Advertisements

ತಿರುಪತಿ ತಿಮ್ಮಪ್ಪನ ಪಾದದ ಕೆಳಗೆ ಇದೆ ಒಂದು ನಿಗೂಢ ಶ್ರೀಚಕ್ರ! ಇದರ ರಹಸ್ಯ ನೋಡಿ..

Temples

ಏಳುಮಲೆಗಳಲ್ಲಿ ವಾಸವಾಗಿರುವ ತಿರುಪತಿಗೆ ವೆಂಕಟರಮಣನಿಗೆ ಜಾನಕರ್ಷಣೆ ಮತ್ತು ಧಾನಕರ್ಷಣೆ ಹೆಚ್ಚು. ಅಷ್ಟೇ ಯಾಕೆ ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡಾ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿವರ್ಷ ಹೋಗುತ್ತಾರೆ. ತಿಮ್ಮಪ್ಪನ ಸಾನಿಧ್ಯದಲ್ಲಿ ಅನೇಕ ರಹಸ್ಯಗಳು ಅಡಗಿವೆ ಹಾಗೆ ಏಳು ಮಲೆಗಳು ತಿಮ್ಮಪ್ಪನ 7 ರೂಪಗಳು ಎಂದು ಭಾವಿಸಲಾಗಿದೆ. ಇನ್ನೂ ಅನೇಕ ರಹಸ್ಯಗಳು ವಿಸ್ಮಯಗಳು ಈ ಪುಣ್ಯಕ್ಷೇತ್ರದಲ್ಲಿ ಅಡಗಿವೆ ಏನು ರಹಸ್ಯಗಳನ್ನು ಅಂತ ಲೇಖನದ ಮೂಲಕ ತಿಳಿಯೋಣ ಬನ್ನಿ. ಭೂಮಿಯ ಮೇಲಿನ ಸ್ವರ್ಗವೆಂದೇ ಹೆಸರಾದ ತಿರುಪತಿ ವೆಂಕಟರಮಣನ ದೇವಸ್ಥಾನ ಹಿಂದೆ 12 ವರ್ಷಗಳ ಕಾಲ ಬಂದಾಗಿತ್ತು. ಹೌದು ಒಬ್ಬ ರಾಜ ತಾನು ಮಾಡಿದ ಅ’ಪ’ರಾಧಕ್ಕಾಗಿ 12 ಜನರನ್ನು ಕೊಂದು ಈ ದೇವಾಲಯದ ಬಾಗಿಲಿಗೆ ನೇತುಹಾಕಿದ್ದರು. ಈ ಕಾರಣದಿಂದ ಸುಮಾರು 12 ವರ್ಷಗಳ ಕಾಲ ಈ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು ತದನಂತರ ತಿಮ್ಮಪ್ಪನ ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು ಬಾಗಿಲು ತೆಗೆಸಿಕೊಂಡ ಎಂದು ಹೇಳಲಾಗುತ್ತಿದೆ.

Advertisements

ಇನ್ನೊಂದು ಅಚ್ಚರಿ ಏನಂದ್ರೆ, ತಿರುಪತಿ ತಿಮ್ಮಪ್ಪನಿಗೆ ಪೂಜೆಮಾಡುವ ಹೂವು, ಹಣ್ಣು, ಹಾಲು-ಬೆಣ್ಣೆ, ತುಳಸಿದಳ, ಎಲೆ, ಪತ್ರಿಗಳು ಎಲ್ಲವೂ ಒಂದು ರಹಸ್ಯಮಯ ವಾದ ಗ್ರಾಮದಿಂದ ಬರುತ್ತದೆ. ಈ ಗ್ರಾಮಕ್ಕೆ ಗ್ರಾಮಸ್ಥರ ಹೊರತು ಬೇರೆಯವರಿಗೆ ಪ್ರವೇಶವಿಲ್ಲ. ಹಾಗೆ ದೇವಸ್ಥಾನದಲ್ಲಿ ಉರಿಯುವ ದೀಪಗಳಿಗೆ ಮನೆಯಾಗಲಿ ಅಥವಾ ಬೆಣ್ಣೆ ಯಾಗಲಿ ಯಾವುದು ಇಲ್ಲ. ಆದರೆ ಗರ್ಭಗುಡಿಯ ದೀಪಗಳು ಸೇರಿದಂತೆ ದೇವಾಲಯದಲ್ಲಿರುವ ದೀಪಗಳು ಮಾತ್ರ ವರ್ಷಾನುಗಟ್ಟಲೆ ನಿರಂತರವಾಗಿ ಉರಿಯುತ್ತಿವೆ. ಇದರ ರಹಸ್ಯವನ್ನು ಇಂದಿಗೂ ಯಾರಿಂದಲೂ ಭೇದಿಸಲು ಸಾಧ್ಯವಾಗಿಲ್ಲ. ಇಂದು ವೆಂಕಟರಮಣನಿಗೆ ಧನಾಕರ್ಷಣೆ ಮತ್ತು ಜನಾಕರ್ಷಣೆ ಯಾಕೆ ಹೆಚ್ಚು ಎಂದು ನೋಡುವುದಾದರೆ, ಇದಕ್ಕೂ ಒಂದು ಇತಿಹಾಸವಿದೆ.

ಅದೇನೆಂದರೆ, ಹಿಂದೆ ಆದಿಗುರು ಶಂಕರಾಚಾರ್ಯರು ತಿರುಪತಿಗೆ ಭೇಟಿ ನೀಡಿದಾಗ ತಿಮ್ಮಪ್ಪನನ್ನು ಶ್ಲೋಕದ ಮೂಲಕ ಅವನ ರೂಪ ಸೌಂದರ್ಯವನ್ನು ವರ್ಣಿಸುತ್ತಾರೆ. ಹಾಗೆ ಪಾದದ ಕೆಳಗೆ ಜನ ಕಶನ ಚಕ್ರವನ್ನು ಇಡುತ್ತಾರೆ. ಅದರಂತೆ ಶ್ರೀವಾರಿ ಕುಂಡಿಯ ಕೆಳಗೆ ಶ್ರೀಚಕ್ರವನ್ನು ಇಡುತ್ತಾರೆ ಈ ಕಾರಣದಿಂದಲೇ ತಿರುಪತಿ ತಿಮ್ಮಪ್ಪನಿಗೆ ಜನಾಕರ್ಷಣೆ ಧನಾಕರ್ಷಣ ಹೆಚ್ಚಾಗಿದೆ. 1939 ರಲ್ಲಿ ಬ್ರಿಟಿಷರ ಸರ್ಕಾರ ರಚಿಸಿದ “ದಿ ಹಿಲ್ ಶ್ರೇಣಿ ಆಫ್ ತಿರುಪತಿ ” ಪುಸ್ತಕದಲ್ಲಿ ಇದರ ಉಲ್ಲೇಖವಿದೆ. ಈ ಜನ್ ಆಕರ್ಷಣೆ ಮತ್ತು ಧನಾಕರ್ಷಣೆ ಚಕ್ರ ಇರುವ ದೇವಸ್ಥಾನ ಭಾರತದಲ್ಲಿ ಮಾತ್ರ ಇದೆ. ಅದು ತಿರುಪತಿಯಲ್ಲಿ ಮಾತ್ರ. ಹೀಗಾಗಿ ನೀವು ತಿರುಪತಿ ದರ್ಶನ ಪಡೆದು ಪುನೀತರಾಗಿ..