Advertisements

ತೂಗುದೀಪ ಶ್ರೀನಿವಾಸ್ ಅವರ ಮನೆ ಮತ್ತು ಬೈಕ್ ಮೊದಲ ಬಾರಿಗೆ ನೋಡಿ.. ಅಷ್ಟಕ್ಕೂ ಈ ಮನೆ ಕಟ್ಟಿಸಿ ಕೊಟ್ಟ ಸ್ಟಾರ್ ನಟ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 1943 ರಲ್ಲಿ ಮೈಸೂರಿನಲ್ಲಿ ಹುಟ್ಟಿದ ತೂಗುದೀಪ ಶ್ರೀನಿವಾಸ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ಪೋಷಕರನ್ನ ಕಳೆದುಕೊಂಡರು.. ಎಂಟು ಜನ ಒಡಹುಟ್ಟಿದವರ ಮಧ್ಯೆ ಪ್ರೀತಿಯಿಂದ ಬೆಳೆದ ತೂಗುದೀಪ ಶ್ರೀನಿವಾಸ್ ಅವರಿಗೆ ಮೊದಲಿನಿಂದ ನಟನೆಯ ಬಗ್ಗೆ ಅಪಾರ ಪ್ರೀತಿ.. ಬಿಎಸ್ಸಿ ಓದುತ್ತಿದ್ದಾಗ ಎಂಪಿ ಶಂಕರ್ ಅವರ ನಾಟಕ ತಂಡ ಸೇರಿಕೊಂಡ ಶ್ರೀನಿವಾಸ್ ಅವರು ಓದನ್ನ ಮಧ್ಯೆದಲ್ಲಿ ನಿಲ್ಲಿಸಿದರು. ನಂತರ ನಾಟಕ, ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಟ್ಟು ಅಭಿಮಾನಿಗಳನ್ನ ಗಳಿಸಿಕೊಂಡ್ರು..

Advertisements

ಇಲ್ಲಿ ಮತ್ತೊಂದು ಮುಖ್ಯವಾದ ಸಂಗತಿ ಅಂದರೆ. ಡಾ.ರಾಜ್ ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಅವರ ಮಧ್ಯೆ ಇದ್ದ ಪರಿಶುದ್ಧ ಸ್ನೇಹ. ಹೌದು.. ಇಬ್ಬರೂ ತುಂಬಾ ಪ್ರೀತಿಯ ಸ್ನೇಹಿತರಾಗಿದ್ದರು.. ಎಷ್ಟರ ಮಟ್ಟಿಗೆ ಅಂದರೆ ತಾವು ನಟಿಸುವ ಎಲ್ಲಾ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್ ಇರುವಂತೆ ನೋಡಿಕೊಳ್ಳುತ್ತಿದ್ದರು ಡಾ.ರಾಜ್ ಕುಮಾರ್. ಕಾರಣ ಅವರಿಬ್ಬರ ಸ್ನೇಹದಿಂದ ಒಳ್ಳೆಯ ಮನರಂಜನೆ ಹೊರಬರುತ್ತಿತ್ತು.. ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಕನಸಿತ್ತು. ಅದೇನೆಂದರೆ ತನ್ನ ಹುಟ್ಟೂರು ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಅನ್ನೋದು. ಮನೆ ಕಟ್ಟಲು ಆರಂಭಿಸಿದರಾದ್ರೂ ಮಧ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾಯಿತು..

ಆಗ ಪ್ರೀತಿಯ ಸ್ನೇಹಿತ ಡಾ. ರಾಜ್ ಅವರು ಇವರ ಸಹಾಯಕ್ಕೆ ಬಂದು ತೂಗುದೀಪ ಶ್ರೀನಿವಾಸ್ ಅವರು ತಮ್ಮ ಕನಸಿನ ಮನೆ ಪೂರ್ಣಗೊಳಿಸುವಲ್ಲಿ ಸಹಾಯ ಮಾಡಿದ್ರು.. ಅದೇ ಕಾರಣಕ್ಕೆ ಮನೆಗೆ ಮುಪಾ ಕೃಪಾ ಎಂದು ಹೆಸರಿಟ್ಟರು ತೂಗುದೀಪ ಶ್ರೀನಿವಾಸ್. ಅಂದರೆ ಮುತ್ತುರಾಜ್ ಹಾಗೂ ಪಾರ್ವತಮ್ಮ ಕೃಪಾ ಎಂದು.. ಇದೆ ಅಲ್ವಾ ಸ್ನೇಹ ಅಂದರೆ. ಇದೇ ನೋಡಿ ತೂಗುದೀಪ ಶ್ರೀನಿವಾಸ್ ಅವರು ಕಟ್ಟಿಸಿದ ಮನೆ. ಅವರ ಕನಸಿನ ಮನೆ.. ಈಗಲೂ ಮೈಸೂರಿನಲ್ಲಿ ಇದೆ.

ಮೈಸೂರಿನಲ್ಲಿ ತುಂಬಾ ಸ್ನೇಹಿತರನ್ನ ಒಂದಿದ್ದ ಕಾರಣ ಶೂಟಿಂಗ್ ಇಲ್ಲ ಅಂದರೆ ಬೆಳಗ್ಗೆ ತಿಂಡಿ ತಿಂದು ಇದೇ ಲೂನಾದಲ್ಲಿ ತಮ್ಮ ಸ್ನೇಹಿತರನ್ನ ಬೇಟಿಯಾಗಲು ಹೋಗುತ್ತಿದ್ದರು ಶ್ರೀನಿವಾಸ್ ಅವರು.. ಸಂತೋಷವಾಗಿದ್ದ ಈ ನಟನ ಜೀವನದಲ್ಲಿ ವಿಧಿ ಆಟ ಆಡಿತು. ಶ್ರೀನಿವಾಸ್ ಅವರಿಗೆ ಆರೋಗ್ಯ ಸಮಸ್ಯೆ ಆಯಿತು.. ಆಗ ಅವರ ಪತ್ನಿ ಮೀನಾ ಅವರು ತಮ್ಮ ಕಿಡ್ನಿಯನ್ನು ಪ್ರೀತಿಯ ಗಂಡನಿಗೆ ಕೊಟ್ಟರು.. ಅದಾಗ್ಯೂ ಒಂಬತ್ತು ದಿನಕ್ಕೆ ಇಹಲೋಕ ತ್ಯ’ಜಿಸಿದರು ತೂಗುದೀಪ ಶ್ರೀನಿವಾಸ್ ಅವರು ಅನ್ನೋದು ತುಂಬಾ ನೋವಿನ ಸಂಗತಿ.