ನಮಸ್ತೆ ಸ್ನೇಹಿತರೆ, ಜೀವನ ಏರಿಳಿತ ಮಿಶ್ರಣ. ಬದುಕು ಯಾವಾಗ ಎಲ್ಲಿ ಬಿಟ್ಟು ಕೊಡುತ್ತದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ.. ಅಂತಹ ಸ್ಥಿತಿಗೆ ತಲುಪಿದ್ದಾರೆ ಒಂದಾನೊಂದು ಕಾಲದ ಟಾಪ್ ನಟನ ಹೆಂಡತಿ. ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೀಮವರ್ಮನ ರೋಡ್ ಪಕ್ಕದಲ್ಲಿ ಒಬ್ಬ ಮಹಿಳೆ ಬಿರು ಬಿಸಿಲಿನಲ್ಲಿ ತರಕಾರಿ ಮಾರುತ್ತಿದ್ದಾರೆ. ಆಕೆ ಮತ್ಯಾರು ಅಲ್ಲ ದಕ್ಷಿಣ ಭಾರತದ ಟಾಪ್ ನಟನಾಗಿ 200 ಚಿತ್ರಗಳಲ್ಲಿ ನಟಿಸಿದ ನಟ ರಾಮ ಕೃಷ್ಣ ಅವರ ಹೆಂಡತಿ.. ಸುಮಾರು ಮೂರು ನಾಲ್ಕು ಬಾಷೆಗಳಲ್ಲಿ ನಟಿಸಿದ ರಾಮ ಕೃಷ್ಣ ಆಗಿನ ಕಾಲದಲ್ಲಿ ಮೋಸ್ಟ್ ಸುಂದರಗ.

ತನ್ನ ಮಾವನ ಮಗಳನ್ನು ಮದುವೆಯಾದ ಈ ನಟ ಕೆಲವು ವರ್ಷ ಆಕೆ ಜೊತೆ ಹಳ್ಳಿಯಲ್ಲಿ ಸಂಸಾರ ಮಾಡಿ ಚಿತ್ರರಂಗದಲ್ಲಿ ಬ್ಯುಸಿ ಆದ ಕಾರಣ ಮದ್ರಾಸ್ ಗೆ ಹೋಗಿ ನೆಲೆಸಿದರು.. ಹಾಗೆ ಹೆಂಡತಿಯನ್ನು ಮದ್ರಾಸ್ ಗೆ ಕರೆದುಕೊಂಡು ಹೋಗುವ ಗೋಜಿಗೆ ಹೋಗಲಿಲ್ಲ.. ಕಾಲ ಕಳೆದಂತೆ ಟಾಪ್ ನಟನಾಗಿ ಬೆಳೆದ ನಟ ರಾಮ ಕೃಷ್ಣ ಅವರು ಸಿನಿಮಾಗಳಲ್ಲಿ ನಟಿಸುವಾಗ ನಟಿ ಗೀತಾಂಜಲಿ ಜೊತೆ ಪ್ರೀತಿಯಲ್ಲಿ ಬಿದ್ದು ಮೊದಲನೆ ಹೆಂಡತಿಯನ್ನು ಸಂಪೂರ್ಣವಾಗಿ ಮರೆತು ನಟಿ ಗೀತಾಂಜಲಿಯನ್ನು ಮದುವೆಯಾದರು.

ಕೊನೆಗೂ ಕಷ್ಟ ಕಾಲದಲ್ಲಿದ್ದ ಮೊದಲ ಹೆಂಡತಿಯ ಕೈ ಬಿಟ್ಟೇ ಬಿಟ್ಟರು. ಹಾಗೆ ಆಕೆಯಿಂದ ದೂರ ಉಳಿದು ಬಿಟ್ಟರು.. ಇದರಿಂದ ವಿಧಿಯಿಲ್ಲದೆ ಹೊಟ್ಟೆ ಪಾಡಿಗಾಗಿ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಾ ಬದುಕನ್ನು ಸಾಗಿಸುತ್ತಿದ್ದಾರೆ ಮೊದಲ ಹೆಂಡತಿ. ನನ್ನ ಜೀವನ ಹೇಗಾದರೂ ಇರಲಿ, ನನ್ನ ಬಾವ ಜೀವನದಲ್ಲಿ ಚೆನ್ನಾಗಿರಲಿ ಎಂದು ಯಾವತ್ತೂ ನಟ ರಾಮ ಕೃಷ್ಣ ಅವರಿಗೆ ತೊಂದರೆ ಕೊಡಲಿಲ್ಲವಂತೆ ಈಕೆ.. ಎಂತಹ ತ್ಯಾಗಮಹಿ ಮನಸ್ಸು ನೋಡಿ ಈಕೆಯದು.. 200 ಚಿತ್ರಗಳಲ್ಲಿ ನಟಿಸಿದ ಒಬ್ಬ ದೊಡ್ಡ ನಟನ ಹೆಂಡತಿಗೆ ಇಂತಹ ಸ್ಥಿತಿ ಬಂದಿರುವುದು ನೋವಿನ ಸಂಗತಿ.