Advertisements

ಆಟೋಗೆ 47,500 ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸ್ ! ನಂತರ ಆಟೋ ಡ್ರೈವರ್ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಟ್ರಾಪಿಕ್ ಪೋಲಿಸರು ಹಲವರನ್ನ ಹಿಡಿಯೋದನ್ನ ಪೈನ್ ಆಕೋದನ್ನ ನೀವು ನೋಡಿರ್ತಿರಾ. ಕೆಲವು ಬಾರಿ ಹೆಲ್ಮೆಟ್ ಹಾಕದೆ ಇರುವುದು ಡಾಕ್ಯುಮೆಂಟ್ಸ್ ಇಲ್ಲದೇ ವಾಹನವನ್ನು ಚಲಾಯಿಸುತ್ತಿದ್ದರೆ ನಮ್ಮನ್ನು ಪೋಲಿಸರು ಹಿಡಿದು ವಿಚಾರಿಸಿರುತ್ತಾರೆ ಮತ್ತು ಜೊತೆಗೆ ಪೈನ್ ಕೂಡ ಹಾಕುತ್ತಾರೆ.. ಅದೇ ರೀತಿ ಒಂದು ಆಟೋವನ್ನು ಹಿಡಿದು ಟ್ರಾಪಿಕ್ ಪೋಲಿಸರು 47,500 ರೂಪಾಯಿ ಡಂಡವನ್ನು ಹಾಕಿದ್ದಾರೆ.. ಈ ದಂಡವನ್ನು ಹಾಕುತ್ತಿದ್ದಂತೆಯೇ ಆಟೋ ಚಾಲಕ ಮಾಡಿದ ಕೆಲಸಕ್ಕೆ ಅಲ್ಲಿನ ಪೋಲಿಸ್ ಕಮೀಷನರ್ ಕೂಡ ನಡುಗಿ ಹೋಗಿದ್ದಾರೆ.. ಇಷ್ಟೊಂದು ಪೈನ್ ಹಾಕಲು ಕಾರಣವಾದ್ರೂ ಏನು ಮತ್ತು ಆಟೋ ಡ್ರೈವರ್ ಚಾಲಕ ಮಾಡಿದಾದ್ರೂ ಏನು ಅನ್ನುವದನ್ನ ತಿಳಿಯೋಣ..

Advertisements

ಇಡೀ ಭಾರತದಾದ್ಯಂತ ಹೊಸ ವಾಹನ ಕಾಯ್ದೆ ಬಂದಾಗಿನಿಂದಲೂ ಸಹ ಎಲ್ಲಾ ಪೈನ್ ಹಣವನ್ನು ಹತ್ತು ಪಟ್ಟು ಜ್ಯಾಸ್ತಿ ಮಾಡಲಾಯಿತು.. ಸಾಮಾನ್ಯ ಜನರು ಇದರಿಂದ ತುಂಬಾ ತೊಂದರೆಗಳನ್ನು ಅನುಭವಿಸುತ್ತಾ ಇದ್ದಾರೆ. ಆದರೆ ಇಲ್ಲೊಬ್ಬ ಟ್ರಾಫಿಕ್ ಪೋಲಿಸ್ ಆಟೋಗೆ 47,500 ರೂಪಾಯಿಯನ್ನು ಪೈನ್ ಹಾಕಿದ್ದಾರೆ.. ಈ ವಿಚಾರ ಬರುತ್ತಿರುವುದು ಒಡಿಶಾದ ಭುಬನೇಶ್ವರ್ ನಿಂದ.. ರಮೇಶ್ ಎಂಬುವ ಆಟೋ ಡ್ರೈವರ್ ಜನಗಳನ್ನು ಕೂರಿಸಿಕೊಂಡು ಹೋಗುತ್ತಿದ್ದ.. ಆಗ ಪೋಲಿಸ್ ಆಟೋವನ್ನು ನಿಲ್ಲಿಸಿ ಇನ್ಶುರೆನ್ಸ್, ಆರ್.ಸಿ ಬುಕ್, ಡಿಎಲ್ ಎಲ್ಲವನ್ನೂ ವಿಚಾರಿಸುತ್ತಾರೆ.. ಆದರೆ ರಮೇಶ್ ಅವರ ಬಳಿ ಇದು ಯಾವುದು ಇರಲಿಲ್ಲ.

