Advertisements

ತಿರುಪತಿಯಲ್ಲಿ ಬಂಗಾರದ ಬಾವಿ ಇರೋದು ಎಲ್ಲಿ ಗೊತ್ತಾ? ತಿಮ್ಮಪ್ಪನಿಗೆ ಈ ಬಾವಿಯ ನೀರಿನಿಂದಲೇ ಅಭಿಷೇಕ ನಡೆಯುತ್ತೆ..

Temples

ನಮಸ್ಕಾರ ಸ್ನೇಹಿತರೆ ತಿರುಪತಿಯಲ್ಲಿ ಚಿನ್ನದ ಬಾವಿ ಕಟ್ಟಿಸಿದವರು ಯಾರು ಈ ಚಿನ್ನದ ಬಾವಿ ಈಗ ಎಲ್ಲಿದೆ ಹೇಗಿದೆ ಈ ಬಂಗಾರದ ಬಾವಿಯಲ್ಲಿ ಈಗಲೂ ನೀರು ಬರುತ್ತಾ ಈ ಬಾವಿಯ ನೀರನ್ನು ಯಾವ ಕಾರಣಕ್ಕಾಗಿ ಬಳಸಲಾಗುತ್ತದೆ. ಹೌದು ಸ್ನೇಹಿತರೆ ಈ ರೀತಿಯ ವಿಷಯಗಳು ತಿರುಪತಿಯಲ್ಲಿ ತುಂಬಾನೆ ಇವೆ. ತಿರುಪತಿಯ ಪ್ರತಿ ಹೆಜ್ಜೆಯಲ್ಲೂ ಇತಿಹಾಸ ರಹಸ್ಯ ನಿಗೂಢತೆ ಕುತೂಹಲ ತುಂಬಿ ತುಳುಕುತ್ತದೆ. ತಿರುಪತಿಯಲ್ಲಿರುವ ಬಂಗಾರದ ಬಾವಿಯ ಸಂಪೂರ್ಣವಾದ ಮಾಹಿತಿಯನ್ನು ಅದರ ರಹಸ್ಯವನ್ನು ಅದರ ಇತಿಹಾಸವನ್ನು ಅದರ ನಿಗೂಢತೆಯನ್ನು ಸಂಪೂರ್ಣವಾದ ಮಾಹಿತಿ ನೋಡಿ. ಶ್ರೀದೇವಿ ಭೂದೇವಿ ಸಮಯಿತವಾಗಿ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾದಿಪತಿ ಭೂಲೋಕದಲ್ಲಿ ನೆಲೆಸಿದ್ದಾರೆ. ಈ ಮಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ ಉಂಟು ಮಾಡುವ ಸಮಯದಲ್ಲಿ ಸ್ವಾಮಿಯ ಅಡುಗೆಯ ಸಲುವಾಗಿ ಶ್ರೀ ಮಹಾಲಕ್ಷ್ಮಿಯು ಒಂದು ತೀರ್ಥವನ್ನು ಏರ್ಪಾಡು ಮಾಡುತ್ತಾಳೆ
ಅದನ್ನೇ ಶ್ರೀ ಲಕ್ಷ್ಮಿ ತೀರ್ಥವೆಂದು ಎಂದು ಕೂಡ ಕರೆಯುತ್ತಾರೆ. ಹಾಗೆ ಭೂದೇವಿಯು ಕೂಡ ಒಂದು ತೀರ್ಥವನ್ನು ಏರ್ಪಾಡು ಮಾಡುತ್ತಾಳೆ..

