Advertisements

ರೈಲು ಭೋಗಿಗಳ ಮೇಲೆ ಈರುವ ಈ ನಂಬರ್ ಗಳ ರಹಸ್ಯವೇನು ಗೊತ್ತಾ?

Kannada Mahiti

ಈ ರೈಲಿನ ಪ್ರಯಾಣ ಒಂಥರಾ ಖುಷಿ ಕೊಡುತ್ತಲ್ವಾ.. ನಿಧಾನಕ್ಕೆ ಹೋಗುತ್ತೆ ಕೆಲವೊಂದು ಟ್ರೈನ್ಸ್ ಅನ್ನೋದು ಬಿಟ್ರೆ ರೈಲಿನ ಪ್ರಯಾಣ ಸುಖಕರ ಹಾಗೂ ಆಹ್ಲಾದಕರ, ಸದಾ ಬಸ್ ಅಲ್ಲಿಯೇ ಓಡಾಡುತ್ತಿದ್ದವರು ಒಂದೇ ಸಲ ಸ್ಟೇಷನ್‌ಗೆ ಹೋದ್ರೆ ದಂಗಾಗಿ ಬಿಡುತ್ತಾರೆ, ಆ ಜನರು, ಒಂದೊಂದು ಟ್ರೈನ್ ಬಂದಾಗಲೂ ಕಿ’ಕ್ಕಿರಿದು ಬರೋ ಜನರು, ರೈಲು ಹತ್ತಲು ಗುಂಪಾಗಿ ಕಾಯೋ ಜನರು ಅಬ್ಬಾ ಆ ರೈಲ್ವೆ ಸ್ಟೇಷನ್ ಜನಜಂಗುಳಿ ನೆನಸಿಕೊಂಡ್ರೆ ಒಂದು ಕ್ಷಣ ಟೆನ್ಶನ್ ಆಗುತ್ತೆ, ಇದೆಲ್ಲಾ ಬಿಡಿ ,ನೀವು ಯಾವತ್ತಾದರೂ ಟ್ರೈನಿನ ಬೋಗಿ ಮೇಲೆ ಬರೆದಿರುವ ನಂಬರ್‌ಗಳನ್ನು ನೋಡಿದ್ದೀರಾ.. ಈ ಮೇಲ್ಕಂಡ ಚಿತ್ರದಲ್ಲಿ ತೋರಿಸುತ್ತಿರುವ ನಂಬರ್ ನೋಡಿ ಅದೇ ರೀತಿ ಯಾವುದಾದರೂ ಐದರಿಂದ ಆರು ನಂಬರ್ ಇರುವ ಬೋಗಿ ನೋಡಿದ್ದೀರಾ..

[widget id=”custom_html-3″]

Advertisements

ನೋಡಿದ್ರೆ ಅದೇನು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಾ.. ಹಾಗಾದ್ರೆ ಆ ನಂಬರ್ ಏನು ಆ ನಂಬರ್ ಏನು ಸೂಚಿಸುತ್ತದೆ ನಾವು ಹೇಳ್ತೀವಿ ಎಸ್ ಉದಾಹರಣೆಗೆ ಒಂದು ಟ್ರೈನಿನ ಬೋಗಿಯ ಮೇಲೆ 98332 ಎನ್ನುವ ನಂಬರ್ ಇದೆ ಅಂತ ಭಾವಿಸೋಣ, ಹೀಗಿದ್ದಾಗ ಮೊದಲೆರೆಡು ನಂಬರ್ ಏನು ಸೂಚಿಸುತ್ತದೆ ಗೊತ್ತಾ.. 98ಈ ನಂಬರ್ 1998ರಲ್ಲಿ ಆರಂಭವಾಗಿದೆ ಅಂತ ಅರ್ಥ, ಒಂದು ವೇಳೆ 04 ಅಥವಾ, 05, 06 ಈತರಹದ ನಂಬರ್‌ಗಳಿದ್ದರೇ ಆ ಟ್ರೈನ್ 2ಸಾವಿರನೇ ಇಸವಿಯ ಈಚೆಗೆ ಶುರುವಾಗಿದೆ ಅಂತ ಅರ್ಥ ಮಾಡಿಕೊಳ್ಳಬಹುದು.

[widget id=”custom_html-3″]

ಈಗ ಮೊದಲ ಎರಡು ನಂಬರ್ ಏನು ಅಂತ ಅರ್ಥವಾಯಿತು ಅಂತ ಅಂದುಕೊಳ್ತೇವೆ, ಉಳಿದ ನಂಬರ್‌ಗಳು ಏನನ್ನು ಸೂಚಿಸುತ್ತದೆ ಅಂತ ಕೇಳಿದ್ರೆ ಯಾವ ಕ್ಲಾಸ್ ಅಲ್ಲಿ ಈ ಬೋಗಿ ಬರುತ್ತದೆ ಅಂತ ಸೂಚಿಸುತ್ತದೆ. ಹೀಗೆ ಬೇರೆ ಬೇರೆ ರೀತಿಯ ಕ್ಲಾಸ್‌ಗಳನ್ನು ಈ ನಂಬರ್ ಸೂಚಿಸುತ್ತದೆ. ಈಗ ಬಹುತೇಕರಿಗೆ ಟ್ರೈನಿನ ಬೋಗಿಯ ಮೇಲಿರುವ ನಂಬರ್ ಏನನ್ನು ಸೂಚಿಸುತ್ತದೆ ಅಂತ ಅರ್ಥವಾಗಿರಬಹುದು ಅಂತ ಅಂದುಕೊಳ್ಳುತ್ತೇವೆ. ಮೊದಲು ಬಹುತೇಕರು ಈ ಬೋಗಿ ಮೇಲಿನ ನಂಬರ್ ನೋಡಿ ಅದ್ಯಾವುದೋ ಟ್ರೈನ್ ನಂಬರ್ ಇರಬೇಕು ಅಂತ ಭಾವಿಸಿದ್ದು ಉಂಟಂತೆ, ಈ ಹಿನ್ನಲೆ ಇವತ್ತಿನ ಈ ಲೇಖನ ಅಂತಹವರಿಗೆ ಸಹಾಯಕವಾಗಿರಬಹುದು ಅಂತ ಅಂದುಕೊಳ್ತೇವೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..