Advertisements

ಈ ದಿನ ಕರುಣಾಮಯಿ ಸುಧಾಮೂರ್ತಿ ಅವರ ಹುಟ್ಟುಹಬ್ಬ. ಯಾರೆಲ್ಲ ಗಣ್ಯವ್ಯಕ್ತಿಗಳು ಶುಭಾಶಯ ಕೋರಿದ್ದಾರೆ ನೋಡಿ.

News

ನಮಸ್ತೆ ಸ್ನೇಹಿತರೆ. ಕನ್ನಡಿಗರ ಮನದಾಳದಲ್ಲಿ ಸದಾ ನೆಲೆಸಿರುವ ನಿಸ್ವಾರ್ಥ ಜೀವಿ ಸುಧಾ ಮೂರ್ತಿ ಅಮ್ಮನವರ ಈ ಹುಟ್ಟು ಹಬ್ಬದಂದು ಸದಾ ಭಗವಂತ ಸುಧಾ ಮೂರ್ತಿ ಅಮ್ಮವರಿಗೆ ಆರೋಗ್ಯ ಆಯುಷ್ಯ ಸಂಪತ್ತನ್ನು ವೃದ್ಧಿಸಲಿ ಎಂದು ಎಲ್ಲರೂ ಆ ದೇವರಲ್ಲಿ ಕೇಳಿಕೊಳ್ಳೋಣ‌. ಸ್ನೇಹಿತರೆ ಕರ್ನಾಟಕದಲ್ಲಿ ಏನೆ ವೀಪರೀತ ಸಂಕಷ್ಟ ಒದಗಿದರೂ ಸದಾ ಬೆನ್ನೆಲುಬಾಗಿ ಸುಧಾಮೂರ್ತಿ ಅಮ್ಮನವರು ನಿಲ್ಲುತ್ತಾರೆ. ಈ ಹಿಂದೆ ವರ್ಷದಲ್ಲೂ ಕೂಡ ವೀಪರೀತ ಪ್ರವಾಹಗಳು ಉಂಟಾಗಿ ಮನೆಗಳನ್ನು ಕಳೆದುಕೊಂಡು ಜನರು ಒಂದು ತುತ್ತಿನ ಊಟಕ್ಕೆ ಪರದಾಡುತ್ತಿದ್ದರು. ಈ ಸಮಯದಲ್ಲಿ ಸುಧಾಮೂರ್ತಿ ಅಮ್ಮನವರು ಜನರ ಸಂಕಷ್ಟಕ್ಕೆ ನಿಂತಿದ್ದರು. ಇನ್ನೂ ಚೀನಾದಲ್ಲಿ ಸೃಷ್ಟಿಯಾದ ಮಹಾಮಾರಿಯಿಂದ ಭಾರತಕ್ಕೆ ವಕ್ಕರಿಸಿ ಕೊನೆಗೆ ಕರುನಾಡಿಗೂ ಸಹ ಬಂದು ಮುಟ್ಟಿತ್ತು. ಜನರು ವಿಪರೀತ ಸಂಕಷ್ಟಕ್ಕೆ ಸಿಲುಕಿ ಜನರ ಜೀವನ ಅಸ್ತವ್ಯಸ್ತವಾಗಿತ್ತು. ಇನ್ನೂ ಈ ಪರಸ್ಥಿತಿಯಲ್ಲಿ ಕೂಡ ಸುಧಾ ಮೂರ್ತಿಅಮ್ಮನವರು ಸಹಾಯ ಅಸ್ತವನ್ನು ಚಾಚಿದ್ದಾರೆ. ಇಷ್ಟೇ ಅಲ್ಲದೆ ಒಟ್ಟಾಗಿ ಕರ್ನಾಟಕಕ್ಕೆ ಎನೇ ಸಂಕಷ್ಟ ಬಂದರೂ ಕರುಣಾಮಯಿ ಸುಧಾ ಮೂರ್ತಿ ಅಮ್ಮನವರು ಜೊತೆಯಾಗಿರುತ್ತಾರೆ.

Advertisements

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರ ಈ ದಿನ 70ನೇ ಜನ್ಮ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಸುಧಾಕರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಸುಧಾಮೂರ್ತಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಕಾರ್ನಾಟಕದ ಸಿ.ಎಂ ಯಡಿಯೂರಪ್ಪ ಅವರು ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಈ ರೀತಿ ಬರೆದುಕೊಂಡು ಸುಧಾಮೂರ್ತಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಸಿದ್ಧ ಲೇಖಕರು, ರಾಜ್ಯದ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆಯಾಗಿ ಸಕ್ರಿಯರಾಗಿರುವ, ಜನರ ಸಂಕಷ್ಟಕ್ಕೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

ವೈದ್ಯಕೀಯ ಹಾಗೂ ಶಿಕ್ಷಣ ಸಚಿವ ಸುದಾಕರ್ ಅವರು ಸಹ ಸುಧಾಮೂರ್ತಿ ಮೇಡಮ್ ಅವರಿಗೆ ಟ್ವೀಟ್ ನಲ್ಲಿ ಈ ರೀತಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಕನ್ನಡನಾಡಿನ ಹೆಮ್ಮೆಯ ಪುತ್ರಿ, ಮಮತೆ ವಾತ್ಸಲ್ಯಗಳ ಸಾಕಾರ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಾಧನೆ ಮತ್ತು ಸೇವೆಯಿಂದ ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಇದೇ ರೀತಿ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಹ ಶುಭಾಶಯಗಳನ್ನು ಕೋರಿದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಾಮಾಜಿಕ ಹೊಣೆಗಾರಿಕೆ, ನಿಷ್ಕಲ್ಮಶ ಮಾನವ ಪ್ರೀತಿ ಅನುಕರಣೀಯ. ಸಮಾಜದ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಮಾತೃ ಹೃದಯಕ್ಕೆ ನಾನು ಸದಾ ಶರಣು. ಸುಧಾಮೂರ್ತಿ ಅವರು ನೂರ್ಕಾಲ ಆರೋಗ್ಯವಾಗಿರಲೆಂದು ಅವರ ಜನ್ಮದಿನದಂದು ಶುಭ ಕೋರುತ್ತೇನೆ.

ಹಾಗೆ ಕನ್ನಡಿಗರು ಸಹ ಸುಧಾ ಮೂರ್ತಿ ಅಮ್ಮನವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿ ಅವರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ತಿಳಿಸುತ್ತಿದ್ದಾರೆ. ನಿಮ್ಮ ಸರಳ ವ್ಯಕ್ತಿತ್ವದ ಪರಿಚಯ ಎಲ್ಲರಿಗೂ ಅರ್ಥವಾದರೆ ಈ ಜಗತ್ತು ಎಷ್ಟು ಸುಂದರ ಮತ್ತು ದಾರಿದ್ರ್ಯ ತಾನಾಗಿಯೇ ಓಡಿಹೊಗುತ್ತದೆ. ಆಡಂಬರದ ಜೀವನದಿಂದ ಈ ಭೂಮಿ ವಿನಾಶದ ಅಂಚಿಗೆ ಬಂದಿದ್ದೆ. ನಿಮ್ಮ ಜೀವನ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಹುಟ್ಟು ಹಬ್ಬದ ಶುಭಾಶಯಗಳು.