ನಮಸ್ತೆ ಸ್ನೇಹಿತರೆ, ತಾನು ಮಾಡದ ತಪ್ಪಿಗೆ ಪಡಬಾರದ ಕಷ್ಟಪಟ್ಟ ಆಮೆ ಇಲ್ಲಿದೆ.. ಅಯ್ಯೋ ಏನಿದು ಆಮೆ ಕಷ್ಟಕ್ಕೆ ಸಿಲುಕಿದಿಯಾ ಅದು ಕೂಡ ಮಾಡದ ತಪ್ಪಿಗೆ ಪಾಪ ಮೂಕ ಪ್ರಾಣಿ.. ಇದೇನು ಅಂತದ್ದು ತಪ್ಪು ಮಾಡಿತು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಕಾಲದಲ್ಲಿ ಪ್ಲಾಸ್ಟಿಕ್ ಬಹಳ ಉಪಯೋಗಿಸುವುದರಿಂದ ಎಲ್ಲಾ ಕಡೆ ಪ್ರಪಂಚದಲ್ಲಿ ಒಂದು ಬೀಚ್ ಗೆ ಹೋದರು ಸಹ.. ಅಥವಾ ರೋಡ್ ಗಳ ಆಕಡೆ, ಈಕಡೆ ಎಲ್ಲಾ ಕಡೆ ಪ್ಲಾಸ್ಟಿಕ್ ಎಸೆದು ಪೊಲಿಷನ್ ಮಾಡುತ್ತಾರೆ ನಮ್ಮ ಜನ. ಈ ಪ್ಲಾಸ್ಟಿಕ್ ಮಾಲಿನ್ಯ ಕೇವಲ ಸಮುದ್ರ ಜಲ ಮೂಲಗಳು ಮಾತ್ರವಲ್ಲದೇ ನಮ್ಮ ಭೂಮಿಯ ಮೇಲೆ 275 ಮಿಲಿಯನ್ ಟನ್ಸ್ ಈಗೆ 192 ದೇಶಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯವಾಗಿದೆ ಎಂದು ಬಲ್ಲ ಮೂಲಗಳಿಂದ ಬಂದ ಮಾಹಿತಿ..
ಈಗೆ ಒಂದು ಗುಂಪಿನ ಜನಕ್ಕೆ ಒಂದು ವಿಶಿಷ್ಠವಾದ ಆಮೆ ದೊರಕಿದೆ. ಅದಕ್ಕೆ 19 ವರ್ಷ ವಯಸ್ಸು ಆಶ್ಚರ್ಯ ಏನೆಂದರೆ ಸಮುದ್ರದಲ್ಲಿ ಯಾರೋ ಎಸೆದಿರುವ ಇಲ್ಲಿ ಕಾಣುತ್ತಿರುವ ಈ ಆಮೆಗೆ ಉಂಗುರ ಆಕಾರದ ರಿಂಗ್ ತನ್ನ ಮೈಗೆ ಸಿಕ್ಕಿ ಹಾಕಿಕೊಂಡಿದೆ.. ಅದನ್ನ ತೆಗೆಯಲು ಅದೆಷ್ಟೋ ಸಲ ಆಮೆ ಪ್ರಯತ್ನಿಸಿದರೂ ಕೂಡ ಅದು ಆಗಲಿಲ್ಲ. ಇದರಿಂದ ಆಮೆಯ ಶರೀರ ಆಗೆ ಕಂಪ್ರೆಸ್ ಹಾಗಿ ಅದೇ ಆಕಾರದಲ್ಲಿ ಉಳಿದುಬಿಟ್ಟಿದೆ..
ಮತ್ತು ಈ ಉಂಗುರುದಿಂದ ಆಮೆಗೆ ಅದೆಷ್ಟು ನೋವು ಯಾವ ರೀತಿ ಆಗಿರಬಹುದು ಒಮ್ಮೆ ಯೋಚಿಸಿ. ಆ ಆಮೆ ಆಗೆ ಬೆಳೆಯುವಾಗ ಎಷ್ಟು ಕಷ್ಟ ಪಟ್ಟಿರಬೇಕು.. ನಾವೇಲ್ಲ ಮಕ್ಕಳು ಅಥವಾ ದೊಡ್ಡೋರಿಗೆ ಒಂದು ಉಗುರು ಕಿತ್ತೊದ್ರೇನೆ ಅಯ್ಯೋ ಪ್ರಪಂಚಾನೆ ಮುಳುಗೋಯ್ತು ಅನ್ನುವಷ್ಟು ನೋವು ಅಂತೀವಿ. ಅಂತದ್ರಲ್ಲಿ ಮೂಕ ಪ್ರಾಣಿ ಎಷ್ಟು ಬಾಧೆಯಾಗಿರಬೇಕು.. ಪ್ರಾಣಿ ಪಕ್ಷಿ ಪ್ರಕೃತಿಯು ಎಲ್ಲವೂ ಕೂಡ ಕ್ಷೇಮವಾಗಿ ಇರಬೇಕೆಂದರೆ ಯಾವಾಗಲೂ ಮುಖ್ಯವಾಗಿ ಪರಿಸರವನ್ನ ಕ್ಷೇಮವಾಗಿ ನೋಡಿಕೊಳ್ಳಿ..