Advertisements

ಈ ಅಣೆಕಟ್ಟು ಕಟ್ಟಿದ್ದಕ್ಕೆ 90 ಹಳ್ಳಿಗಳು ಮುಳುಗಿದ್ದವು.. ಅಂದು ಎನ್ ನಡೆದಿತ್ತು ಗೊತ್ತಾ?

Kannada Mahiti

ಕರ್ನಾಟಕದ ಹೆಮ್ಮೆಯ ಹೆಗ್ಗುರುತು ತುಂಗಾಭದ್ರ ಡ್ಯಾಂ ನಿರ್ಮಾಣವಾದ ಬಗೆ ಹೇಗೆ ಗೊತ್ತಾ.. ಈಗಿನ ಅತ್ಯಾಧುನಿಕ ಯಂತ್ರಗಳಿರದ ಆ ಕಾಲದಲ್ಲಿ ಡ್ಯಾಂ ನಿರ್ಮಾಣ ಹೇಗಾಯ್ತು ಗೊತ್ತಾ.. ಇಲ್ಲಿದೆ ಆ ಉಪಯುಕ್ತ ಮಾಹಿತಿ ಕರ್ನಾಟಕದ ಮೊದಲ ಅಣೆಕಟ್ಟು ಅಂದ್ರೆ ಅದು ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ಲಾನ್ ಅಲ್ಲಿ ಮೂಡಿಬಂದ ಕೆಆರ್ ಎಸ್ ಎಂದೇ ಪ್ರಖ್ಯಾತವಾಗಿರುವ ಕೃಷ್ಣಾ ರಾಜಸಾಗರ ಜಲಾಶಯ. ಅದೇ ತರ ರಾಜ್ಯದ ಇನ್ನೊಂದು ಅಣೆಕಟ್ಟು ಕೆಆರ್ ಎಸ್ ಅಷ್ಟೇ ಫೇಮಸ್ ಆಗಿದ್ದಂದ್ರೆ ಅದು ತುಂಗಭದ್ರಾ ಜಲಾಶಯ. ಈ ಜಲಾಶಯವನ್ನು ಪಂಪಾಸಾಗರ ಅಂತ ಸಹ ಕರೆಯುತ್ತಾರೆ..

[widget id=”custom_html-3″]

Advertisements

ಹಲವಾರು ರೈತರ ಅನೂಕೂಲಕ್ಕಾಗಿ ಆಧುನಿಕ ಭಗೀರತ ಎಂದೇ ಪ್ರಸಿದ್ಧರಾಗಿದ್ದಂತಹ ತಿರುಮಲೈ ಅಯ್ಯಂಗಾರ್ ಅವರ ಯೋಜನೆಯಲ್ಲಿ ಈ ಬೃಹತ್ ಅಣೆಕಟ್ಟು ನಿರ್ಮಾಣವಾಗುತ್ತೆ. ಕೃಷ್ಣೆಯ ಉಪನದಿ ತುಂಗಭದ್ರಾಗೆ ಅಡ್ಡಲಾಗಿ ಕಟ್ಟಿರುವಂತಹ ಈ ಅಣೆಕಟ್ಟು ಕರ್ನಾಟಕದ ವಿಜಯನಗರ, ಬಳ್ಳಾರಿ, ದಾವಣಗೆರೆ, ರಾಯಚೂರು, ಕೊಪ್ಪಳ ಭಾಗದ ಜನರಿಗೆ ಕಾಲುವೆ ಮೂಲಕ ನೀರು ಪೂರೈಕೆ ಆಗೋದ್ರ ಜೊತೆಗೆ ಆಂಧ್ರಪ್ರದೇಶದ ಹಲವು ಜಿಲ್ಲೆಗಳಿಗೆ ಸಹ ನೀರು ಪೂರೈಕೆ ಮಾಡುತ್ತಿದೆ. 1876ನೇ ಇಸವಿಯಲ್ಲಿ ರಾಜ್ಯದಲ್ಲಿ ಬರಗಾಲ ಬಂದು ಅನೇಕ ಜಿಲ್ಲೆಗಳಲ್ಲಿ ನೀರಿರದೇ ಜನ ಜಾನುವಾರುಗಳು ಸಾ’ಯು’ವಂತಹ ಪರಿಸ್ಥಿತಿ ನಿರ್ಮಾಣವಾದಾಗ ಈ ಒಂದು ಜಲಾಶದ ನಿರ್ಮಾಣ ಮಾಡಬೇಕು..

