Advertisements

ರೈತರಿಗಾಗಿ 15 ವರ್ಷದ ಪುತ್ತೂರು ಹುಡುಗಿ ಮಾಡಿದ ಈ ಐಡಿಯಾ! ಇಡೀ ದೇಶ ವೈರಲ್..

Inspire Kannada Mahiti

ನಮಸ್ತೆ ಸ್ನೇಹಿತರೆ, ರೈತರ ಕಷ್ಟ ರೈತರಿಗೆ ಅರ್ಥವಾಗೋದು ಅಲ್ಲವೇ ಹಾಗೆ ತಮ್ಮ ಕುಟುಂಬ ಹಾಗೂ ಇತರ ರೈತರು ಪಡುವ ಕಷ್ಟ ನೋಡಿದ ಈ ಹುಡುಗಿ ಅವರ ಶ್ರಮವನ್ನು ಕಡಿಮೆ ಮಾಡಲು ಒಂದು ಐಡಿಯಾ ಮಾಡಿಯೇ ಬಿಟ್ಟರು.. ಆ ಐಡಿಯಾ ಯಾವುದು ಎಂದು ಈ ಮಾಹಿತಿಯಲ್ಲಿ ನೋಡೊಣ ಬನ್ನಿ. ನಮ್ಮ ರಾಜ್ಯದಲ್ಲಿ ಮಲೆನಾಡು, ದಕ್ಷಿಣ ಕನ್ನಡ ಹಾಗೂ ಇನ್ನೂ ಇತರ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪೊಂಗಸ್ ನಿಂದ ಅಡಿಕೆ ಗಿಡಗಳನ್ನು ರಕ್ಷಿಸುವ ಸಲುವಾಗಿ ಬೋರ್ಡ್ ಮಿಕ್ಸರ್, ಕ್ರಿಮಿನಾ’ಶಕಗಳನ್ನು ಸ್ಪ್ರೇ ಮಾಡಲಾಗುತ್ತದೆ.

Advertisements

ಈಗಲೂ ಹಳೆಕಾಲದ ಪದ್ದತಿಯನ್ನೇ ಮುಂದುವರೆಸಿರುವ ರೈತರು ಗಟಾರ್ ಪಂಪ್ ಬಳಸಿ ಅಡಿಕೆ ಮರಗಳಿಗೆ ಕ್ರಿಮಿ ನಾ’ಶಕಗಳನ್ನು ಸ್ಪ್ರೇ ಮಾಡೋದ್ರಿಂದ ತುಂಬಾ ಖರ್ಚು ಬರುತ್ತದೆ.. ಯಾಕೆಂದರೆ ಕೆ’ಮಿಕಲ್ ಮಿಕ್ಸ್ ಮಾಡೋದಕ್ಕೆ ಒಬ್ಬರು, ಗಟಾರ್ ಪಂಪ್ ಪ್ರಶರ್ ಕೊಡೋಕೆ ಒಬ್ಬರು ಆಗೆ ಸ್ಪ್ರೇ ಮಾಡೋಕೆ ಮತ್ತೊಬ್ಬರು‌.. ಈಗೆ ಕಾರ್ಮಿಕರ ವೆಚ್ಚ ತುಂಬಾ ಬರುತ್ತದೆ‌. ಇದರಿಂದ ಕಾರ್ಮಿಕರ ಆರೋಗ್ಯ ಕೂಡ ಕೆಡುತ್ತದೆ.. ತಮ್ಮ ಅಡಿಕೆ ತೋಟದ ಬಳಿ ಹೋದಾಗ ಈ ಎಲ್ಲಾ ಕಷ್ಟಗಳನ್ನ ತಮ್ಮ ತಾತನಿಂದ ಕೇಳಿದ 13 ವರ್ಷದ ಪುತ್ತೂರಿನ ನೇಹ ಇದಕ್ಕೆ ಯಾವುದಾದರೂ ಒಂದು ಪ್ಲಾನ್ ಮಾಡಬೇಕಲ್ಲಾ ಎಂದುಕೊಂಡು ಮಾಹಿತಿ ಕಲೆಹಾಕಲು ಮುಂದಾದಳು.

