Advertisements

50 ವರ್ಷ ಆದರೂ ಮದುವೆಯಾಗದ ಖ್ಯಾತ ಕನ್ನಡ ನಟಿಯರು ಯಾರು ಗೊತ್ತಾ? ಇವರೇ..

Cinema

ನಮಸ್ತೆ ಸ್ನೇಹಿತರೆ, ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ದೊಡ್ಡ ತಿರುವು. ಮದುವೆ ಆದ ಮೇಲೆ.. ಒಬ್ಬ ವ್ಯಕ್ತಿಗೆ ಕುಟುಂಬ ಜವಾಬ್ದಾರಿಗಳು ಹೀಗೆ ಹೊಸ ರೀತಿಯ ಅನುಭವಗಳು ಸೃಷ್ಟಿಯಾಗುತ್ತವೆ. ಇವು ಮಾನವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಲು ಹೊಸ ಬಾಂಧವ್ಯಗಳನ್ನು, ಪ್ರೀತಿಯನ್ನು ಪಡೆಯಲು ನಾಂದಿ ಹಾಡುತ್ತವೆ. ಆದರೆ ಕೆಲವರಿಗೆ ಮದುವೆ ಸರಿಹೋಗಿ ಬರುವುದಿಲ್ಲ.. ಹಾಗಾಗಿ ಅದರಿಂದ ದೂರ ಸರಿಯುತ್ತಾರೆ. ಹಾಗಾದರೆ ಮದುವೆ ಮಾಡಿಕೊಳ್ಳದೆ ಆಗೆ ಉಳಿದ ಖ್ಯಾತ ನಟಿಯರು ಯಾರು ಎಂದು ನೋಡೊಣ ಬನ್ನಿ..

Advertisements

ನಟಿ ಸಿತಾರ ಅವರು ಮದುವೆಯಾಗಿಲ್ಲ ಅಂದರೆ ಯಾರು ನಂಬುವುದಿಲ್ಲ. ಕಾರಣ ಅವರ ಕೌಟುಂಬಿಕ ಪಾತ್ರಗಳನ್ನು ಮಾಡಿ ಹೆಸರು ಗಳಿಸಿದವರು.. ಆದರೆ ಅವರ ಜೀವನದಲ್ಲಿ ಆದ ಕೆಲವು ಕಹಿ ಘಟ‌ನೆಗಳು ನಟಿ ಸಿತಾರ ಮದುವೆಯಿಂದ ದೂರ ಸರಿಯುವಂತೆ ಮಾಡಿದೆ ಎನ್ನಲಾಗಿದರ. ತನ್ನ ಪ್ರೀತಿಯ ಸ್ನೇಹಿತ ಮುರುಳಿ ನಿ’ಧನ ಹಾಗೂ ಅದೇ ಸಮಯದಲ್ಲಿ ಪ್ರೀತಿಯ ತಂದೆಯ ನಿ’ಧನ ಈ ನಟಿಗೆ ಮಾನಸಿಕವಾಗಿ ತುಂಬಾ ದುಃಖವನ್ನು ತರಿಸಿದ್ದು.. ಆ ದುಃಖದಿಂದ ಹೊರ ಬರಲು ಮೂರು ವರ್ಷ ಬೇಕಾಯಿತು. ನಂತರ ಮದುವೆಯ ಬಗ್ಗೆ ಆಲೋಚಿಸಲಿಲ್ಲ ನಟಿ ಸಿತಾರ ಅವರು.

ನಟಿ ನಗ್ಮಾ ಅವರು ಒಂದು ಕಾಲದ ಗ್ಲಾಮರ್ ಹಾಗು ಡ್ಯಾನ್ಸ್ ಮೂಲಕ ಹುಡುಗರ ಕನಸಿನ ರಾಣಿಯಾಗಿದ್ದ ಈ ನಟಿ ಮದುವೆಯಿಂದ ದೂರ ಇದ್ದಾರೆ.. ಹಲವು ನಟರ ಜೊತೆ ನಗ್ಮಾ ಹೆಸರು ಕೇಳಿ ಬಂದರು ನಟ ರವಿ ಕಿಶನ್ ಜೊತೆ ಬ್ರೇಕ್ ಅಪ್ ಆದಮೇಲೆ ಮದುವೆ ಮಾಡಿಕೊಳ್ಳದಿರಲು ಈ ನಟಿ ನಿರ್ಧರಿಸಿದರು ಎಂದು ಹೇಳಲಾಗುತ್ತದೆ. ನಟಿ ಶೋಭನ , ನಾಟ್ಯಕ್ಕೆ ನಟನೆಗೆ ಹೆಸರುವಾಸಿಯಾದ ನಟಿ ಶೋಭನ ಮದುವೆಯ ಬಂಧನದಿಂದ ದೂರ ಇದ್ದು ಜೀವನ ನಡೆಸುತ್ತಿದ್ದಾರೆ.‌. ಮಲಯಾಳಂ ಸ್ಟಾರ್ ನಟನ ಪ್ರೇಮ ವೈಪಲ್ಯ ಕಾರಣದಿಂದಾಗಿ ಇನ್ನೂ ಮದುವೆಯಾಗಿಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಎಷ್ಟು ನಿಜವೋ ಗೊತ್ತಿಲ್ಲ..

ಐವತ್ತು ವರ್ಷದ ಶೋಭನ ಭರತನಾಟ್ಯ ಶಾಲೆ ನಡೆಸುತ್ತಾ ಒಂಟಿ ಜೀವನ ಸಾಗಿಸುತ್ತಿದ್ದಾರೆ. ಲಕ್ಷ್ಮೀ ಗೋಪಾಲ ಸ್ವಾಮಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟು ಸ್ಟೇಟ್ ಅವರ್ಡ್ ಗಳನ್ನು ಪಡೆದ ಅದ್ಬುತ ನಟಿಯರಲ್ಲಿ ಲಕ್ಷ್ಮೀ ಗೋಪಾಲ ಸ್ವಾಮಿಯವರು ಕೂಡ ಒಬ್ಬರು. 51 ವರ್ಷದ ಈ ನಟಿ ಕೂಡ ಮದುವೆಯಿಂದ ಹಿಂದೆ ಸರಿದಿದ್ದಾರೆ.. ದೊಡ್ಡ ಖ್ಯಾತಿ ಪಡೆದ ಟಬೂ ಸೇರಿ 50 ವರ್ಷ ತುಂಬುತ್ತಿದ್ದರು ಮದುವೆ ಮಾಡಿಕೊಳ್ಳದೇ ಹಲವು ಕಾರಣಗಳಿಂದ ಆಗೆ ಉಳಿದಿದ್ದಾರೆ. ಈ ಮೇಲಿನ ನಟಿಯರಲ್ಲಿ ನಿಮ್ಮ ಮೆಚ್ಚಿನ ನಟಿ ಯಾರು, ಜೀವನದಲ್ಲಿ ಮದುವೆ ಅನ್ನೋದು ಎಷ್ಟು ಮುಖ್ಯ ಎಂದು ನಿಮ್ಮ ಅಭಿಪ್ರಾಯ ತಿಳಿಸಿ.