Advertisements

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ !

News

ಕರೋನಾ ಹಿನ್ನಲೆಯಲ್ಲಿ ತಿರುಪತಿ ಸೇರಿದಂತೆ ದೇಶದ ದೊಡ್ಡ ದೊಡ್ಡ ದೇವಸ್ಥಾನಗಳು ಬಾಗಿಲು ಮುಚ್ಚಿವೆ. ಇನ್ನು ಜಗತ್ತಿನ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವ ಲಡ್ಡು ತುಂಬಾ ಫೇಮಸ್. ಈಗ ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿಯೊಂದು ಬಂದಿದೆ.

Advertisements

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು ಲಡ್ಡು ಇಲ್ಲದೆ ವಾಪಸ್ ಬರೋದಿಲ್ಲ. ಇನ್ನು ಇಲ್ಲಿ ಸಿಗುವ ಲಡ್ಡು ಪ್ರಸಾದ ರುಚಿ ಬೇರೆಲ್ಲೂ ಸಿಗೋದಿಲ್ಲ. ಯಾರೇ ತಿರುಪತಿಗೆ ಹೋದರು ಲಡ್ಡು ಪ್ರಸಾದ ತೆಗೆದುಕೊಂಡು ಬಂದು ತಮ್ಮ ಅಕ್ಕ ಪಕ್ಕದ ಮನೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಏಕೆಂದರೆ ತಿರುಪತಿಗೆ ಹೋಗಿ ಬಂದ ಮೇಲೆ ಮೊದಲು ಎಲ್ಲರೂ ಕೇಳೋದು ಲಡ್ಡು ಪ್ರಸಾದ ಎಲ್ಲಿ ಅಂತ. ಅಷ್ಟರ ಮಟ್ಟಿಗೆ ಫೇಮಸ್ ಆಗಿದೆ ತಿಮ್ಮಪ್ಪನ ಲಡ್ಡು.

ಈಗ ಟಿಟಿಡಿ ಟ್ರಸ್ಟ್ ನವರೇ ಅಧಿಕೃತವಾಗಿ ಮಾಹಿತಿಯೊಂದನ್ನ ಹೊರಹಾಕಿದ್ದಾರೆ. ಈ ಮೊದಲು 50ರುಗಳಿಗೆ ಸಿಗುತ್ತಿದ್ದ ಒಂದು ಲಡ್ಡು, ಈಗ 25ರೂಪಾಯಿಗಳಿಗೆ ಸಿಗಲಿದೆ. ಅದು ಬೆಂಗಳೂರಿನಲ್ಲೇ. ಮಾಹಿತಿಗಳ ಪ್ರಕಾರ ಲಡ್ಡು ಪ್ರಸಾದದಕ್ಕಾಗಿ ಈ ಮೊದಲೇ ಸಾಮಗ್ರಿಗಳನ್ನ ಸಂಗ್ರಹಿಸಿ ಇಡಲಾಗಿದ್ದು, ದಿನಕಳೆದಂತೆ ಸಾಮಗ್ರಿಗಳು ಕೆಟ್ಟುಹೋಗುವ ಪರಿಸ್ಥಿತಿ ಎದುರಾಗಿದೆ. ಇನ್ನು ಲಾಕ್ ಡೌನ್ ಇರುವ ಕಾರಣ ದೇವಸ್ಥಾನಕ್ಕೆ ಬರುವ ಜನ ಕೂಡ ಕಡಿಮೆಯಾಗಿದ್ದಾರೆ. ಹಾಗಾಗಿ ಬರುವ ನಷ್ಟವನ್ನ ತಪ್ಪಿಸಲು ನಮ್ಮ ಬೆಂಗಳೂರು ಸೇರಿದಂತೆ ಹೈದರಾಬಾದ್, ಚೆನ್ನೈ ನಲ್ಲಿ ಲಡ್ಡು ಕಡಿಮೆ ದರಕ್ಕೆ ಸಿಗಲಿದೆ ಎಂದು ಹೇಳಲಾಗಿದೆ.