Advertisements

ಜೋಬಲ್ಲಿ ಬರೀ 45 ರುಪಾಯಿ ಇಟ್ಕೊಂಡು ಈ ಮೂವರು ಸೈಕಲ್ ನಲ್ಲಿ ತುಮಕೂರಿನಿಂದ ಅಮೇರಿಕಾಗೆ ತಲುಪಿದ್ದು ಹೇಗೆ ಗೊತ್ತಾ..

Kannada Mahiti

ಇದು ಬರೇ 45 ರೂಪಾಯಿ ಹಿಡಿದುಕೊಂಡು ಅಮರಿಕಾ ಸೇರಿದ ತ್ರಿಮೂರ್ತಿ ಸ್ನೇಹಿತರ ಕತೆ, ಕೇಳಲಿಕ್ಕೆ ಆಶ್ಚರ್ಯ ಆಗ್ತಿದ್ಯಾ ಅಲ್ವಾ? 45 ರೂಪಾಯಿಯಲ್ಲಿ ವಿಶ್ವದ ದೊಡ್ಡಣ್ಣನ ಬಳಿ ಹೋಗಿಬಂದ್ರಾ ಅಂತ.. ಅದಕ್ಕಿಂತ ಇನ್ನೊಂದು ಆಶ್ಚರ್ಯಕರವಾದ ಸಂಗತಿಯಂದ್ರೆ ಈ ಹುಡುಗರು ಪಯಣಿಸಿದ್ದು, ತಮ್ಮದೇ ಸ್ವಂತ ಸೈಕಲಿನಲ್ಲಿ, ಹೌದು ಸಾವಿರಾರು ಕಿಲೋಮೀಟರ್‌ನ್ನು ಸೈಕಲ್‌ನಲ್ಲಿ ಕ್ರಮಿಸಿದ ಮೂವರು ಸ್ನೇಹಿತರ ಕತೆಯಿದು. ಮೂಲತಃ ಬೆಂಗಳೂರಿನವರಾದ ಈ ಮೂವರ ಹೆಸರು, ಗುರುಪ್ರಸಾದ್, ಪುರುಶೋತ್ತಮ್, ಪ್ರಸಾದ್. ಈ ಮೂವರು ಸಹ ವಿದ್ಯಾಭ್ಯಾಸ ಮುಗಿಸಿದ ಬಳಿಕ ಒಳ್ಳೆಯ ಕೆಲಸ ಹುಡುಕಲು ಪ್ರಯತ್ನಿಸ್ತಾರೆ, ಆದ್ರೆ ಅವರಿಗೆ ಯಾವುದೇ ಕೆಲಸ ದೊರೆತಿರೋದಿಲ್ಲ, ಹಾಗಂತ ಅವರು ಸುಮ್ಮನೆ ಕುಳಿತರ‍್ಲಿಲ್ಲ..

[widget id=”custom_html-3″]

Advertisements

ತಮ್ಮದೇ ಸೈಕಲ್ ಏರಿ ಟ್ರಕ್ಕಿಂಗ್, ಅಂತ ತಿರುಗುತ್ತಾನೆಯಿದ್ರು, ಒಂದು ಸಲ ಹೀಗೆ ಶಿವಗಂಗೆಯ ಬಳಿ ಗುಡ್ಡ ಏರುವಾಗ ಇವರ ತಲೆಗೆ ಅಮೇರಿಕಾಕ್ಕೆ ಹೋಗುವ ಆಸೆಯಾಗುತ್ತೆ, ಅದರಂತೆ ಯೋಚನೆಯನ್ನು ಯೋಜನೆಯಾಗಿ ಕಾರ್ಯರೂಪಕ್ಕೆ ತರುತ್ತಾರೆ ಕೂಡ, ಆದ್ರೆ ದೂರದ ಅಮೇರಿಕಾಗೆ ಹೇಗೆ ಹೋಗೋದು ಸಿಕ್ಕಾಪಟ್ಟೆ ದುಡ್ಡು ಬೇಕು ಅಂತೆಲ್ಲ ಆಲೋಚಿಸಿದಾಗ ತಮ್ಮದೇ ಸೈಕಲ್ ಏರಿ ಹೋಗಲು ನಿರ್ಣಯಿಸ್ತಾರೆ, ಅಂದಹಾಗೇ ಈ ಘ’ಟ’ನೆ ನಡೆದಿದ್ದು, 1980ರ ಕಾಲದಲ್ಲಿ. ಆ ಸಮಯದಲ್ಲಿ ಸೈಕಲ್ ಏರಿ ಈ ಮೂವರು ಹೊರಟೇ ಬಿಡುತ್ತಾರೆ, ಹೀಗೆ ಹೋದವರು ಮೊದಲು ಹೋಗಿದ್ದೇ ತುಮಕೂರಿನ ಸಿದ್ದಗಂಗಾ ಮಠಕ್ಕೆ..