tirupathi golden well

Advertisements

ಅದನ್ನು ಭೂ ತೀರ್ಥ ಎಂದು ಕರೆಯುತ್ತಾರೆ. ಕಾಲ ನಂತರ ಈ ಎರಡು ತೀರ್ಥಗಳು ಅದೃಶ್ಯ ನಿಕ್ಷೇಪ ವಾಯಿತು. ಮತ್ತೆ ತದನಂತರ ಕಾಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವೈಖಾನಾ ಸಾಗಮನ ಎಂಬ ಶಾಸ್ತ್ರವನ್ನು ಮಾಡುವ ಸಲುವಾಗಿ
ಪ್ರಧಾನ ಅರ್ಚಕರಾದ ಅಂತಹ ಗೋಪಿನಾಥ ಮತ್ತು ಅವರ ಸಹಾಯಕ ಅರ್ಚಕ ಆದಂತಹ ರಂಗದಾಸು ಎಂಬ ಸೇವಕರು ತಿರುಮಲಕ್ಕೆ ಬರುತ್ತಾರೆ. ಶ್ರೀ ಸ್ವಾಮಿಯ ಆರಾಧನೆಗೆ ಅಂತ್ಯ ಅವಶ್ಯಕವಾದ ಪುಷ್ಪಗಳಿಗಾಗಿ ತೋಟವನ್ನು ಬೆಳೆಸಬೇಕೆಂದು ತೀರ್ಮಾನಿಸಿ ಎರಡು ಬಾವಿಗಳನ್ನು ನಿರ್ಮಾಣ ಮಾಡುತ್ತಾರೆ. ಅದೇ ಸ್ಥಳದಲ್ಲಿ ಪುರಾತನವಾದ ಕಾಲದಲ್ಲಿದ್ದಂತಹ ಶ್ರೀ ತೀರ್ಥ ಮತ್ತು ಭೂ ತೀರ್ಥ ಆ ಸಮಯದಲ್ಲಿ ಬಳಕೆಗೆ ಬರುತ್ತದೆ. ಕಾಲನಂತರ ರಂಗದಾಸು ಮರಣ ಹೊಂದುತ್ತಾರೆ ನಂತರ ಇನ್ನು ಆ ಎರಡು ಬಾವಿಗಳು ಶೀತಲವಾಗಿ ಹೋಗುತ್ತವೆ. ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲು ತೋಟವನ್ನು ನಿರ್ಮಾಣ ಮಾಡಿ ಪುಷ್ಪಗಳನ್ನು ಸಮರ್ಪಿಸಿದ್ದರಿಂದ ಆ ರಂಗದಾಸುವಿಗೆ ಅನಂತರದ ಕಾಲದಲ್ಲಿ ಒಬ್ಬ ಚಕ್ರವರ್ತಿಯಾಗಿ ಜನಿಸಿ ಮತ್ತೆ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ಸೇವೆ ಮಾಡುವ ಅವಕಾಶ ಕೂಡಿಬರುತ್ತದೆ.

tirupathi golden well

ಈ ಜನ್ಮದಲ್ಲಿಯೂ ಕೂಡ ಸ್ವಾಮಿಯನ್ನು ಆರಾಧಿಸುತ್ತಿದ್ದ ಚಕ್ರವರ್ತಿಗೆ ಸ್ವಾಮೀಯೂ ಕನಸಲ್ಲಿ ಬಂದು ತನ್ನ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲ ತಿಳಿಸುತ್ತಾರೆ. ಹಾಗೆಯೇ ಸ್ವಾಮಿಯು ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರ ಮೇಲೆ ಬಂಗಾರದ ವಿಮಾನವನ್ನು ನಿರ್ಮಾಣ ಮಾಡಿ ಪೂರ್ವಜನ್ಮದಲ್ಲಿ ಮಾಡಿದ ಶ್ರೀ ತೀರ್ಥ ಮತ್ತು ಭೂ ತೀರ್ಥವನ್ನು ಮತ್ತೆ ಪುನರ್ ಸ್ಥಾಪಿಸಬೇಕೆಂದು ಆ ಚಕ್ರವರ್ತಿಗೆ ಆಜ್ಞಾಪಿಸುತ್ತಾರೆ. ತನ್ನ ಪೂರ್ವ ಜನ್ಮದ ವೃತ್ತಾಂತವನ್ನು ತಿಳಿದ ಆ ಚಕ್ರವರ್ತಿ ಇದರಿಂದ ಆಶ್ಚರ್ಯಪಟ್ಟ ಚಕ್ರವರ್ತಿ ತೋಟಾ ಮಾನ್ ಶ್ರೀ ತೀರ್ಥವನ್ನು ಮತ್ತೆ ಪುನರಾಭಿವೃದ್ಧಿ ಮಾಡಿ ಅದಕ್ಕೆ ಬಂಗಾರದ ಲೇಪನವನ್ನು ಮಾಡಿಸುತ್ತಾರೆ. ಅದೇ ಅಂದಿನಿಂದ ಬಂಗಾರದ ಭಾವಿಯಾಗಿ ಪ್ರಸಿದ್ಧಿ ಹೊಂದಿದೆ . ಹಾಗೆಯೇ ಭೂ ತೀರ್ಥವನ್ನು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ಮೆಟ್ಟಿಲು ಬಾವಿ ಎಂದೆ ಮುಂದೆ ಅದು ಪ್ರಸಿದ್ಧಿ ಹೊಂದುತ್ತದೆ. ಅದು ಈಗ ಹೂವಿನ ಬಾವಿಯಾಗಿದೆ ಕಾಲಾನಂತರ ಶ್ರೀ ತೀರ್ಥವು ಅಂದರೆ ಬಂಗಾರದ ಬಾವಿ.. ಸ್ವಾಮಿಯ ಅಡುಗೆಯ ತಯಾರಿಗೆ ಅರ್ಚನೆಗೆ ಈ ತೀರ್ಥವನ್ನು ಉಪಯೋಗಿಸುತ್ತಾ ಪ್ರಮುಖವಾದ ಸ್ಥಾನವನ್ನು ತಿರುಪತಿಯಲ್ಲಿ ಇದು ಹೊಂದಿದೆ.