[widget id=”custom_html-3″]

ಅಂತ ಅಂದಿನ ಬ್ರಿಟಿಷ್ ಅಧಿಕಾರಿಯಾಗಿದ್ದಂತಹ ಕರ್ನಾಲ್ ಸ್ಮಾರ್ಟ್ ಅವರು ನೀರಾವರಿ ಇಲಾಖೆಗೆ ಅರ್ಜಿ ಸಲ್ಲಿಸ್ತಾರೆ, ಅರ್ಜಿ ಜಾಸ್ತಿ ದಿನ ಉಳಿಯಲಿಲ್ಲ, ಈ ಹಿನ್ನಲೆ ಮತ್ತೆ ಇನ್ನೋರ್ವ ಅಧಿಕಾರಿ ಮೆಕ್ಕಂಜಿಯವರು ಸವಿಸ್ತಾರವಾದ ವಿವರ ಬರೆದು ಮತ್ತೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಅಂಗೀಕಾರವಾದ ತಿರುಮಲೈ ಅಯ್ಯಂಗಾರ್ ಅವರ ಪ್ಲಾನ್ ಅಲ್ಲಿ ಅಣೆಕಟ್ಟು ನಿಮಾಣಕ್ಕೆ ಸಿದ್ಧತೆ ನಡೀತಿರುತ್ತೆ. ಆ ಸಂದರ್ಭದಲ್ಲಿ ಮದ್ರಾಸ್ ಸರ್ಕಾರ, ಹೈದ್ರಾಬಾದ್ ನಿಜಾಮ, ಬಾಂಬೆ ಸರ್ಕಾರ, ಮೈಸೂರು ರಾಜರ ನಡುವಣ ಉಂಟಾದ ಆಂತರಿಕ ಜಗಳ ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿಯಾಗುತ್ತೆ.

[widget id=”custom_html-3″]

ಇನ್ನು ಮುಂದಿನ ದಿನಗಳಲ್ಲ ಹೈದ್ರಾಬಾದ್ ನಿಜಾಮ ಹಾಗೂ ಮದ್ರಾಸ್ ಗವರ್ನರ್ ಇಬ್ಬರು ಸಹ ಅಣೆಕಟ್ಟು ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಶುರು ಮಾಡ್ತರೆ, ಆ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುತ್ತೆ, ಹೈದ್ರಾಬಾದ್ ನಿಜಾಮನ ಆಡಳಿತ ಅಂ’ತ್ಯವಾಗುತ್ತೆ, ಹೀಗೆ ಬೇರೆ ಬೇರೆ ಕಾರಣಗಳಿಂದ ಮತ್ತೆ ಅಣೆಕಟ್ಟು ನಿರ್ಮಾಣ ಸ್ಥಗಿತವಾಗುತ್ತೆ. ನಂತರ ಮತ್ತೆ ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ ಇಂಜಿನಿಯರ್‌ಗಳೆಲ್ಲ ಕೆಲಸ ಮಾಡಿ ಮಾನವ ಶಕ್ತಿಯನ್ನು ಉಪಯೋಗಿಸಿಕೊಂಡು ಕೆಲಸ ಶುರು ಮಾಡುತ್ತಾರೆ.

[widget id=”custom_html-3″]

ಮುಂದೆ 378 ಚದರ ಕಿಲೋಮೀಟರ್ ವಿಸ್ತಾರವಾಗಿರುವ ಅಣೆಕಟ್ಟನ್ನು ಮಾಡಿಯೇ ಬಿಡುತ್ತಾರೆ. ಈ ಸಂದರ್ಭದಲ್ಲಿ 90 ಗ್ರಾಮಗಳು ಮುಳುಗಡೆಯಾಗ್ತವೆ, ಸಾವಿರಾರು ಜನರ ಬದುಕು ಬೀದಿಗೆ ಬಂದು ಅವರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುತ್ತೆ. ನಂತರ ಸತತ ಪರಿಶ್ರಮದಿಂದ ಕಲ್ಲು ಗುಡ್ಡದಲ್ಲಿ ಸುರಂಗ ಕೊರೆದು ಕಾಲುವೆ ನಿರ್ಮಾಣ ಮಾಡಿ ಇವತ್ತು ಒಂದು ಕೋಟಿಗೂ ಅಧಿಕ ಜನ ಈ ತುಂಗಭದ್ರಾ ಜಲಾಶಯದ ಫಲಾನುಭವಿಗಳಾಗಿದ್ದಾರೆ. ಈ ಜಲಾಶಯದ ಸುತ್ತಮುತ್ತ ಮೀನುಗಾರಿಕೆಯೇ ಉದ್ಯಮವಾಗಿದೆ. ಜನರ ಕೃಷಿ ಭೂಮಿ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಜೊತೆಗೆ ಪ್ರವಾಸಿಗರ ಕೇಂದ್ರ ಬಿಂದು ತುಂಗೆ ಕಂಗೊಳಿಸುತ್ತಿದ್ದಾಳೆ..