Advertisements

ತಿರುಪತಿಗೆ ಹೋದಾಗ ವರಹ ಸ್ವಾಮಿಯ ದರ್ಶನವನ್ನೇ ಮೊದಲು ಪಡೆಯಬೇಕು ಯಾಕೆ ಗೊತ್ತಾ?

Cinema

ಪ್ರಿಯ ಓದುಗರೆ ತಿರುಪತಿ ವೆಂಕಟರಮಣ ಸ್ವಾಮಿಯ ದರ್ಶನಕ್ಕೆ ಹೋದಾಗ ಮೊದಲು ಅಲ್ಲಿ ವರಹಸ್ವಾಮಿ ದೇವರ ದೇವಸ್ಥಾನ ಸಿಗುವುದು. ಮೊದಲು ಈ ಸ್ವಾಮಿಯ ದರ್ಶನ ಪಡೆದ ನಂತರವಷ್ಟೇ ತಿರುಪತಿ ವೆಂಕಟರಮಣನ ದರ್ಶನ ಪಡೆಯಬೇಕು. ಯಾಕೆ ಮೊದಲು ವರಹ ಸ್ವಾಮಿ ದರ್ಶನ ಪಡೆಯಬೇಕು? ತಿರುಮಲ ವೆಂಕಟರಮಣ ಏಳು ಬೆಟ್ಟಗಳಲ್ಲಿ ನೆಲೆಸಿದ ಸ್ವಾಮಿ. ವರಹಸ್ವಾಮಿಯು ವೆಂಕಟೇಶ್ವರ ಸ್ವಾಮಿಗೆ ಬಿಟ್ಟು ಕೊಟ್ಟಂತಹ ಜಾಗವೇ ಆ ಏಳು ಬೆಟ್ಟಗಳು. ಇನ್ನೂ ಈ ಬೆಟ್ಟಗಳಲ್ಲಿ ವರಹಸ್ವಾಮಿ ನೆಲೆಸಿದ ಪುರಾಣಿಕ ಕಥೆ ಇದೆ. ಹೌದು.. ಇದು ವಿಷ್ಣುವಿನ ದಶಾವತಾರದಲ್ಲಿ ಬರುವ ಮೂರನೇ ಅವತಾರ ವರಾಹ ಅವತಾರ.

[widget id=”custom_html-3″]

Advertisements

ಹಿರಣ್ಯಾಕ್ಷ ಭೂದೇವಿಯನ್ನು ಕದ್ದು ಅವಳನ್ನು ಪಾತಾಳದಲ್ಲಿ ಅಡಗಿಸಿ ಇಟ್ಟಿದ್ದ. ಭೂದೇವಿಯನ್ನು ಅಡಗಿಸಿಟ್ಟನು. ಇದರ ಸುತ್ತಲೂ ದೇವತೆಗಳು ಬರದಂತೆ ಮಲದ ಗೋಡೆ ನಿರ್ಮಿಸಿದನು. ಇದರಿಂದ ಯಾವೊಬ್ಬ ದೇವರಾಗಲಿ, ದೇವತೆಗಳಗಲಿ ಭೂ ದೇವಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಆಗ ವಿಷ್ಣು ವರಾಹ ರೂಪದಲ್ಲಿ ಪಾ’ತಾ’ಳಕ್ಕೆ ಹೋಗಿ ಮಲವನ್ನು ಸೇವಿಸಿ, ಭೂದೇವಿಯನ್ನು ತನ್ನ ಕೊಂಬಿನಿಂದ ಹಿಡಿದು ತಂದು ಬಿಡುತ್ತಾನೆ. ನಂತರ ಹಿರಣ್ಯಾಕ್ಷನನ್ನು ವರಾಹ ಸಂ’ಹ’ರಿಸಿ ವರಾಹ ಸ್ವಾಮಿಯ ಅವತಾರದಲ್ಲಿ ಭೂಮಿಯನ್ನು ಉದ್ಧರಿಸಿದ ಎಂದು ಹೇಳುತ್ತಾರೆ.

[widget id=”custom_html-3″]

ಈ ರೀತಿಯಾಗಿ ಹಿರಣ್ಯಾಕ್ಷನನ್ನು ಸಂಹಾರಿಸಿದ ವರಾಹ ಸ್ವಾಮಿಯನ್ನು ವೆಂಕಟೇಶನ ದರ್ಶನ ಮಾಡುವುದಕ್ಕಿಂತ ಮೊದಲು ದರ್ಶನ ಮಾಡುವುದು ವಾಡಿಕೆಯಲ್ಲಿದೆ. ನೀವು ಕೂಡ ತಿರುಮಲಕ್ಕೆ ಹೋದ ಸಂದರ್ಭದಲ್ಲಿ ವರಾಹ ಸ್ವಾಮಿಯ ದರ್ಶನವನ್ನು ಪಡೆಯಬೇಕು. ತಿರುಮಲದಲ್ಲಿರುವ ಸಂಪನ್ಮೂಲಗಳು ತಿಮ್ಮಪ್ಪನಿಗೆ ಸೇರಿದ್ದರು ಸಹ ಆ ಜಾಗದ ಮೂಲ ಒಡೆಯ ವರಾಹಸ್ವಾಮಿ. ಆ ವರಾಹನನ್ನು ಎಂದಿಗೂ ಬದಿಗೊತ್ತಬಾರದು ಅವನನ್ನು ಮರೆಯಬಾರದು ವೆಂಕಟೇಶ್ವರನ ದರುಷನಕ್ಕೆ ದಾರಿಮಾಡಿ ಕೊಟ್ಟ ಇವರನ್ನು ಬದಿಗೊತ್ತಬಾರದು ಎಂದು ಇವತ್ತಿಗೂ ಭೂ, ವರಾಹನಾಥ ಸ್ವಾಮಿ ದೇವಾಲಯಗಳಿಗೆ ಮೊದಲು ಹೋಗುವರು. ನಂತರ ಭಕ್ತರು ವೆಂಕಟೇಶನ ದರ್ಶನ ಪಡೆಯುತ್ತಾರೆ.

[widget id=”custom_html-3″]