Advertisements

ತಿರುಪತಿ ಹುಂಡಿಯ ಅತೀ ದೊಡ್ಡ ರಹಸ್ಯ ಬಯಲು! ನೋಡಿ..

Temples

ದಕ್ಷಿಣ ಭಾಗದ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿಯು ಒಂದು. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮ ಹರಕೆ ತಿಳಿಸುತ್ತಿದ್ದಾರೆ. ಹೀಗೆ ಹರಕೆ ಹೊತ್ತ ಭಕ್ತನೋರ್ವ ತಿರುಪತಿಯ ವೆಂಕಟರಮಣನಿಗೆ ಬಂಗಾರದಿಂದ ಕೂಡಿದ ಹಸ್ತಗಳನ್ನು ದಾನವಾಗಿ ನೀಡಿದ್ದಾನೆ. ಆದರೆ ಅವರ ಹೆಸರು ಎಲ್ಲಿಯೂ ಇಲ್ಲ.ಯಾಕೆ? ಅದಾನಿ ಯಾರು? ಎಂದು ತಿಳಿಯೋಣ ಬನ್ನಿ.
ತಿರುಪತಿಯ ತಿಮ್ಮಪ್ಪ, ವೆಂಕಟರಮಣ, ಗೋವಿಂದ ಎಂದೇ ಹೆಸರಾದ ಈ ದೇವರಿಗೆ ಭಕ್ತನೋರ್ವ ಬಂಗಾರ, ಮಾಣಿಕ್ಯ, ವಜ್ರದಿಂದ ತಯಾರಾದ ಹಸ್ತಗಳನ್ನು ಕಾಣಿಕೆಯಾಗಿ ನೀಡಿದ್ದಾನೆ.

Advertisements

ಇವು ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಎನ್ನಲಾಗಿದೆ. ಈ ದಾನಿಯ ಹೆಸರನ್ನು ಎಲ್ಲಿಯೂ ಹೇಳದಂತೆ ಹಾಗೂ ಪ್ರಕಟಿಸದಂತೆ ಮಂಡಳಿಯ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದಾರೆ. Vip ದರ್ಶನದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಈ ಹಸ್ತಗಳು 5.3 ಕೆಜಿ ತೂಕದ್ದು ಆಗಿವೆ. ಇದನ್ನು ನೀಡಿದ ದಾನಿ ಮಾತ್ರ ಪ್ರಚಾರ ಬಯಸದೇ ಎಲ್ಲಿಯೂ ಹೆಸರನ್ನು ಹೇಳದಂತೆ ಗುಪ್ತವಾಗಿರಿಸಿದ್ದಾರೆ.


ಈ ಹಸ್ತ ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವೀಕರಿಸಲಾಗಿದೆ. ಹೀಗೆ ಆಂಧ್ರದ ಉದ್ಯಮಿಯೊಬ್ಬರು ಚಿನ್ನದ ನಂದಕಖಡ್ಗವನ್ನು ದಾನವಾಗಿ ನೀಡಿದ್ದರು. ಇದು ಈ 1ಕೋಟಿ 80ಲಕ್ಷ ರೂ. ಮೌಲ್ಯದಾಗಿದೆ. ಇದು ಸಂಪೂರ್ಣ ಚಿನ್ನದಿಂದ ಕೂಡಿದೆ.
ತಿರುಪತಿಗೆ ಹೀಗೆ ಭಕ್ತರು ಚಿನ್ನ-ಬೆಳ್ಳಿ ಮತ್ತು ಹಣವನ್ನು ನೀಡುವುದು ಇಲ್ಲಿ ಸಂಪ್ರದಾಯವಾಗಿದೆ. ಆದ್ದರಿಂದಲೇ ತಿಮ್ಮಪ್ಪನನ್ನು ಕೋಟಿರೂಪಾಯಿಯ ಒಡೆಯ ಎಂದು ಕರೆಯುತ್ತಾರೆ.