[widget id=”custom_html-3″]

ಈಗ ಶಿವೈಕ್ಯರಾಗಿರುವ ನಡೆದಾಡುವ ದೇವರಾದ ಶ್ರೀ ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿ ಆಶಿರ್ವಾದ ಪಡೆದು ಇವರ ಪಯಣ ಆರಂಭವಾಗುತ್ತೆ, ನಂತರ ತುಳಿದು ತುಳಿದು ಬಾಂಬೆವರೆಗೂ ತಲುಪುತ್ತಾರೆ, ಆದ್ರೆ ಬಾಂಬೆಯಿಂದ ಹಡಗಿನಲ್ಲಿ ಹೋಗಬೇಕಾಗುತ್ತೆ ಹೇಗೆ ಹೋಗೋದು ಅಷ್ಟೊಂದು ಹಣವಿಲ್ಲ ಅಂತ ಆಲೋಚಿಸಿದಾಗ ಇವರಿಗೆ ಮುಂಬೈನಲ್ಲಿ ಪ್ರಖ್ಯಾತ ಕ್ರಿಕೆಟರ್ ವಿಜಯ್ ಮರ್ಚಿಲ್ ಅವರ ಪರಿಚಯವಾಗುತ್ತೆ, ಅವರ ಬಳಿ ವಿಷಯ ವಿವರಿಸಿದಾಗ ಕೆಚ್ಚೆದೆಯ ಯುವಕರಿಗೆ ಪ್ರೋತ್ಸಾಹ ಕೊಟ್ಟು ಹಡಗುಯಾನದ ಅರ್ಧ ಖರ್ಚು ತಾನು ಭರಿಸೋದಾಗಿ ಭರವಸೆ ಕೊಡುತ್ತಾರೆ..

[widget id=”custom_html-3″]

ನಂತರ ಇನ್ನರ್ಧ ಖರ್ಚಿಗಾಗಿ ಟಾಟಾ ಕಂಪನಿಗೆ ಅರ್ಜಿ ಹಾಕುತ್ತಾರೆ, ಪ್ರತಿಷ್ಟಿತ ಟಾಟಾ ಕಂಪನಿಯೂ ಸಹ ಇವರ ಅರ್ಜಿಯನ್ನು ಸ್ವೀಕರಿಸಿ ಇವರ ಹಡಗು ಯಾನದ ಇನ್ನುಳಿದ ಖರ್ಚನ್ನು ಭರಿಸಲು ನಿರ್ಧರಿಸಿ ಅಭಯ ನೀಡ್ತಾರೆ, ಇನ್ನು ಆಗ ಅವರಿಗೆ ಉಂಟಾದ ಸಮಸ್ಯೆಯಂದ್ರೆ ವೀಸಾ ಸಮಸ್ಯೆ, ನಂತರ ಅದನ್ನು ಬಗೆಹರಿಸಿಕೊಂಡು ಈ ಮೂವರು ಯುಎಇಗೆ ತಲುಪ್ತಾರೆ, ಅಲ್ಲಿಂದ ಮತ್ತೆ ತಮ್ಮದೇ ಸೈಕಲ್‌ನಲ್ಲಿ ಅಮೇರಿಕಾವನ್ನು ತಲುಪೇ ಬಿಡುತ್ತಾರೆ..