Advertisements

25 ಸಾವಿರ ಕುಟುಂಬಗಳು ವಾಸ ಮಾಡುತ್ತಿರುವ ಈ ಊರಲ್ಲಿ ಎಲ್ಲರಿಗೂ ಅವಳಿ ಜವಳಿ ಮಕ್ಕಳೇ! ಇಲ್ಲಿಗೆ ಹೋದವರಿಗೂ ಕೂಡ ಅವಳಿ ಜವಳಿ ಮಕ್ಕಳು.. ಕಾರಣ ಏನು ಗೊತ್ತಾ?

Kannada Mahiti

ಈ ಕಲಿಯುಗದಲ್ಲಿ ಎಂತಹ ವಿಚಾರವನ್ನಾದರೂ ಕ್ಷಣಮಾತ್ರದಲ್ಲಿ ಕಲೆಹಾಕಬಹುದಾದ ಟೆಕ್ನಾಲೆಜಿಯಿದೆ. ಇದು ಮಾಡರ್ನ್ಯುಗ ಅಂತ ಪದೇ ಪದೇ ಒತ್ತಿ ಹೇಳುವ ಅವಶ್ಯಕತೆಯೇಯಿಲ್ಲ, ಯಾಕಂದ್ರೆ ನಾವು ನೀವು ಎಲ್ಲ ಜೀವಿಸುತ್ತಿರುವ ಪ್ರಸ್ತುತ ಕಾಲಘಟ್ಟವೇ ಆಧುನಿಕತೆಯನ್ನು ಆಕ್ಸೆಪ್ಟ್ ಮಾಡಿ ಅದನ್ನು ಅಳವಡಿಸಿಕೊಂಡು ಬದುಕುತ್ತಿರುವ ಕಾಲ. ಕೆಲವೊಮ್ಮೆ ಸಂಶೋಧನೆ, ವೈಜ್ಞಾನಿಕತೆ, ಟೆಕ್ನಾಲೆಜಿಗೂ ಗೊತ್ತಿಲ್ಲದ ವಿಚಾರಗಳಿರುತ್ತವೆ. ಬೇಧಿಸಲಾಗದ ರಹಸ್ಯಗಳಿರುತ್ತವೆ. ಹೌದು ಇವತ್ತು ನಾವು ನಿಮಗೆ ಹೇಳ್ತಾಯಿರುವ ವಿಚಾರ ಇಂತಹದ್ದೇ ಒಂದು ವಿಜ್ಞಾನಕ್ಕೆ ಸೆಡ್ಡು ಹೊಡೆದಿರುವ ಕಥೆ. ಕೇರಳದ ಕೊಡಿನಿ ಎನ್ನುವ ಗ್ರಾಮದಲ್ಲಿ ಬಹುತೇಕ ಅವಳಿ ಜವಳಿ ಮಕ್ಕಳು ಬಿಟ್ಟರೇ ಹೆಚ್ಚಿನ ಸಂಖ್ಯೆಯಲ್ಲಿ ತ್ರಿವಳಿ ಮಕ್ಕಳು ಹುಟ್ಟಿ ಜನರನ್ನು ಗಾಬರಿ ಗೊಳಿಸಿದ ಸುದ್ದಿಯಿದು.

[widget id=”custom_html-3″]

Advertisements

ಈ ಗ್ರಾಮದಲ್ಲಿ ಸುಮಾರು 20 ರಿಂದ 25 ಸಾವಿರ ಕುಟುಂಬಗಳು ವಾಸ ಮಾಡ್ತಾಯಿದ್ದಾರೆ. ಪ್ರತೀ ಕುಟುಂಬದಲ್ಲಿಯೂ ಸಹ ಬಹುತೇಕ ಅವಳಿ ಜವಳಿ, ಇಲ್ಲ ತ್ರಿವಳಿ ಮಕ್ಕಳೇಯಿದ್ದಾರಂತೆ. ಇಲ್ಲಿನ ಶಾಲೆಗಳಲ್ಲಿಯೂ ಸಹ ಕನಿಷ್ಟ ಇಬ್ಬರಿಂದ ಮೂವರು ಅವಳಿ ಜವಳಿ ಸಹೋದರ ಸಹೋದರಿಯರು ಕಾಣಸಿಗುತ್ತಾರೆ. ಇನ್ನು ಈ ಬಗ್ಗೆ ಆರಂಭದಲ್ಲಿ ಈ ಗ್ರಾಮದಲ್ಲಿ ಯಾರು ಸಹ ತಲೆಕೆಡಿಸಿಕೊಂಡಿಲ್ಲ. ಹೋಗ್ತ ಹೋಗ್ತಾ ಗ್ರಾಮದಲ್ಲಿ ಒಮ್ಮೆ ಸರ್ವೆ ಮಾಡಿದಾಗ ಈ ವಿಚಾರ ಬಹಿರಂಗವಾಗುತ್ತೆ. ಹೌದು ಸಾಮಾನ್ಯವಾಗಿ ಸಾವಿರದಲ್ಲಿ 9 ಮಕ್ಕಳು ಅವಳಿ ಜವಳಿಯಿದ್ರೆ, ಈ ಗ್ರಾಮದಲ್ಲಿ ಮಾತ್ರ ಸಾವಿರದಲ್ಲಿ 45 ರಷ್ಟು ಮಕ್ಕಳು ಅವಳಿ ಜವಳಿಯಾಗಿದ್ರು.

[widget id=”custom_html-3″]

ಇನ್ನು ಬೇರೆ ಊರಿಂದ ಈ ಊರಿಗೆ ಬಂದು ನೆಲೆಸಿದವರಿಗೆ ಹಾಗೂ ಈ ಊರಿಂದ ಬೇರೆ ಊರಿಗೆ ಹೋದವರಿಗೆ ಸಹ ಅವಳಿ ಮಕ್ಕಳೇ ಹೆಚ್ಚಾಗಿ ಆಗಿದೆ ಎಂಬ ವರದಿಯೂಯಿದೆ. ಇನ್ನು ಅಕಪಕ್ಕದ ಗ್ರಾಮಗಳಲ್ಲಿ ಈ ರೀತಿಯದ ಸಮಸ್ಯೆಗಳಿಲ್ಲ. ಕೇವಲ ಈ ಊರಿನಲ್ಲಿ ಮಾತ್ರ ಯಾಕೀ ಸಮಸ್ಯೆ ಎಂಬುವುದೇ ದೊಡ್ಡ ತ’ಲೆನೋವು. ಈ ಹಿನ್ನಲೆ ಅನೇಕ ವಿಜ್ಞಾನಿಗಳು, ಸಂಶೋಧಕರು ತಂಡೋಪತಂಡವಾಗಿ ಈ ಊರಿಗೆ ಲಗ್ಗೆ ಇಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಒಂದು ಊರಿನಲ್ಲಿ ನಡೆಯುತ್ತಿರುವ ಈ ಘಟನೆಯ ಹಿಂದಿರುವ ರಹಸ್ಯವನ್ನು ಬೇಧಿಸಲು ವಿಜ್ಞಾನಿಗಳು ಸಹ ನಿರತರಾಗಿಯೇಯಿದ್ದಾರೆ..