ಲಕ್ಷ ಲಕ್ಷ ದುಡಿಯುವ ಅವಕಾಶ ಇದ್ರೂ ಈ ಹುಡುಗಿಯರು ಕೆಲಸಕ್ಕೆ ಗುಡ್ಬೈ ಹೇಳಿ ಯಾವ ಕೆಲಸ ಮಾಡ್ತಾಯಿದ್ದಾರೆ ನೋಡಿ. ನೀವು ಸಹ ಬೇಷ್ ಎನ್ನದೇ ಇರಲಾರಿರಿ.. ಸ್ನೇಹಿತರೇ ಇತ್ತೀಚಿಗೆ ಹಲವರ ಬದುಕು ಹೇಗಾಗಿದೆ ಅಂದ್ರೆ ಯಾಂತ್ರಿಕತೆಗೆ ಒಗ್ಗಿಕೊಂಡಂತಾಗಿದೆ. ಊರು ಕೇರಿ ಬಿಟ್ಟು ದೊಡ್ಡ ದೊಡ್ಡ ಸಿಟಿಗಳಿಗೆ ಬಂದು ಹಗಲು ರಾತ್ರಿ ದುಡಿದು ನಾಳೆಗಾಗಿ ಅನ್ನೊ ಹೆಸರಲ್ಲಿ ನಿರಂತರವಾಗಿ ದುಡಿಯುತ್ತಲೇ ಇರುವ ಮನುಷ್ಯ ಮ’ಷಿನ್ಗಳಂತಾಗಿದ್ದು ಸುಳ್ಳಲ್ಲ. ಆಧುನಿಕತೆಯನ್ನು ಆಲಿಂಗನ ಮಾಡಿಕೊಂಡು ತಂತ್ರಜ್ಞಾನದ ಪರಮಾವಧಿಯನ್ನು ತಲುಪಿರುವ ಈ ಯಾಂತ್ರಿಕ ಯುಗದಲ್ಲಿ ಯಂತ್ರಗಳಂತೆ ಬದುಕಲು ಇಚ್ಚಿಸದೇ ತಮ್ಮ ಊರಿಗೆ ಹೋಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಅವಳಿ ಸಹೋದರಿಯರ ನೆಮ್ಮದಿಯ ಬದುಕಿನ ಕಥೆ ಇದು.
[widget id=”custom_html-3″]

ಎಸ್ ಈ ಫೋಟೊದಲ್ಲಿರುವ ಈ ಟ್ವಿ’ನ್ಸ್ ಸಿಸ್ಟರ್ಸ್ ಹೆಸರು ಮೇಘ ಹಾಗೂ ಗಗನ. ಮೂಲತಃ ಶಿವಮೊಗ್ಗದವರಾದ ಮೇಘ ಹಾಗೂ ಗಗನ ಇಂಜಿನಯರಿಂಗ್ ಪದವೀದರರು. ಇವರಿಬ್ಬರ ತಂದೆ ರಾಜೇಂದ್ರ ಕಳೆದ ಹಲವು ದಶಕಗಳಿಂದ ತಮ್ಮನ್ನು ತಾವು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೈತ. ಮಕ್ಕಳು ಒಳ್ಳೆಯ ವಿಧ್ಯಾಭ್ಯಾಸ ಮಾಡಿ ದೊಡ್ಡ ಹೆಸರು ಮಾಡಬೇಕೆಂಬುವುದು ಈ ಹೆಣ್ಣು ಮಕ್ಕಳ ತಂದೆ ರಾಜೇಂದ್ರ ಅವರ ಕನಸು. ತಂದೆಯ ಕನಸನ್ನು ಮಕ್ಕಳು ಈಗ ನನಸು ಮಾಡಿದ್ದಾರೆ ಹೇಗೆ ಗೊತ್ತಾ.. ಇಂಜಿನಿಯರಿಂಗ್ ಮುಗಿದ ಬಳಿಕ ಲಕ್ಷ ಲಕ್ಷ ಹಣ ಕೊಡುವ ಕಂಪನಿಗಳಿಗೆ ಮ’ಣೆ ಹಾಕದೇ ಈ ಇಬ್ಬರು ಸಹೋದರಿಯರು ಮನೆಗೆ ಮರುಳಿದ್ದಾರೆ.
[widget id=”custom_html-3″]

