Advertisements

ಉಮಾಶ್ರೀ 2 ತಿಂಗಳು ಗರ್ಭಿಣಿಯಾಗಿದ್ದಾಗಲೇ ಮನೆ ಬಿಟ್ಟು ಓಡಿಸಿದ್ದ ಗಂಡ! ಪುಟ್ಟಕ್ಕನ ಮಕ್ಕಳು ಸೀರಿಯಲ್ ಕೂಡ ನಿಜವಾದ ಕಥೇನಾ..

Cinema

ಅಭಿನಯ ಶಾರದೆ, ಪುಟ್ನಂಜ ಎಂದೇ ಹೆಸರಾದ ಉಮಾಶ್ರೀ ಎಂದು ಶಾಸಕಿಯಾಗಿ, ಸಚಿವೆಯಾಗಿಯು ಸೇವೆಸಲ್ಲಿಸಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಟ್ಟ ದಿನಗಳಿಂದ ಅವರು ಅನುಭವಿಸಿದ್ದು ಬರಿ ಕಷ್ಟದ ದಿನಗಳನ್ನೇ. ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆದು ಇಂದಿಗೂ ಕಣ್ಣೀರಾಗುವ ಉಮಾಶ್ರೀಯವರು ನಿಜ ಜೀವನದ ಬಗ್ಗೆ ಎಂದು ತಿಳಿಯೋಣ ಬನ್ನಿ. ಇತ್ತೀಚಿಗೆ ಉಮಾಶ್ರೀಯವರು ಅಭಿನಯದ ಪುಟ್ಟಕ್ಕನ ಮಕ್ಕಳು ಎಂಬ ಧಾರಾವಾಹಿ ಭಾರಿ ಸದ್ದು ಮಾಡುತ್ತಿದೆ ಉಮಾಶ್ರೀಯವರ ನಿಜ ಜೀವನದ ಕಥೆ ಎಂತಲೂ ಅಭಿಮಾನಿಗಳು ಹೇಳುತ್ತಾರೆ. ಹಾಗಾದರೆ ಉಮಾಶ್ರೀಯವರ ನಿಜ ಜೀವನ ಹೇಗಿತ್ತು ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ. ಅವರು ನೋವುಂಡು ಮೇಲೆ ಬಂದವರು. ಹೌದು ಉಮಾಶ್ರೀ 18 ತಿಂಗಳ ಮಗುವಿದ್ದಾಗಲೇ ಅವರ ತಂದೆ-ತಾಯಿ ತೀರಿಹೋದರು. ಆಗ ದೊಡ್ಡಮ್ಮನ ಆಸರೆಯಲ್ಲಿ ಬೆಳೆದ ಉಮಾಶ್ರೀ ವಿದ್ಯಾಭ್ಯಾಸದಲ್ಲಿ ಮುಂದಿದ್ದರು. ಕಾಲೇಜು ಮಟ್ಟದಲ್ಲಿ ಆರ್ಟ್ಸ್ ಅನ್ನು ಆಯ್ಕೆಮಾಡಿಕೊಂಡ ಉಮಾಶ್ರೀ ಗೆಳತಿಯ ರಂತೆ ತಾವು ಕೂಡಾ ಪ್ರೀತಿಯಲ್ಲಿ ಬೀದ್ದರು.

