ನಮಸ್ತೆ ಸ್ನೇಹಿತರೆ, ಈ ದಿನ ಅಕ್ಷಯ ತೃತೀಯ.. ಇನ್ನೂ ಈ ದಿನ ಚಿನ್ನ ಖರೀದಿ ಮಾಡಿದರೆ ತುಂಬಾ ಒಳ್ಳೆಯದು ಅಂತಾರೆ.. ಅಥವಾ ಈ ದಿನ ದಾನ ಮಾಡಿದರೆ ಜೀವನದುದ್ದಕ್ಕೂ ನಿಮಗೆ ಒಳ್ಳೆಯದಾಗುತ್ತದೆ ಎಂದು ಕೂಡ ಹೇಳ್ತಾರೆ. ಇನ್ನೂ ಅಕ್ಷಯ ತೃತೀಯದ ದಿನ ಚಿನ್ನದ ಬೆಲೆ ಎಷ್ಟಾಗಿದೆ ನೀವು ಚಿನ್ನ ಖರೀದಿ ಮಾಡಬೇಕಾದ್ರೆ ಲಾಕ್ಡೌನ್ ಸಮಯದಲ್ಲಿ ಏನು ಮಾಡ್ಬೇಕು ಎಂದು ತಿಳಿಯೋಣ.. ಇನ್ನೂ ಅಕ್ಷಯ ತೃತೀಯ ಅಂತ ಅಂದರೆ ಕ್ಷಯ ಇಲ್ಲದ ದಿನ ಅಂದರೆ ಅಂ’ತ್ಯವಿಲ್ಲದ ದಿನ ಎಂದರ್ಥ ಈ ದಿನ ಚಿನ್ನವೇನಾದ್ರೂ ಖರೀದಿ ಮಾಡಿದರೆ ಅದು ಶಾಶ್ವತವಾಗಿ ನಮ್ಮ ಜೊತೆ ಇರುತ್ತದೆ.

ಮತ್ತು ಹಣ ಸಂಪತ್ತು ಎಂದಿಗೂ ಕೂಡ ಬರಿದಾಗುವುದಿಲ್ಲ.. ಆದರೆ ಈಗ ಕ’ರೋನ ಪ್ರಭಾವದಿಂದ ಅಂಗಡಿಗಳನ್ನು ಮುಚ್ಚಲಾಗಿದೆ.. ಲಾಕ್ ಡೌನ್ ಜಾರಿಯಲ್ಲಿದ್ದು ಅನಗತ್ಯವಾಗಿ ಹೊರಗಡೆ ಸುತ್ತಾಡುವಂತಿಲ್ಲ. ಈಗಿರುವಾಗ ಮನೆಯಲ್ಲೇ ಇದ್ದುಕೊಂಡು ಆನ್ ಲೈನ್ ಮೂಲಕ ಚಿನ್ನವನ್ನ ಖರೀದಿ ಮಾಡಬಹುದು.. ಗೂಗಲ್ ಪೇ, ಪೋನ್ ಪೇ ಮತ್ತು ಹಲವು ಆನ್ಲೈನ್ ಗಳಲ್ಲಿ ನೀಚು ವರ್ಚಿಯಲ್ ಚಿನ್ನವನ್ನ ಖರೀದಿ ಮಾಡಬಹುದು.

ಇನ್ನೂ ಇವತ್ತು ಅಕ್ಷಯ ತೃತೀಯ ಇರುವ ಕಾರಣ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಚಿನ್ನದ ಬೆಲೆ ಕೊಂಚಮಟ್ಟಿಗೆ ಏರಿಕೆಯಾಗಿದೆ. 10 ಗ್ರಾಂ 22 ಕ್ಯಾರೇಟ್ ನ ಚಿನ್ನದ ಬೆಲೆ 44500 ರುಪಾಯಿ ಆಗಿದೆ.. ಅಂದರೆ ಒಂದು ಗ್ರಾಂ ಗೆ 4450 ರುಪಾಯಿ ಆಗಿದೆ. ಇನ್ನೂ ಅರ್ಥಿಕ ತಜ್ಞರ ಪ್ರಕಾರ ಚಿನ್ನದ ಬೆಲೆ ಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಿ 5000 ಗಡಿ ದಾಟಲಿದೆ ಎಂದು ತಿಳಿಸಿದ್ದಾರೆ.. ನೀವು ಚಿನ್ನ ಖರೀದಿ ಮಾಡಲು ಇದೇ ಸೂಕ್ತವಾದ ಸಮಯ. ಇನ್ನೂ ಇಂದು ಅಕ್ಷಯ ತೃತೀಯ ಆಗಿರೋದ್ರಿಂದ ನೀವು ಕೂಡ ಚಿನ್ನವನ್ನ ಖರೀದಿ ಮಾಡ್ತಿರಾ..