ಹುಟ್ಟಿದ ಊರಿನಲ್ಲಿಯೇ ಮೆಟ್ಟಿದ ನೆಲದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಬೇಕೆಂಬುವುದು ಈ ಇಬ್ಬರ ನಿಲುವು. ತಂದೆಯಂತೆ ನಾವು ಕೂಡ ಔಷ’ಧಿಯ ಗಿಡಗಳನ್ನು ಬೆಳೆಯಬೇಕು ಅಂತ ಪ್ಲಾ’ನ್ ಮಾಡ್ತಾರೆ. ಆ ಯೋಜನೆಯನ್ನು ಕಾರ್ಯಗತ ಮಾಡಲು ಹೋಂವರ್ಕ್ ಮಾಡ್ತಾರೆ. ಅದರಂತೆ ಅವರ ಕನಸನ್ನು ಶೀಘ್ರದಲ್ಲಿಯೇ ನನಸು ಮಾಡಿಕೊಳ್ತಾರೆ. ಹೌದು ಇಸ್ರೇಲ್ ನ ದಾರಿಯಲ್ಲಿ ಕೃಷಿ ಮಾಡ್ತಾರೆ. ಇಸ್ರೇಲ್ ಮಾದರಿಯನ್ನು ಅಳವಡಿಸಿಕೊಂಡು ಔ’ಷಧಿಯ ಗಿಡ ಬೆಳಿಲಿಕ್ಕೆ ಆರಂಭ ಮಾಡ್ತಾರೆ.
ಈಗ ತಾವು ಕೈ ಹಾಕಿದ್ದ ಕೆಲಸದಲ್ಲಿ ಯಶಸ್ಸು ಕಂಡು ಅಪಾರ ಹೆಸರು ಮಾಡಿದ್ದಾರೆ. ತಂದೆಯಂತೆ ಮಕ್ಕಳು ಸಹ ತಂದೆಯ ಕಸುಬನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
[widget id=”custom_html-3″]

ಮೇಘ ಹಾಗೂ ಗಗನಾ ಇಬ್ಬರು ಇಂಜಿಯರ್ ಪದವಿದರರಾಗಿದ್ದು ಅವರಿಬ್ಬರಿಗೆ ಒಳ್ಳೆಯ ಕೆಲಸ ಸಹ ಸಿಗುತಿತ್ತು. ಅದರಲ್ಲಿ ಯಾವುದೇ ಅ’ನುಮಾನವಿಲ್ಲ. ಆದರೆ ದುಡ್ಡಿನ ಹಿಂದೆ ಬೀಳದೆ ತೃಪ್ತಿಯ ಬದುಕು ಬೇಕು ಅಂತ ತಮ್ಮ ಅಪ್ಪ ಅಮ್ಮನ ಜೊತೆ ಈ ಇಬ್ಬರು ನೆಲೆಸಿದ್ದಾರೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಲು ಹಿಂದೇಟು ಹಾಕುತ್ತಿರುವ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಿದ್ದಾರೆ. ಅನ್ನದಾತ, ದೇಶದ ಬೆನ್ನೆಲುಬು ಅಂತೆಲ್ಲ ನಾವು ಕರೆಯುವ ರೈತನ ಕಾಯಕವನ್ನು ಮಾಡಲು ಕೆಲವರು ಹಿಂದೇಟು ಹಾಕುವವರ ಮಧ್ಯೆಯಲ್ಲೇ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಈ ಅವಳಿ ಸಹೋದರಿಯರ ಬಗ್ಗೆ ನಿವೇನು ಹೇಳ್ತೀರಾ..