tirupathi golden well

ಈ ಬಂಗಾರದ ಬಾವಿ ಸ್ವಾಮಿಗೆ ದರ್ಶನವನ್ನು ಮಾಡಿದ ನಂತರ ಬಂಗಾರದ ಬಾಗಿಲು ಇದೆ ಅಲ್ಲಿಂದ ಹೊರಗೆ ಬಂದ ನಂತರ ಎದುರಿಗೆ ಇರುವ ಅಡುಗೆಮನೆ ತಯಾರಿ ಕೊಠಡಿ ಇದೆ. ಅದರ ಎದುರಿಗಿರುವ ಮಾರ್ಗದಲ್ಲಿ ಒಕುಳ ದೇವಿಯನ್ನು ದರ್ಶನ ಮಾಡಿಕೊಳ್ಳುವ ಹೋಗುವ ದಾರಿಯಲ್ಲಿಯೆ ಈ ಬಂಗಾರದ ಬಾವಿ ಇದೆ. ಈ ಬಾವಿಯ ಸುತ್ತ ಭೂಮಿ ಮಟ್ಟದಿಂದ ಸ್ವಲ್ಪ ಎತ್ತರಕ್ಕಿದೆ ಕೆತ್ತನೆ ಮಾಡುವ ಶಿಲ್ಪಕ್ಕೆ ಬಳಸುವ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ ಈ ಬಾವಿಯನ್ನ ಈ ಕಲ್ಲಿನ ಕಟ್ಟಡದ ಮೇಲೆ ಬಂಗಾರದಲ್ಲಿ ಲೇಪನ ಮಾಡಿರುವ ಬಂಗಾರದ ಬಾವಿಯನ್ನು ನೀವು ಕಾಣಬಹುದು ಈ ಬಂಗಾರದ ಬಾವಿಗೆ ಶ್ರೀ ತೀರ್ಥ ಸುಂದರ ಸ್ವಾಮಿ ಬಾವಿ ಎಂದು ಕೂಡ ಕರೆಯುತ್ತಾರೆ. ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿರಾಟನ ಮೂರ್ತಿಗೆ ಪ್ರತಿ ಶುಕ್ರವಾರ ದಿನ ಅಭಿಷೇಕ ನಡೆಯುತ್ತದೆ. ಈ ಅಭಿಷೇಕವನ್ನು ತಿರುಮಲ ನಂದಿ ಎಂಬ ವ್ಯಕ್ತಿಯು 11ನೇ ಶತಮಾನದಲ್ಲಿ ಪಾಪ ವಿನಾಶ ತೀರ್ಥದಿಂದ ಪ್ರತಿನಿತ್ಯವೂ ಈ ಪವಿತ್ರವಾದ ಜಲವನ್ನು ತೆಗೆದುಕೊಂಡು ಸ್ವಾಮಿಗೆ ಅರ್ಪಿಸುತ್ತಿದ್ದನು. ಹೀಗೆ ಪ್ರತಿನಿತ್ಯ ಅಭಿಷೇಕ ಜಲವನ್ನು ಸಮರ್ಪಿಸುತ್ತಾ ಸೇವೆ ಇರುವ ಕಾಲದಲ್ಲಿ ತಿರುಮಲದಿಂದ ಗುರುವಾಗಿದ್ದ ಯಮುನಾಚಾರ್ಯರು ತಿರುಮಲಕ್ಕೆ ತೆರಳಿ ಶ್ರೀನಿವಾಸ ಪ್ರಭು ದರ್ಶನ ಭಾಗ್ಯ ಪಡೆಯುತ್ತಾರೆ.