ಅದಕ್ಕಾಗಿ ಹಿಂದೆ ಮುಂದೆ ನೋಡದೆ ಬರೋಬ್ಬರಿ 47,500 ರೂಪಾಯಿ ಪೈನ್ ಕಟ್ಟಲು ಟ್ರಾಪಿಕ್ ಪೋಲಿಸ್ ಹೇಳುತ್ತಾರೆ.. ಇಷ್ಟೊಂದು ದಂಡವನ್ನು ನೋಡಿದ ರಮೇಶ್ ಕೂಡಲೇ ಕಣ್ಣೀರು ಹಾಕಲು ಶುರುಮಾಡುತ್ತಾರೆ.. ಹಾಗೆ ಮಧ್ಯ ರಸ್ತೆಯಲ್ಲಿ ಜೋರಾಗಿ ಕಿರುಚಾಡುತ್ತ ಧರಣಿಗೆ ಕೂತುಬಿಡುತ್ತಾನೆ.. ನಾನು ಒಬ್ಬ ಸಾಮಾನ್ಯ ಆಟೋ ಡ್ರೈವರ್ ಈ ಆಟೋವನ್ನೇ ಲೋನ್ ನಲ್ಲಿ ಪಡೆದಿದ್ದೇನೆ, ದಿನಕ್ಕೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಮಾಡಿದ್ರೆನೇ ಹೆಚ್ಚು.. ಅಂತದ್ರಲ್ಲಿ 47,500 ರೂಪಾಯಿ ದಂಡ ಕಟ್ಟುವ ಬದಲು ನೀವೆ ಈ ಆಟೋವನ್ನು ಇಟ್ಟುಕೊಳ್ಳಿ.. ಅದರಲ್ಲಿ ಬಂದ ಹಣದಲ್ಲಿ 47,500 ರೂಪಾಯಿ ಇಟ್ಟುಕೊಂಡು ಮಿಕ್ಕಿದ ಹಣವನ್ನು ಕೊಟ್ಟುಬಿಡಿ ಎಂದು ಹೇಳುತ್ತಾರೆ..

ಆಗ ಟ್ರಾಫಿಕ್ ಪೋಲಿಸ್ ಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.. ಅಷ್ಟರಲ್ಲೇ ಅಲ್ಲಿದ್ದ ಜನರು ಮೀಡಿಯಾದವರಿಗೆ ಪೋನ್ ಮಾಡಿ ಕರೆಯುತ್ತಾರೆ.. ನಂತರ ಈ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಆಗಿ ಮಾಡಿಬಿಡುತ್ತಾರೆ.. ಈ ಸುದ್ದಿಯನ್ನು ತಿಳಿದ ಅಲ್ಲಿನ ಪೋಲಿಸ್ ಕಮೀಶನರ್ ಇಲ್ಲಿಗೆ ಬಂದು ಟ್ರಾಫಿಕ್ ಪೋಲಿಸರಿಗೆ ಸರಿಯಾಗಿ ಬೈದು ಆಟೋ ಚಾಲಕನಿಗೆ ಆಟೋವನ್ನ ವಾಪಸ್ ಮಾಡಿ ಮುಂದಿನ ಬಾರಿ ಈಗೆ ಮಾಡಬೇಡ‌‌.. ಈಗ ನಿನ್ನ ಕೆಲಸಕ್ಕೆ ಹೋಗು ಎಂದು ಕಳಿಸುತ್ತಾರೆ‌.. ಸ್ನೇಹಿತರೆ ಅಟೋ ಡ್ರೈವರ್ ಮತ್ತು ಟ್ರಾಪಿಕ್ ಪೋಲಿಸ್ ಇವರಿಬ್ಬರಲ್ಲಿ ತಪ್ಪು ಯಾರದ್ದು ಎಂದು ಕಮೆಂಟ್ ಮಾಡುತ್ತಾ.. ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..