Advertisements

ಪ್ರಾರಂಭ ಆಯ್ತು ತಿರುಪತಿ ತಿಮ್ಮಪ್ಪನ ದರ್ಶನ ! ಯಾವಾಗ ? ಏನೆಲ್ಲಾ ಕಂಡೀಷನ್ ? ಇಲ್ಲಿದೆ ಸಂಪೂರ್ಣ ಮಾಹಿತಿ

News

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದಕಾರಣ ಸುಮಾರು ಎರಡೂವರೆ ತಿಂಗಳಿಗಿಂತ ಹೆಚ್ಚು ಕಾಲ ನಿಂತುಹೋಗಿತ್ತು. ಈಗ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ ಬಂದಿದೆ. ಜೂನ್ ೧೧ರಿಂದ ವೆಂಕಟೇಶ್ವರ ಸ್ವಾಮಿಯ ದರ್ಶನ ಮತ್ತೆ ಪ್ರಾರಂಭವಾಗುತ್ತಿದೆ. ಆದರೆ ಕೆಲವೊಂದು ಕಂಡೀಷನ್ ಗಳ ಮೇಲೆ ನೀವು ತಿಮ್ಮಪ್ಪನ ದರ್ಶನ ಮಾಡಬಹುದಾಗಿದೆ.

Advertisements

ಸರ್ಕಾರ ಜಾರಿಗೆಗೊಳಿಸಿರುವ ಸುರಕ್ಷತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬಹುದಾಗಿದೆ.ಹೌದು, ಮೊದಲಿಗೆ ದಿನವೊಂದಕ್ಕೆ ೬೦ ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದರು ಎಂದು ಹೇಳಲಾಗಿದ್ದು, ಈಗಪ್ರತೀ ದಿನ ಕೇವಲ ೬ ಸಾವಿರ ಭಕ್ತರು ಮಾತ್ರ ಗೋವಿಂದನ ದರ್ಶನ ಮಾಡಲು ಅವಕಾಶ ಇದೆ. ಸಾಮಾಜಿಕ ಅಂತರ ಖಡ್ಡಾಯವಾಗಿ ಪಾಲಿಸಬೇಕಾಗಿದ್ದು ಒಬ್ಬರಿಂದ ಮತ್ತೊಬ್ಬರಿಗೆ ೬ ಅಡಿ ಅಂತರವಿರಲಿದೆ. ಜೊತೆಗೆ ಮಾಸ್ಕ್ ಧರಿಸುವುದು ಖಡ್ಡಾಯವಾಗಿದೆ ಎಂದು ಟಿಟಿಡಿ ಟ್ರಸ್ಟ್ ನವರು ತಿಳಿಸಿದ್ದಾರೆ.

ಇನ್ನು ಪ್ರತೀ ದಿನ ೧೩ ಗಂಟೆಗಳ ಕಾಲಬಾಲಾಜಿಯ ದರ್ಶನಕ್ಕೆ ಅವಕಾಶವಿದ್ದು, ೫೦೦ ಕ್ಕಿಂತ ಕಡಿಮೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಭಕ್ತರಿಗೆ ದರ್ಶನದ ಅವಕಾಶ ಕೊಡುವುದಕ್ಕೂ ಮೊದಲು ಅವರ ಪ್ರಯಾಣದ ಹಿಸ್ಟ್ರಿ ಹಾಗೂ ಸ್ಕ್ರೀನಿಂಗ್ ಮಾಡಲಾಗುವುದು ಎಂದು ಹೇಳಲಾಗಿದ್ದು, ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನ ಕ್ವಾರಂಟೈನ್ ಮಾಡಲಾಗುವುದು ಎಂದು ಟಿಟಿಡಿಯವರು ಹೇಳಿದ್ದಾರೆ.

ಇನ್ನು 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 10 ವರ್ಷದ ಮಕ್ಕಳಿಗೆ ದೇವಸ್ಥಾನಕ್ಕೆ ಅವಕಾಶ ನಿರಾಕರಿಸಲಾಗಿದೆ. ಇನ್ನು ಟಿಟಿಡಿ ಸಿಬ್ಬಂದಿಯವರು ಕೂಡ ಪಿಪಿಇ ಸೂಟ್ ಧರಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಆನ್ಲೈನ್ ನಲ್ಲಿ ಪ್ರತೀದಿನ ೩ ಸಾವಿರ ವಿಶೇಷ ದರ್ಶನದ ಟಿಕೆಟ್ ಗಳು ಸಿಗಲಿದ್ದು, ಪ್ರತೀ ಟಿಕೆಟ್ ಗೆ 300ರೂಗಳ ದರ ನಿಗಧಿಪಡಿಸಲಾಗಿದೆ. ಇನ್ನುಳಿದ 3 ಸಾವಿರ ಟಿಕೆಟ್ ಗಳು ಉಚಿತವಾಗಿ ಸಿಗಲಿದ್ದು ನಿಗದಿತ ಸ್ಥಳದಲ್ಲಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ. ಇನ್ನು ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರು ಇದ್ದರೆ, ಜೂನ್ 8 ರಿಂದ ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.