Advertisements

ಇವರ ಪ್ರೀತಿಯ ವಿಷಯ ಮನೆಯಲ್ಲಿ ತಿಳಿಯಿತು ದೊಡ್ಡಮ್ಮ ಬೈದು ಹೊಡೆದು ಬುದ್ಧಿ ಹೇಳಿದರು. ಆದ್ರೆ, ಜನರ ಮಾತಿಗೆ ತಲೆ ಕೆಡಿಸಿಕೊಂಡ ದೊಡ್ಡಮ್ಮ ಕೊನೆಗೆ ಪ್ರೀತಿಸಿದ ಹುಡುಗನೊಂದಿಗೆ ವಿವಾಹ ಮಾಡಿಕೊಟ್ಟರು. ಅಲ್ಲಿವರೆಗೂ ಕಷ್ಟವನ್ನೇ ನೋಡರದವರಿಗೆ ವಿವಾಹವಾದ ನಂತರ ಪ್ರತಿದಿನವೂ ನರಕವಾಯಿತು. ಯಾಕೆಂದರೆ ಹುಡುಗನ ಬಾಹ್ಯ ಸೌಂದರ್ಯಕ್ಕೆ ಮಾರುಹೋದ ಉಮಾಶ್ರೀ ಆತನ ಕುಟುಂಬದ ಬಗ್ಗೆ ತಿಳಿದಿರಲಿಲ್ಲ ಆತನದು ಕೂಡುಕುಟುಂಬವಾಗಿತ್ತು.
ಆ ಮನೆಗೆ ಉಮಾಶ್ರೀಯವರು ಕೇವಲ ಚಾಕರಿ ಮಾಡುವ ಮಹಿಳೆಯ ಅಂತಾದರು ಗಂಡನಿಗೆ ಯಾವುದೇ ಕೆಲಸವಿರಲಿಲ್ಲ. ಮನೆಯ ಎಲ್ಲ ಕೆಲಸವನ್ನು ಸಹ ಉಮಾಶ್ರೀ ಮಾಡುವ ಅನಿವಾರ್ಯತೆ ಎದುರಾಗಿತ್ತು. ಹೀಗೆ ವರ್ಷ ಕಳೆಯಿತು. ಒಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಳು ಉಮಾಶ್ರೀ. ಆಗ ಗಂಡನಿಂದ ನಿಂದನೆ ಆರಂಭವಾಗುತ್ತದೆ ಹೆಣ್ಣು ಹೆತ್ತವಳು ಎಂಬ ಗಂಡನ ಮನೆಯವರು ಸಹ ತಾತ್ಸಾರ ಮನೋಭಾವನೆ ಇಂದ ನೋಡಿದರಂತೆ.

ಒಮ್ಮೆ ಅವರ ದೊಡ್ಡಮ್ಮ ಗೆ ಹುಷಾರಿಲ್ಲ ಎಂದು ಹೇಳದೆ ತವರಿಗೆ ಹೋದ ಉಮಾಶ್ರೀಯನ್ನು ಗಂಡ ಮನಬಂದಂತೆ ಬೈದರಂತೆ. ಕೆಲ ದಿನಗಳು ಕಳೆದು ವಾಪಸ್ ಬಂದರೆ ಮನೆಗೆ ಸೇರಿಸದೆ, ಮಗುವಿನ ಜೊತೆಗೆ ಉಮಾಶ್ರೀಯವರನ್ನು ಮನೆಯಿಂದ ಹೊರ ಹಾಕಿದರಂತೆ. ಇದಕ್ಕೆ ಮನೆಯವರು ಸಾಥ್ ನೀಡಿದರಂತೆ. ಬೆಂಗಳೂರನ್ನು ತೊರೆದ ಉಮಾಶ್ರೀ ನೇರವಾಗಿ ಹೋಗಿದ್ದು ಅವರ ಸಹೋದರಿಯ ಊರು ತುಮಕೂರಿಗೆ. ಆಗ ಉಮಾಶ್ರೀಯವರು ಮತ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದ ರಂತೆ. ಮೊದಲನೆಯ ಮಗುವನ್ನು ಚಿಕ್ಕದಾಗಿತ್ತು ಅಲ್ಲಿ-ಇಲ್ಲಿ ಮಾರಿ ಜೀವನ ನಡೆಸಿದ ಉಮಾಶ್ರೀಗೆ ನಟನೆಯ ಬಗ್ಗೆ ತಿಳಿಯಿತು. ಆಗ ನಿಧಾನವಾಗಿ ನಾಟಕದತ್ತ ಮುಖ ಮಾಡಿದ ಉಮಾಶ್ರೀ ಅವರಿಗೆ ಅವಕಾಶಗಳು ಹೆಚ್ಚುತ್ತಲೇ ಹೋದವು. ಇವರ ಅಭಿನಯದ “ಅನುಭವ” ಸಿನಿಮಾ 1984 ರಲ್ಲಿ ಭಾರಿ ಸದ್ದು ಮಾಡಿತು. ಇದಕ್ಕೂ ಕೆಲ ಆಕ್ಷೇಪಗಳು ಕೇಳಿ ಬಂದವು ಆದರೆ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಉಮಾಶ್ರೀಯವರು. ನಂತರ ಇಂತಹದೇ ಪಾತ್ರಗಳು ಉಮಾಶ್ರೀ ಅವರನ್ನು ಹುಡುಕಿಕೊಂಡು ಬಂದವು. ಆದರೂ ಎದೆಗುಂದದ ಉಮಾಶ್ರೀಯವರು ಧೈರ್ಯವಾಗಿ ಪಾತ್ರಗಳನ್ನು ನೆರವೇರಿಸಿ ಸೈ ಎಣಿಸಿ ಕೊಂಡರು.