ಸುಮಾರು ಎರಡು ವರ್ಷ ಪ್ರಯತ್ನ ಪಟ್ಟ ನೇಹ ಕೊನೆಗೂ ಇದರಲ್ಲಿ ಯಶಸ್ವಿ ಕಂಡಿದ್ದಾರೆ. ಅಷ್ಟಕ್ಕೂ ನೇಹ ಕಂಡು ಹಿಡಿದು ಮಾಡಿದ ಐಡಿಯಾ ಏನು ಗೊತ್ತಾ? ಹಠದಿಂದ ಸತತ ಪ್ರಯತ್ನ ಮಾಡಿದ ನೇಹ ಈಗ ಆಟೋಮೆಟಿಕ್ ಸ್ಪ್ರೇ ಮೆಷಿನ್ ಅನ್ನು ಕಂಡುಹಿಡಿದಿದ್ದಾರೆ.. ಹೌದು ಗೇರ್ ಬಾಕ್ಸ್, ಲಿತಿಯಮ್ ಬ್ಯಾಟರಿ, ಡಿಸಿ ಮೋಟರ್, ಎರಡು ಗಟಾರ್ ಪಂಪ್ಸ್, ಎಕ್ಸಲೇಟರ್ ಉಪಯೋಗಿಸಿಕೊಂಡು ಆಟೋಮಿಟಿಕ್ ಮೆಷಿನನ್ನು ರೆಡಿ ಮಾಡಿದ್ದಾರೆ ನೇಹ. ಒಂದು ಬಾರಿ ಚಾರ್ಜ್ ಮಾಡಿದರೆ 5 ಗಂಟೆ ರನ್ ಆಗುತ್ತದೆ‌ ಈ ಮಷಿನ್.. ಹಾಗೆ ಇದರಲ್ಲಿ ಇಂಡಿಕೇಟರ್ ಕೂಡ ಇದ್ದು ಕೆಮಿಕಲ್ ಇನ್ನೂ ಎಷ್ಟಿದೆ ಅಂತ ತೋರಿಸುತ್ತದೆ.

10ನೇ ತರಗತಿಯ ನೇಹ ಐಡಿಯಾಗೆ 2020 ರ ಸಿ.ಎಸ್ ಐಆರ್ ನ ತೃತೀಯ ಬಹುಮಾನ ಬಂದಿದೆ.. ಈ ಆಟೋಮಿಟಿಕ್ ಸ್ಪ್ರೇ ಮಿಷನ್ ಅನ್ನು ಈಗ ರೈತರು ಬಳಸೋದಕ್ಕೆ ಶುರುಮಾಡಿದ್ದೂ ನೇಹ ಐಡಿಯಾಗೆ ಮನಸೋತಿದ್ದಾರೆ. ಈ ಆಟೋಮಿಟಿಕ್ ಮೆಷಿನ್ ನಿಂದ 40 ರಷ್ಟು ಕಾರ್ಮಿಕರ ವೆಚ್ಚ ಕಡಿಮೆಯಾಗುತ್ತದೆ.. ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದಿಲ್ಲ. ತಾತನ ಮಾತುಗಳನ್ನು ಕೇಳಿ ಹಠಕ್ಕೆ ಬಿದ್ದು ಕೇವಲ 15 ವರ್ಷೆ ವಯಸ್ಸಿನಲ್ಲೇ ಈ ಸಾಧನೆ ಮಾಡಿದ ನೇಹ ಪರಿಶ್ರಮಕ್ಕೆ ಮೆಚ್ಚಲೇ ಬೇಕು. ನೇಹ ಅವರ ಈ ಐಡಿಯಾ ಬಗ್ಗೆ ನೀವೇನು ಹೇಳುತ್ತೀರಾ ತಿಳಿಸಿ.