Advertisements

ಮಧ್ಯರಾತ್ರಿ ರಸ್ತೆಯಲ್ಲಿ ನಿಂತಿದ್ದ ಹುಡುಗಿಯರಿಗೆ ಲಾರಿ ಡ್ರೈವರ್ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ? ನೋಡಿದ್ರೆ ನಿಮ್ಮ ಕಣ್ಣನ್ನು ನೀವೇ ನಂಬೋದಿಲ್ಲ..

Inspire

ನಮಸ್ತೆ ಸ್ನೇಹಿತರೆ, ಬಟ್ಟೆಯನ್ನು ನೋಡಿ ಇನ್ನೊಬ್ಬರ ವ್ಯಕ್ತಿತ್ವವನ್ನು ಅಳೆಯಬಾರದು.. ಬಟ್ಟೆಯನ್ನು ನೋಡಿ ಗುಣ ಅಳೆಯಬಾರದು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ನೈಜ ಘಟನೆಗಳು ನಮ್ಮ ಮುಂದೆ ನಡೆದಿವೆ.. ಅದೇ ರೀತಿ ಹಳೆಯ ಬಟ್ಟೆಯನ್ನು ಹಾಕಿಕೊಂಡು ನೋಡಲು ವಿಕಾರವಾಗಿ ಕಾಣುತ್ತಿದ್ದ ಲಾರಿ ಡ್ರೈವರ್ ಇಬ್ಬರ ಹುಡುಗಿಯರಿಗೆ ಮಾಡಿದ ಸಹಾಯದ ಬಗ್ಗೆ ತಿಳಿದುಕೊಳ್ಳೋಣ.. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರನಲ್ಲಿ ಕರಣ್ ಸಿಂಗ್ ಎನ್ನುವ ಒಬ್ಬ ವ್ಯಕ್ತಿ ಇದ್ದಾರೆ.. ಇವರು ತುಂಬಾ ಶ್ರಮಜೀವಿಯಾಗಿದ್ದರು.

Advertisements

ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಇರುವ ಎಲ್ಲಾ ರಸ್ತೆಗಳಲ್ಲೂ ಕೂಡ ಕರಣ್ ಸಿಂಗ್ ಲಾರಿ ಡ್ರೈವಿಂಗ್ ಮಾಡಿದ್ದಾರೆ.. ಈಗೆ ಪ್ರತಿದಿನ ಲಾರಿ ಓಡಿಸುತ್ತಾ ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಜೀವನ ನಡೆಸುತ್ತಿದ್ದರು.. ಕರಣ್ ಸಿಂಗ್ ಅವರು ಲಾರಿ ಡ್ರೈವಿಂಗ್ ಮಾಡುವ ಸಮಯದಲ್ಲಿ ಹಲವು ಒಳ್ಳೆಯ ಘ’ಟನೆಗಳು ಹಾಗೂ ಕೆಲವು ಕೆಟ್ಟ ಘ’ಟನೆಗಳನ್ನು ನೋಡಿದ್ದಾರೆ.. ಈಗೆ ಒಂದು ದಿನ ಕರಣ್ ಸಿಂಗ್ ಅವರು ಲಾರಿ ಡ್ರೈವಿಂಗ್ ಮಾಡುವ ಸಮಯದಲ್ಲಿ ಒಂದು ಘ’ಟನೆ ನಡೆಯುತ್ತದೆ.. ಕರಣ್ ಸಿಂಗ್ ತನ್ನ ಲಾರಿಯಲ್ಲಿ ಲೋಡ್ ತುಂಬಿಸಿಕೊಂಡು ಆಂದ್ರಪ್ರದೇಶಕ್ಕೆ ಹೋಗುತ್ತಿದ್ದರು..

ರಾತ್ರಿಯವೇಳೆ ಗುಂಟೂರಿನ ನ್ಯಾಷನಲ್ ಹೈವೆ ರಸ್ತೆಯಲ್ಲಿ ಲಾರಿ ಹೋಗುತ್ತಿದ್ದಾಗ ಕರಣ್ ಗೆ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ ಆಗ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿ ಕೆಳಗೆ ಇಳಿದ ಕರಣ್ ಸಿಂಗ್ ಅವರಿಗೆ ನಡುರಾತ್ರಿ ರಸ್ತೆಯ ಮಧ್ಯೆ ಇಬ್ಬರು ಹುಡುಗಿಯರು ನಿಂತಿರುವುದನ್ನು ನೋಡುತ್ತಾರೆ.. ಹುಡುಗಿಯರ ಬಳಿ ಹೋದ ಕರಣ್ ಸಿಂಗ್ ಅವರು ಯಾಕೆ ಏನಾಯಿತು ನಡುರಾತ್ರಿಯಲ್ಲಿ ರಸ್ತೆಯ ಮಧ್ಯೆ ಇಬ್ಬರೇ ನಿಂತು ಏನು ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ.‌. ಆ ಇಬ್ಬರು ಹುಡುಗಿಯರು ಕರಣ್ ಸಿಂಗ್ ಅವರ ವೇಷಭೂಷಣ ನೋಡಿ ಭ’ಯಗೊಂಡು ಕಣ್ಣೀರು ಹಾಕಲು ಶುರುಮಾಡುತ್ತಾರೆ..

