Advertisements

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಅವಳಿ ಜವಳಿ ನಟ ನಟಿಯರು ಇವರೇ ನೋಡಿ !

Cinema

ನಮಸ್ತೇ ಸ್ನೇಹಿತರೇ, ಮಕ್ಕಳೆಂದರೆ ಚೆಂದ ಅದರಲ್ಲೂ ಅವಳಿ ಜವಳಿ ಮಕ್ಕಳೆಂದರೆ ಆ ತಂದೆ ತಾಯಿಗಳ ಖುಷಿಯನ್ನ ಬಣ್ಣಿಸಲು ಸಾಧ್ಯವೇ ಇಲ್ಲ. ನೋಡಲು ಒಂದೇ ತರ ಕಾಣುವ ಈ ಅವಳಿ ಜವಳಿಗಳು ಎಲ್ಲರನ್ನು ಎಲ್ಲರೂ ತಮ್ಮ ಕಡೆ ಆಕರ್ಷಣೆಯಾಗುವಂತೆ ಮಾಡುತ್ತಾರೆ. ಇನ್ನು ಅವಳಿ ಜವಳಿಗಳಿಬ್ಬರೂ ಸೇರಿ ಸಿನಿಮಾರಗಾದಲ್ಲಿ ಒಟ್ಟಾಗಿ ಅಭಿನಯಿಸುವುದು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ತುಂಬಾ ಅಪರೂಪವವೇ ಸರಿ. ಹಾಗಾದ್ರೆ ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅವಳಿ ಜವಳಿಯಾಗಿ ನಟಿಸಿ ಹೆಸರು ಮಾಡಿದ ನಟ ನಟಿಯರು ಯಾರೆಂದು ನೋಡೋಣ ಬನ್ನಿ..

Advertisements

ಹೌದು, ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಫೈಟ್ ಮಾಸ್ಟರ್ ಗಳಾಗಿ ಹಾಗೂ ವಿಲನ್ ಗಳಾಗಿ ಅಬ್ಬರಿಸಿದ್ದ ರಾಮ್ ಮತ್ತು ಲಕ್ಷ್ಮಣ್ ಜೋಡಿಯ ಬಗ್ಗೆ ನಿಮಗೆ ಗೊತ್ತೇ ಇದೆ. ಇನ್ನು ವಿಶೇಷ ಎಂದರೆ ಅವಳಿ ಮಕ್ಕಳಾಗಿರುವ ಹೆಣ್ಣು ಮಕ್ಕಳನ್ನೇ ಇವರು ಮದ್ವೆ ಮಾಡಿಕೊಂಡಿದ್ದಾರೆ. ಇನ್ನು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಸಾಯಿ ಪಲ್ಲವಿ. ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತರಾಗಿರುವ ಸಾಯಿ ಪಲ್ಲವಿಗೆ ಪೂಜಾ ಕಣ್ಣನ್ ಎಂಬ ಅವಳಿ ಸಹೋದರಿಯಿದ್ದಾರೆ. ಪೂಜಾ ಕಣ್ಣನ್ ಕೂಡ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ನೋಡಲು ಒಂದೇ ತರ ಕಾಣುವ ಇವರಿಬ್ಬರಲ್ಲಿ ಒಬ್ಬರೊನ್ನಬ್ಬರು ಬಿಟ್ಟಿರಲಾರದಷ್ಟು ಬಾಂದವ್ಯ ಇದೆ.

ಕನ್ನಡದ Mr & Mrs ರಾಮಾಚಾರಿ ಚಿತ್ರದಲ್ಲಿ ಮಿಂಚಿದ ಈ ಖ್ಯಾತ ಅವಳಿ ಸಹೋದರಿಯರ ಹೆಸರು ಅದ್ವಿತಿ ಮತ್ತು ಅಷ್ವಿತಿ ಶೆಟ್ಟಿ. ಮಂಗಳೂರಿನ ಈ ಅವಳಿ ಸಹೋದರಿಯರ ಜನವಾಗಿರುವುದು ಕೇವಲ ೫ ನಿಮಿಷಗಳ ಅಂತರದಲ್ಲಿ ಎಂದು ಹೇಳಲಾಗಿದೆ. ಕನ್ನಡ ಮಾತ್ರವಲ್ಲದೆ ಪರ ಭಾಷೆಯ ಚಿತ್ರಗಳಲ್ಲಿ ಕೂಡ ಈ ಟ್ವಿನ್ ಸಿಸ್ಟರ್ಸ್ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್ ಖ್ಯಾತ ಹಿರಿಯ ನಟ ಅನಿಲ್ ಕಪೂರ್ ಹಾಗೂ ಅವರ ಅವಳಿ ಸಹೋದರ ಸಂಜಯ್ ಕಪೂರ್ ಕೂಡ ಹಲವಾರು ಹಿಂದಿ ಚಿತ್ರಗಳಲ್ಲಿ ಮಿಂಚಿದ್ದಾರೆ. ಇನ್ನು ಅನಿಲ್ ಕಪೂರ್ ಅವರು ಕನ್ನಡದಲ್ಲಿ 1983ರಲ್ಲಿ ತೆರೆಕಂಡ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದವರು.

ಇನ್ನು ಧರ್ಮ ಮತ್ತು ರಕ್ಷ ಇವರು ಕೂಡ ಅವಳಿ ಸಹೋದರರು. ಹಲವಾರು ತೆಲುಗು ಚಿತ್ರಗಳಿಗೆ ಜೊತೆಯಾಗಿ ನಿರ್ದೇಶನ ಮಾಡಿರುವ ಈ ಟ್ವಿನ್ ಬ್ರದರ್ಸ್, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ ಕೂಡ. ಸ್ನೇಹಿತರೇ, ಈ ಅವಳಿ ನಟ ನಟಿಯರಲ್ಲಿ ನಿಮಗಿಷ್ಟವಾದ ಜೋಡಿ ಯಾರೆಂದು ನಿಮ್ಮ ಅನಿಸಿಕೆ ತಿಳಿಸಿ..