Advertisements

ಕಳೆದ ತಿಂಗಳು ಮಗಳನ್ನು ಕಳೆದುಕೊಂಡ ಈ ತಂದೆ.. 45 ಹೆಣ್ಣು ಮಕ್ಕಳಿಗೆ ಏನು ಮಾಡಿದ್ದಾರೆ ಗೊತ್ತಾ? ಇಂತಹವರು ನೂರಕ್ಕೆ ಒಬ್ಬರು.

Inspire Kannada Mahiti

ನಮಸ್ತೆ ಸ್ನೇಹಿತರೆ, ಹೆಚ್ಚಾಗಿ ಎಲ್ಲಾ ತಂದೆಯರಿಗೆ ಮಗಳು ಎಂದರೆ ಬಹಳ ಕಾಳಜಿ ಮತ್ತು ಅಚ್ಚುಮೆಚ್ಚು.. ಆದರೆ ಅದೇ ಮಗಳನ್ನು ಕಣ್ಣುಮುಂದೆ ಕಳೆದುಕೊಂಡುಬಿಟ್ಟರೆ ಅವರ ಸ್ಥಿತಿ ಏನಾಗಬೇಡ.. ಇನ್ನೂ ಮಗಳಿಗಾದ ಸ್ಥಿತಿಯನ್ನು ನೆನಪಿಸಿಕೊಂಡು ಕೂರದೆ ಬೇರೆಯವರಿಗೆ ಒಳ್ಳೆಯದನ್ನು ಮಾಡುವ ಆಸೆ ಕೆಲವೇ ಕೆಲವು ಜನರಲ್ಲಿ ನಾವು ಕಾಣಬಹುದು. ಸ್ನೇಹಿತರೆ ಮಗಳನ್ನು ಕಳೆದುಕೊಂಡ ಈ ತಂದೆ ಆ ಮಗಳ ನೆನಪಲ್ಲೇ 45 ಹೆಣ್ಣು ಮಕ್ಕಳಿಗೆ ಏನು ಮಾಡಿದ್ದಾರೆ ಎಂಬುದನ್ನು ತಿಳೊಯೋಣ ಬನ್ನಿ..

Advertisements

ಕಲಬುರಗಿ ಜಿಲ್ಲೆಯ ಮಕಂಟಕಪುರಂ ನ MPHS ಶಾಲೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ ಬಸವಾರಜ್ ಅವರು ಇಂತಹ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೌದು.. ಬಸವರಾಜ್ ಅವರು ಮಗಳು ಆರೋಗ್ಯ ಸಮಸ್ಯೆಯಿಂದ ಇಹಲೋಕ ತ್ಯಜಿಸುತ್ತಾರೆ.. ಮಗಳ ನೆನಪಲ್ಲೇ ನೊಂದ ಬಸವರಾಜ್ ಅವರು ಸುಮಾರು 45 ಬಡ ಹೆಣ್ಣು ಮಕ್ಕಳ ಸ್ಕೂಲ್ ಪೀಸ್‌ ಅನ್ನು ಕಟ್ಟುತ್ತಿದ್ದಾರೆ. ತಾವು ಕೆಲಸ ಮಾಡಿರುವ ಶಾಲೆಯಲ್ಲಿ ಕಲಿಯುವ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯರ ಪೀಸ್ ಗಳನ್ನು ಕಟ್ಟುವ ಜವಾಬ್ದಾರಿಯನ್ನು ಬಸವರಾಜ್ ಅವರು ವಹಿಸಿಕೊಂಡಿದ್ದಾರೆ..

ನನ್ನ ಮಗಳು ಜೀವಂತವಾಗಿ ಇದ್ದಾಗ ಅವಳಿಗೆ 50 ಸಾವಿರ ಪೀಸ್ ಕಟ್ಟುತ್ತಿದ್ದೆ ಆದರೆ ಈಗ ನನ್ನ ಮಗಳು ಇಲ್ಲಾ. ಹಾಗಾಗಿ ಈ ಕಾರ್ಯ ಮಾಡುತ್ತಿರುವುದಾಗಿ ಬಸವರಾಜ್ ಅವರು ಭಾವುಕರಾಗಿ ತಿಳಿಸಿದ್ದಾರೆ.. ಇದರಿಂದ ನೆರವು ಪಡೆದಿರುವ ಬಡ ವಿದ್ಯಾರ್ಥಿಗಳು ಬಸವರಾಜ್ ಸರ್ ಮಾಡಿರುವ ಉಪಕಾರ ದೊಡ್ಡದು ಎಂದು ಹೇಳಿದ್ದಾರೆ. ಸ್ನೇಹಿತರೆ ಬಸವರಾಜ್ ಅವರ ಕಾರ್ಯಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿ.

Leave a Reply

Your email address will not be published. Required fields are marked *