ಹಾಗ ಕರಣ್ ಸಿಂಗ್ ಅವರು ಹುಡುಗಿಯರಿಗೆ ಅಳಬೇಡಿ ಸುಮ್ಮನೇ ಇರಿ ಮೊದಲು ಏನಾಯಿತು ಹೇಳಿ ಎಂದು ಪುನಃ ಸಮಾಧಾನವಾಗಿ ಕೇಳಿದರು.. ಆಗ ಹುಡುಗಿಯರು ನಾವು ಬಂದ ಗಾಡಿ ಪಂಚರ್ ಹಾಗಿದೆ. ಪೋನ್ ಮಾಡಿ ಮನೆಯವರ ಸಹಾಯ ಕೆಳೋಣ ಎಂದರೆ ಈ ರಸ್ತೆಯಲ್ಲಿ ಮೊಬೈಲ್ ಸಿಗ್ನಲ್‌ ಸಿಗುತ್ತಿಲ್ಲ. ಮುಂದೆ ಏನು ಮಾಡುವುದು, ಮನೆಗೆ ಏಗೆ ವಾಪಸ್ ಹೋಗುವುದು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾರೆ.. ಕೂಡಲೇ ಕರಣ್ ಸಿಂಗ್ ಅವರು ಐದು ಕಿಲೋಮೀಟರ್ ದೂರದಲ್ಲಿ ಮೆಕಾನಿಕಲ್ ಶಾಪ್ ಇದೆ ಬನ್ನಿ ಮೂರು ಜನ ಹೋಗಿ ಮೆಕಾನಿಕಲ್ ಅವರನ್ನು ಕರೆದುಕೊಂಡು ಬಂದು ಗಾಡಿಯನ್ನು ರಿಪೇರಿ ಮಾಡಿಸೋಣ ಎಂದು ಹೇಳುತ್ತಾರೆ..

ಆದರೆ ಕರಣ್ ಸಿಂಗ್ ಅವರು ಹಾಕಿದ್ದ ಬಟ್ಟೆ ಮತ್ತು ಅವರ ಮುಖ ನೋಡಿ ಹುಡುಗಿಯರಿಗೆ ಲಾರಿ ಹತ್ತಲು ಆತನ ಮೇಲೆ ನಂಬಿಕೆ ಬರಲಿಲ್ಲ.. ಹುಡುಗಿಯರ ಮನಸ್ಸನ್ನು ಅರ್ಥ ಮಾಡಿಕೊಂಡ ಕರಣ್ ಸಿಂಗ್ ಅವರು ಸರಿ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲ ತಗೋಳಿ ನನ್ನ ಲಾರಿ ಕೀ ನೀವಿಬ್ಬರೆ ಹೋಗಿ ಮೆಕಾನಿಕಲ್ ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ಆ ಹುಡುಗಿಯರ ಕೈಗೆ ಕೊಡುತ್ತಾರೆ.. ಕರಣ್ ಸಿಂಗ್ ಅವರು ಹೇಳಿದ ಈ ಮಾತನ್ನು ಕೇಳಿ ಒಂದು ಹಂತಕ್ಕೆ ಆ ಹುಡುಗಿಯರಿಗೆ ಆತನ ಮೇಲೆ ನಂಬಿಕೆ ಬರುತ್ತದೆ. ತನ್ನ ಜೇಬಿನಲ್ಲಿದ್ದ ತನ್ನ ಪ್ಯಾಮಿಲಿ ಪೊಟೊ ಹೊರತೆಗೆದ ಕರಣ್ ಸಿಂಗ್ ಅವರು ನಾನು ಕೂಡ ಒಬ್ಬ ಸಂಸಾರಸ್ತ ವ್ಯಕ್ತಿ ನಿಮ್ಮ ವಯಸ್ಸಿನ ಇಬ್ಬರು ಹೆಣ್ಣಮಕ್ಕಳು ನನಗೂ ಕೂಡ ಇದ್ದಾರೆ‌, ಬನ್ನಿ ನನ್ನ ಜೊತೆ ಎಂದು ಪುನಃ ಕರೆಯುತ್ತಾರೆ..

ಕೊನೆಗೆ ಆ ಹುಡುಗಿಯರು ಕರಣ್ ಸಿಂಗ್ ಅವರನ್ನು ನಂಬಿ ಆತನ ಲಾರಿ ಅತ್ತಿ ಐದು ಕಿಲೋಮೀಟರ್ ದೂರದಲ್ಲಿದ್ದ ಮೆಕಾನಿಕಲ್ ಅವರನ್ನು ಕರೆದುಕೊಂಡು ಬಂದು ತಮ್ಮ ಗಾಡಿಯನ್ನು ರಿಪೇರಿ ಮಾಡಿಸುತ್ತಾರೆ.. ನಂತರ ಆ ಹುಡುಗಿಯರು ಕರಣ್ ಸಿಂಗ್ ಅವರ ಬಳಿ ನಾವು ನಿಮ್ಮ ವೇಷಭೂಷಣ ನೋಡಿ ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆವೂ ನೀವು ತುಂಬಾ ಒಳ್ಳೆಯವರು ಎಂದು ಹೇಳಿ ಕರಣ್ ಗೆ ತಮ್ಮ ಮಾನ ಹಾಗೂ ಪ್ರಾಣ ಕಾಪಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ಗಾಡಿಯಲ್ಲಿ ಆ ಹುಡುಗಿಯರು ತಮ್ಮ ಮನೆಗೆ ಹೋಗುತ್ತಾರೆ.. ಕರಣ್ ಸಿಂಗ್ ಅವರು ಕೂಡ ಲಾರಿಯನ್ನು ಸ್ಟಾರ್ಟ್ ಮಾಡಿ ಮುಂದಿನ ದಾರಿಯ ಕಡೆಗೆ ಪ್ರಯಾಣ ಬೆಳೆಸಿದರು.. ಲಾರಿ ಡ್ರೈವರ್ ಮಾಡಿದ ಈ ಸಹಾಯದ ಕೆಲಸ ನಿಜಕ್ಕೂ ಗ್ರೇಟ್.. ಸ್ನೇಹಿತರೆ ಇದರ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ..