Advertisements

ಮಾರ್ಗ ಮಧ್ಯೆ ಬಿದ್ದ 70ರ ಅಜ್ಜಿ..ಪೊಂಗಲ್ ಗಿಫ್ಟ್ ಕೊಡಿಸಲು 9 ವರ್ಷದ ಈ ಹುಡುಗ್ರು ಮಾಡಿದ್ದೇನು ಗೊತ್ತಾ ?

Kannada Mahiti

ಸ್ನೇಹಿತರೇ, ಮಕ್ಕಳನ್ನ ದೇವರ ಸಮಾನ ಎಂದು ಹೇಳಲಾಗುತ್ತೆ. ಮಕ್ಕಳ ನಿಷ್ಕಲ್ಮಶ ಪ್ರೀತಿಯೇ ಅಂತದ್ದು. ಅದು ಏನನ್ನು ಬಯಸದ ನಿಸ್ವಾರ್ಥ ಪ್ರೀತಿ. ಇದಕ್ಕೆ ನಿದರ್ಶನವೆಂಬಂತೆ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿನ ಸರ್ಕಾರ ಪೊಂಗಲ್ ಹಬ್ಬದ ಪ್ರಯುಕ್ತವಾಗಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ವಿಶೇಷವದ ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಪಡಿತರ ಅಂಗಡಿಗಳ ಮುಖೇನ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಕಬ್ಬು, ಬಟ್ಟೆ ಹಾಗೂ ೨೫೦೦ ನಗದು ಹಣವನ್ನ ಕೊಡುವುದಾಗಿ ಹೇಳಿತ್ತು.

Advertisements

ಇನ್ನು ಮಾ’ನಸಿಕವಾಗಿ ಅ’ಸ್ವಸ್ಥೆಯಾಗಿರುವ ಮಗಳನ್ನ ಸಾಕುತ್ತಿರುವ ೭೦ ವರ್ಷದ ಅಜ್ಜಿಯೊಬ್ಬಳು ತನಗೆ ಆರೋಗ್ಯ ಸರಿ ಇಲ್ಲದಿದ್ದರೂ ಕೂಡ ಸರ್ಕಾರದಿಂದ ಸಿಗುವ ಉಡುಗೊರೆಯನ್ನ ತೆಗೆದುಕೊಂಡು ಬರಲು ಹೊರಡುತ್ತಾಳೆ. ನಡೆದುಕೊಂಡು ಹೋಗುತ್ತಿದ್ದ ಅಜ್ಜಿಗೆ ಸ್ವಲ್ಪ ದೂರ ಹೋಗುತ್ತಲೇ ಅನಾರೋಗ್ಯದ ಕಾರಣ ಕುಸಿದು ಬಿದ್ದು ಬಿಡುತ್ತಾಳೆ. ಇನ್ನು ಇದೆ ವೇಳೆ ಅಲ್ಲೇ ಆತ ಆಡುತ್ತಿದ್ದ ಅವಳಿ ಜವಳಿ ಮಕ್ಕಳಾದ ೯ ವರ್ಷದ ವಯಸ್ಸಿನ ನಿತೀಶ್ ಮತ್ತು ನಿತಿನ್ ಕೆಳಗೆ ಬಿದ್ದ ಜ್ಜಿಯನ್ನ ನೋಡುತ್ತಾರೆ. ಅವರ ಮನಸ್ಸು ಕರಗಿತೊ ಏನೋ ಅಜ್ಜಿಯ ಬಳಿ ಹೋಗಿ ಆಕೆಯನ್ನ ಮಾತನಾಡಿಸಿ ಪಡಿತರ ಅಂಗಡಿಗೆ ಹೋಗುತ್ತಿರುವ ವಿಚಾರವನ್ನ ತಿಳಿಯುತ್ತಾರೆ.

ಇನ್ನು ಸರ್ಕಾರ ನೀಡುತ್ತಿರುವ ಪೊಂಗಲ್ ಹಬ್ಬದ ಉಡುಗೊರೆಯನ್ನ ಅಜ್ಜಿಗೆ ಕೊಡಿಸಲೇಬೇಕು ಎಂದು ನಿರ್ಧಾರ ಮಾಡಿದ ಆ ಮಕ್ಕಳು, ಅಲ್ಲೇ ಎಲ್ಲೋ ಇದ್ದ ತಳ್ಳೋ ಗಾಡಿಯನ್ನ ತಂದು ಅದರ ಮೇಲೆ ಅಜ್ಜಿಯನ್ನ ಮಲಗ್ಗಿಸಿ ಗಾಡಿಯನ್ನ ತಳ್ಳಿಕೊಂಡು ಪಡಿತರ ಅಂಗಡಿ ಇದ್ದ ಕಡೆಗೆ ಕರೆದುಕೊಂಡು ಹೋಗುತ್ತಾರೆ. ಅಜ್ಜಗೆ ಪೊಂಗಲ್ ಹಬ್ಬದ ಉಡುಗೊರೆಯನ್ನು ಕೊಡಿಸುತ್ತಾರೆ. ಇನ್ನು ಈ ಮಕ್ಕಳು ಮಾಡಿದ ಕೆಲಸ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಅದಕ್ಕೆ ಹೇಳೋದು ಮಕ್ಕಳು ದೇವರ ಸಮಾನ ಅಂತ. ಇನ್ನು ಪ್ರಸಂಗವನ್ನ ನೋಡಿದ್ರೆ ಆ ಭಗವಂತನೇ ಮಕ್ಕಳ ರೂಪದಲ್ಲಿ ಬಂದು ಆ ಅಜ್ಜಿಗೆ ಸಹಾಯ ಮಾಡಿದ ಎಂದೆನಿಸುತ್ತದೆ.