ನಮಸ್ತೆ ಸ್ನೇಹಿತರೆ, ಮನುಷ್ಯ ಯಾವ ಜಾಗದಲ್ಲಿ ಜೀವನ ಮಾಡುತ್ತಿರುತ್ತಾನೊ ಅದೇ ಜಾಗ ಅವನಿಗೆ ಮನೆಯಾಗಿರುತ್ತದೆ.. ಮನೆಯೆಂದಾಗ ನಿಮ್ಮ ಕಣ್ಣಿನ ಮುಂದೆ ಇಟ್ಟಿಗೆ ಕಟ್ಟಿರುವ ಸದೃಢವಾದ ಕಟ್ಟಡ ಎಂದು ಭಾವಿಸುತ್ತೀರಾ.. ಆದರೆ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದಂತಹ ಸ್ವಂತ ಮನೆ ಹೊಂದುವಷ್ಟು ಅದೃಷ್ಟ ಶಾಲಿಗಳಾಗಿ ಇರುವುದಿಲ್ಲ.. ಇನ್ನು ಕೋಲಂಬಿಯಾ ದೇಶದ ಇಬ್ಬರು ದಂಪತಿಗಳ ನಿಜ ಜೀವನದ ಕಥೆ ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.. ಕೊಲಂಬಿಯಾ ದೇಶದ ಮರಿಯಾ ಮತ್ತು ಅವರ ಪತಿ ಮಿಗಿಲ್ ಕಳೆದ 22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ..

ಸುಮಾರು 50 ಲಕ್ಷ ಜನಸಂಖ್ಯೆ ಇರುವ ಕೊಲಂಬಿಯಾ ದೇಶದಲ್ಲಿ ಅಪ’ರಾಧ ಮತ್ತು ಡ್ರ’ಗ್ ನಿಂದ ಕುಖ್ಯಾತಿ ಗಳಿಸಿದೆ.. ಮರಿಯಾ ಮತ್ತು ಮಿಗಿಲ್ ಕೂಡ ಈ ಚಟಕ್ಕೆ ದಾಸರಾಗಿದ್ದರು.. ಇವರಿಬ್ಬರು ಮೊದಲು ಬೇಟಿಯಾದಾಗ ಇವರ ಹತ್ತಿರ ಒಂದು ನಯಪೈಸೆ ದುಡ್ಡು ಇರಲಿಲ್ಲ.. ಆದರೆ ಇವರಿಬ್ಬರೂ ತುಂಬಾ ಪ್ರೀತಿಸಿ ಮದುವೆಯಾದ ನಂತರ ಇನ್ನು ಮುಂದೆ ಕೆಟ್ಟದ್ದನ್ನು ಸೇವಿಸಬಾರದು ಎಂದು ಶಪಥ ಮಾಡುತ್ತಾರೆ.. ಇನ್ನೂ ಇವರಿಗೆ ಯಾವುದೇ ರೀತಿ ಬಂದು ಬಳಗ, ವಾಸಿಸಲು ಮನೆ ಇರಲಿಲ್ಲ.. ಹೀಗಾಗಿ ಮರಿಯಾ ಮತ್ತು ಮಿಗಿಲ್ ಕೆಲವು ದಿನಗಳ ಕಾಲ ರಸ್ತೆಯಲ್ಲೇ ಸಂಸಾರ ಮಾಡುತ್ತಿರುತ್ತಾರೆ.. ಆದರೆ ಎಷ್ಟು ದಿನ ರಸ್ತೆಯ ಬದಿಯಲ್ಲಿ ವಾಸಿಸಲು ಸಾಧ್ಯ ಹೇಳಿ.. ಇಂತಹ ಸಮಯದಲ್ಲಿ ಕೊಲಂಬಿಯಾ ನಗರದಿಂದ ಸ್ವಲ್ಪ ದೂರವಿದ್ದ ಚರಂಡಿಯೊಂದು ಮಿಗಿಲ್ ಗೆ ಕಾಣಿಸುತ್ತದೆ..

ಇನ್ನೂ ಆ ಚರಂಡಿಯನ್ನು ಯಾವುದೇ ರೀತಿ ಉಪಯೋಗಿಸದಿದ್ದ ಕಾರಣ ಮಿಗಿಲ್ ನಾನು ನನ್ಮ ಪತ್ನಿ ಇದರಲ್ಲಿ ವಾಸಮಾಡಬಹುದು ಎಂದುಕೊಂಡು ತನ್ನ ಪತ್ನಿಯನ್ನು ಕರೆದು ಆ ದಿನದಿಂದ ಚರಂಡಿಯಲ್ಲೇ ಜೀವನ ನಡೆಸಲು ಶುರು ಮಾಡುತ್ತಾರೆ.. ದಿನಗಳು ಕಳೆದಂತೆ ಒಂದು ಸ್ವಲ್ಪ ಮಟ್ಟಿಗೆ ಇರುವಂತಹ ಮನೆಯ ಸೌಲಭ್ಯಗಳನ್ನೇಲ್ಲಾ ಇವರು ಮಾಡಿಕೊಳ್ಳುತ್ತಾರೆ.. ಹೌದು ಬೆಳಕಿಗೆ ಲೈಟ್, ಅಡುಗೆ ಮಾಡಲು ಸ್ಟವ್, ಟಿವಿ ಮತ್ತು ಮಂಚದ ಸೌಲಭ್ಯವನ್ನು ಮಾಡಿಕೊಳ್ಳುತ್ತಾರೆ.. ಅಷ್ಟೇ ಅಲ್ಲದೆ ಇವರ ಜೊತೆ ನಾಯಿಯೂ ಕೂಡ ವಾಸ ಮಾಡುತ್ತಿದ್ದೆ.. ಸುಮಾರು 22 ವರ್ಷಗಳಿಂದ ಈ ದಂಪತಿಗಳು ಈ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ..

ಈ 22 ವರ್ಷದಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದಂದು ತಮ್ಮ ಚರಂಡಿಯ ಮನೆಯನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಿ ಕ್ರಿಸ್ಮಸ್ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ.. ಈಗೆ ಇವರಿಬ್ಬರ ಜೀವನ ನಡೆಯುತ್ತಿರುವ ವಿಷಯ ಹೊರ ಜಗತ್ತಿಗೆ ಗೊತ್ತಾದಾಗ ಮನೆಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು ಆದರೆ ಈ ದಂಪತಿಗಳು ನಾವು ಇಲ್ಲೇ ಇರುತ್ತೇವೆ, ನಾವು ನೆಮ್ಮದಿ ಸಂತೋಷ ಎಲ್ಲವನ್ನು ಇಲ್ಲೇ ಅನುಭವಿಸುತ್ತಿದ್ದೇವೆ ಈ ಸ್ಥಳ ಬಿಟ್ಟು ಎಲ್ಲಿಗೂ ಬರುವುದಿಲ್ಲ ಮನೆಯ ಅವಶ್ಯಕತೆ ಬೇಡ ಎಂದು ಹೇಳುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..