ನಮಸ್ತೆ ಸ್ನೇಹಿತರೆ, ಅತ್ತೆಯು ತನ್ನ ವಿಧವೆ ಸೊಸೆಗೆ ಮರು ಮದುವೆ ಮಾಡಿಸಿದ ಮಾನವೀಯ ಕುತೂಹಲಕಾರಿ ಘಟನೆಯೊಂದು ಸೂಳ್ಯ ತಾಲೂಕಿನ ಕಜಮುಳೆಯಲ್ಲಿ ನಡೆದಿದೆ.. ಕಜಮುಳೆ ನಿವಾಸಿಯಾದ ಮಹಿಳೆ ತನ್ನ ಮಗನನ್ನು ಕಳೆದುಕೊಂಡುಬಿಡುತ್ತಾಳೆ.. ನಂತರ ಸೊಸೆ ವಿಧವೆ ಆಗಿ ಬಿಡುತ್ತಾಳೆ.. ಇನ್ನೂ ಸೊಸೆ ಒಂಟಿಯಾದಳೆಂದು ಆಕೆಗೆ ಇನ್ನೊಂದು ಮದುವೆ ಮಾಡಲು ಯೋಚಿಸಿ.. ಸೊಸೆಯನ್ನು ಕರೆದು ಮದುವೆಗೆ ಒಪ್ಪಿಸಿ ಮದುವೆ ಮಾಡಿಕೊಟ್ಟಿದ್ದಾರೆ ಈ ಅಪರೂಪದ ಅತ್ತೆ.

ಸೂಳ್ಯ ತಾಲೂಕಿನ ಕಳಂಜಾ ಗ್ರಾಮದ ಗೋಪಾಲ ಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲ ಅವರನ್ನು ಅದೇ ಗ್ರಾಮದ ಕಜಮುಳೆಯ ಪುತ್ರ ಮಾದಪ್ಪ ಅವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.. ಇನ್ನೂ ಮಾದಪ್ಪ ಮದುವೆಯಾದ ವರ್ಷಕ್ಕೆ ಯಾವುದೋ ಒಂದು ಕೆಲಸದ ನಿಮಿತ್ತ ಹೊರಗಡೆ ಹೋಗಿ ಬರುವಾಗ ಜೀವಂತವಾಗಿ ಬರಲಿಲ್ಲ.. ಇನ್ನೂ ಈ ವೇಳೆ ಗರ್ಬಿಣಿಯಾಗಿದ್ದ ಸುಶೀಲ ಅವರು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾರೆ.. ಅದಾಗಲೇ ಗಂಡನ ಮನೆಯಲ್ಲಿ ಸುಶೀಲ ಅವರಿಗೆ ಮರುಮದುವೆ ಮಾಡಿಸಲು ಪ್ರಯತ್ನ ಪಡುತ್ತಾರೆ.

ಆದರೆ ಮಗುವಿನ ಭವಿಷ್ಯದ ದೃಷ್ಟಿಯಿಂದ ಸುಶೀಲ ಮರು ಮದುವೆಯಾಗಲು ಒಪ್ಪಿರಲಿಲ್ಲ.. ಆದರೆ ಇದೀಗ ಅತ್ತೆಯ ಒತ್ತಾಯಕ್ಕೆ ಸುಶಿಲ ಅವರು ಬಂಡವಾಳ ತಾಲೂಕಿನ ಕನ್ಯಾನ ಗ್ರಾಮದ ಜೈ ಪ್ರಕಾಶ್ ಎಂಬುವವರ ಜೊತೆ ದೇವಸ್ತಾನದ ಬಳಿ ಮರುವಿವಾಹವಾಗಿದ್ದಾರೆ.. ಕುತೂಹಲ ವಿಷಯ ಏನೆಂದರೆ ಸುಶೀಲ ಅವರ ಮೊದಲನೆಯ ಮದುವೆ ಕೂಡ ಇದೇ ಕೋಟೆ ದೇವಸ್ತಾನದಲ್ಲಿ ನಡೆದಿದೆ. ಇನ್ನೂ ಇವರ ಜೀವನ ಚೆನ್ನಾಗಿ ಇರಲೆಂದು ನಾವೆಲ್ಲರೂ ಆಶಿಸೋಣ.. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಏಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.