ಇಂತಹ ಸಮಯದಲ್ಲೇ ಗಂಡ ಇನ್ನೊಂದು ವಿವಾಹವಾಗಿ ಎರಡನೇ ಪತ್ನಿಯನ್ನು ಸಹ ತನ್ನೊಂದಿಗೆ ಕರೆದುಕೊಂಡು ಬಂದು. ಇಬ್ಬರ ಸೇವೆಯನ್ನು ಸಹ ಉಮಾಶ್ರೀಯವರು ಮಾಡಲೇಬೇಕಿತ್ತು. ಹಾಗೆ ಮಾಡಿದರು ಕೂಡ. ಆದರೆ ಗಂಡ ಎನಿಸಿಕೊಂಡವನು ಉಮಾಶ್ರೀಯವರು ಮಾಡಿದ ಬಾಡಿಗೆ ಮನೆಯಿಂದಲೇ ಉಮಾಶ್ರೀಯವರನ್ನು ಹೊರಹಾಕಿದರು. ಉಮಾಶ್ರೀಯವರು ಗಟ್ಟಿಗಿತ್ತಿ ಯಾಗಿದ್ದರು. ಎರಡು ಮಕ್ಕಳನ್ನು ಕರೆದುಕೊಂಡು ಜೀವನ ಸಾಗಿಸಿದರು.ಇವರಿಗೆ ಉತ್ತಮ ಜೀವನವನ್ನು ರೂಪಿಸುವುದು ಒಂದೇ ಇವರ ಜೀವನದ ಗುರಿಯಾಗಿತ್ತು. ಅದರಂತೆ ನಾಟಕ, ನಟನೆ ಸಿನಿಮಾ ಹೀಗೆ ಬಣ್ಣದ ಲೋಕದಲ್ಲಿ ಹಗಲಿರುಳು ಎನ್ನದೆ ದುಡಿದರು.
ಇದೀಗ ಕಲಾರಂಗದಲ್ಲಿ ಸೇವೆಸಲ್ಲಿಸಿದ ಪ್ರತಿಫಲವಾಗಿ ಆರು ‘ರಾಜ್ಯ ಪ್ರಶಸ್ತಿಗಳು ‘, ಒಂದು ‘ರಜಥ ಪ್ರಶಸ್ತಿ ‘ದೊರೆತಿದೆ. ಇವರ ಅಭಿನಯದ “ಕೆಂಗುಲಾಬಿ “ಚಿತ್ರಕ್ಕೂ ಪ್ರಶಸ್ತಿ ದೊರೆತಿದೆ. 350ಕ್ಕೂ ಹೆಚ್ಚು ಸಿನಿಮಾ ಮಾಡಿದ ಅನುಭವ ಉಮಾಶ್ರೀಯವರಿಗೆ ಇವರು ಚಿಕ್ಕವಯಸ್ಸಿನಲ್ಲಿ ಇದ್ದಾಗ ಮಾಡಿದ ‘ಪುಟ್ನಂಜಿ’, “ಅಮ್ಮಮ್ಮಾ ” ಎಂಬ ಅಜ್ಜಿ ಪಾತ್ರಗಳೇ ಇವರಿಗೆ ಅವಕಾಶಗಳನ್ನು ಹುಡುಕಿಕೊಂಡು ಬರುವಂತೆ ಮಾಡಿದ್ದವು. ಇವರು ಪಾತ್ರಗಳನ್ನು ಕೊಟ್ಟರೆ ಅದರಲ್ಲಿ ಪರಕಾಯಪ್ರವೇಶ ಮಾಡುತ್ತಿದ್ದರು. ಇಂದಿಗೂ ಇವರು ಅಭಿನಯಿಸಿದ ಪಾತ್ರಗಳು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.