tirupathi golden well

ಈ ಸಮಯದಲ್ಲಿ ಅತ್ಯಂತ ಮಳೆ ಸಂಭವಿಸುತ್ತದೆ ಆಗ ತಿರುಮಲದಿಂದ.. ಪಾಪ ವಿನಾಶದಿಂದ ಅಭಿಷೇಕ ಜಲವನ್ನು ತೆಗೆದುಕೊಂಡು ಬರಲು ಯಾವುದೇ ವಿಗ್ನ ನಡೆಯಬಾರದೆಂದು ಶ್ರೀ ಮಹಾಲಕ್ಷ್ಮಿಯನ್ನು ಹೀಗೆ ಪ್ರಾರ್ಥಿಸುತ್ತಾರೆ. ಶ್ರೀನಿವಾಸ ಅಭಿಷೇಕಕ್ಕೆ ಇತರ ತೀರ್ಥಗಳಿಗಿಂತ.. ಅಲ್ಲಿ ನೆಲೆಸಿರುವ ಶ್ರೀ ತೀರ್ಥ ಜಲವು ಸರ್ವ ಶ್ರೇಷ್ಠವಾಗಿದ್ದು ಹಾಗಾಗಿಯೇ ಜಲವನ್ನು ಇನ್ನು ಮುಂದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಅಭಿಷೇಕಕ್ಕೆ ಯೋಗ್ಯ ವಾಗಿರುವುದು ಎಂದು ಹೇಳಿಕೊಳ್ಳುತ್ತಾರೆ. ಬಂಗಾರದ ಬಾವಿಯನ್ನು ಸುಂದರವಾದ ಅಂತಹ ಭಗವಂತನ ರೂಪವೆಂದು ಇದನ್ನು ಸ್ವಾಮಿಕೂಪ ಎಂದು ಕೂಡ ನಾಮಕರಣ ಮಾಡಲಾಗಿತ್ತು. ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮೂರು ಬಾವಿಗಳಿವೆ ಅವುಗಳು ಯಾವುದೆಂದರೆ ಮೊದಲನೆಯದು ಸಂಪಂಗಿ ಪ್ರದಕ್ಷಿಣೆಯಲ್ಲಿ ರಾಮಾನುಜಕುಟಂ ಎರಡನೆಯ ಬಾವಿ ಅದು ಹೂವಿನ ಬಾವಿ ಯಾಗಿದೆ ಮೂರನೆಯ ಬಾವಿ ಬಂಗಾರದ ಬಾವಿ ಇದು ತಿರುಮ ಮಣಿ ಮಂಟಪದ ಎದುರಿಗೆ ಕಾಣಿಸುವ ಬಾವಿಯೇ ಈ ಬಂಗಾರದ ಬಾವಿ ಈ ಬಾವಿಯನ್ನು ರಂಗದಾಸು ನಿರ್ಮಾಣ ಮಾಡಿದ್ದರು ಪೂರ್ವ ಜನ್ಮದಲ್ಲಿ ಈ ರಂಗದಾಸು ತೋಟ ಮಾನ್ ಚಕ್ರವರ್ತಿ ಆಗಿದ್ದರು ಈ ಬಾವಿಯ ಕೆಳಗೆ ವಿರಜಾನದಿ ಇಂದಿಗೂ ಹರಿಯುತ್ತದೆ ಎಂದು ಪಂಡಿತರು ಇದನ್ನು ನಂಬಿದ್ದಾರೆ. ಇದೇ ಕಾರಣ ಇವತ್ತಿಗೂ ಈ ಬಾವಿಯು ಎಂದಿಗೂ ಭತ್ತಿಲ್ಲ. 365 ದಿವಸವು ನೀರು ಇಲ್ಲಿ ಹರಿಯುತ್ತನೆ ಇರುತ್ತದೆ. ಇನ್ನೊಂದು ವಿಶೇಷವೇನೆಂದರೆ ಈ ಬಾವಿಯಲ್ಲಿನ ನೀರಿನ ಸಿಹಿ ನೀವು ವಿಶ್ವದಲ್ಲಿರುವ ಎಲ್ಲೂ ಕಾಣಲು ಸಾಧ್ಯವಿಲ್ಲ. ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಮೇಲಿದೆ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 291 ಕಿಲೋಮೀಟರ್ ದೂರದಲ್ಲಿದ್ದರೆ ಹೈದರಾಬಾದ್ ನಿಂದ 600 ಕಿಲೋಮೀಟರ್ ಹಾಗೂ ಹಾಗೂ ಚೆನ್ನೈನಿಂದ ಕೇವಲ 138 ಕಿಲೋಮೀಟರ್ ದೂರದಲ್ಲಿದೆ..