Advertisements

ಅಬ್ಬಬ್ಬಾ ! ಈತನ ಡಾನ್ಸ್ ಕಂಡು ದಂಗಾದ ಸೋಷಿಯಲ್ ಮೀಡಿಯಾಗಳು

Entertainment

ತಮ್ಮಲ್ಲಿ ಇಂತಹ ಪ್ರತಿಭೆ  ಇದ್ದರೂ ಕೂಡ ಮೊದಲೆಲ್ಲಾ ಸರಿಯಾದ ಅವಕಾಶವಾಗಲಿ, ವೇದಿಕೆಗಳಾಗಲಿ ಸಿಗುತ್ತಿರಲಿಲ್ಲ. ಆದರೆ ಈಗ ಅಂಗಿಲ್ಲ. ಕಾಲ ಬದಲಾಗಿದೆ. ಎಲೆಮರೆ ಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ದೊಡ್ಡ ವೇದಿಕೆಗಳನ್ನ ಸೃಷ್ಟಿಸಿವೆ. ಇನ್ನು ತಮ್ಮಲ್ಲಿರುವ ವಿಭಿನ್ನ ಪ್ರತಿಭೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮನ್ನ ತಾವೇ ಪ್ರಮೋಟ್ ಮಾಡಿಕೊಳ್ಳಬಹುದು. ತಮ್ಮಲಿರುವ  ಪ್ರತಿಭೆಯನ್ನ ಲಕ್ಷಾಂತರ ಜನರು ಗುರುತಿಸುವಂತೆ ಮಾಡಬಹುದಾಗಿದೆ.

Advertisements

ಇನ್ನು ಈಗ ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಜೊತೆಗೆ ಟಿಕ್ ಟಾಕ್ ಕೂಡ ತುಂಬಾ ಫೇಮಸ್ ಆದ ಸೋಷಿಯಲ್ ಮೀಡಿಯಾ ಪ್ಲೇಟ್ ಫಾರ್ಮ್ ಆಗಿದೆ. ಟಿಕ್ ಟಾಕ್ ಮೂಲಕ ಎಷ್ಟೋ ಪ್ರತಿಭೆಗಳು ಗುರುತಿಸಿಕೊಂಡಿದ್ದಾರೆ. ಈಗ ಅರ್ಮಾನ್ ರಾಥೋಡ್ ಎಂಬ ಸಾಮಾನ್ಯ ವ್ಯಕ್ತಿಯೊಬ್ಬ ಮಾಡಿದ ಡ್ಯಾನ್ಸ್ ನಿಂದ ರಾತ್ರೋ ರಾತ್ರಿ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿಬಿಟ್ಟಿದ್ದಾನೆ. ದೊಗಲೆ ಶರ್ಟ್ ಹಾಗೂ ಪ್ಯಾಂಟ್ ನ್ನ ತೊಟ್ಟಿರುವ ಈ ವ್ಯಕ್ತಿ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಕಭಿ ಗಮ್ ಕಭಿ ಖುಷಿ ಚಿತ್ರದ ‘ಯು ಆರ್ ಮೈ ಸೋನಿಯಾ’ ಎಂಬ ಹಾಡಿಗೆ ಟಿಕ್ ಟಾಕ್ ವಿಡಿಯೋದಲ್ಲಿ ನೃತ್ಯ  ಮಾಡಿದ್ದು, ಸಾವಿರಾರು ಜನರ ಮನ ಗೆಲ್ಲುವಂತೆ ಮಾಡಿದೆ.

೩೩ ಸೆಕೆಂಡ್ ಗಳ ಕಾಲ ಇರುವ ಈ ಟಿಕ್ ಟಾಕ್ ವಿಡಿಯೋವನ್ನ, 47ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿದ್ದು, ಬರೋಬ್ಬರಿ ೩೦ ಮಿಲಿಯನ್ ಗಿಂತ  ಹೆಚ್ಚು ಮಂದಿ ನೋಡಿದ್ದಾರೆ. ಇನ್ನು  ವೈರಲ್ ಆದ ಈ ಡ್ಯಾನ್ಸ್ ವಿಡಿಯೋವನ್ನ ರೋಸಿ ಅಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.