Advertisements

ಸಿನಿಮಾ ರಾಜಕೀಯ ಆಯ್ತು – ಈಗ ಕೃಷಿಯಲ್ಲಿ ತನ್ನ ಕೈ ಚಳಕ ತೋರಿಸಿರುವ ಉಪ್ಪಿ ಮಾಡಿರುವ ಕೆಲಸ ನೋಡಿ !

Cinema

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಭಿನ್ನ ಛಾಪು ಮೂಡಿಸಿರುವ ನಟ ರಿಯಾಲ್ ಸ್ಟಾರ್ ಉಪೇಂದ್ರ ತನ್ನದೇ ಆದ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಸದ್ಯಕ್ಕೆ ಸಿನಿಮಾ ಜೊತೆಗೆ ತಾವೇ ಕಟ್ಟಿದ್ದ ಪ್ರಜಾಕೀಯ ಪಕ್ಷದ ಕೆಲಸಗಳಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇನ್ನು ರಾಜಕೀಯ ರಂಗದಲ್ಲಿ ಹೊಸತನ್ನು ತರಲು ಹೊರಟಿರುವ ಉಪೇಂದ್ರ ವಿಭಿನ್ನ ಐಡಿಯಾಗಳ ಮೂಲಕ ಜನರ ಮುಂದೆ ಹೋಗುತ್ತಿದ್ದಾರೆ.

Advertisements

ಈಗ ರಾಜಕೀಯ ಹಾಗೂ ಸಿನಿಮಾ ನಡುವೆ ಕೃಷಿ ರಂಗದಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು, ಸ್ವತಃ ಉಪೇಂದ್ರವರೇ ತೋಟಕ್ಕಿಳಿದು ಕೆಲಸ ಮಾಡಿದ್ದಾರೆ. ಜೊತೆಗೆ ಉತ್ತಮವಾದ ಫಸಲನ್ನು ತೆಗೆದಿದ್ದಾರೆ. ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಚಿತ್ರರಂಗದ ಹಲವು ನಟ ನಟಿಯರು ತಮ್ಮದೇ ಆದ ಕೆಲಸಗಳಲ್ಲಿ ನಿರತರಾಗಿದ್ದರು. ಆದರೆ ಯಾವಾಗಲು ವಿಭಿನ್ನತೆಗೆ ಹೆಸರಾಗಿರುವ ಉಪೇಂದ್ರರವರು ಸಾವಯವ ಪದ್ದತ್ತಿ ಮೂಲಕ ವ್ಯವಸಾಯ ಮಾಡಲು ತೊಡಗಿದ್ದು, ಕೇವಲ ಎರಡೂವರೆ ತಿಂಗಳಿನಲ್ಲಿ ರಾಸಾಯನಿಕ ರಹಿತ ಫಸಲನ್ನ ಬೆಳೆದು ತೋರಿಸಿದ್ದಾರೆ.

ಯಾವುದೇ ರಾಸಾಯನಿಕ ಓಷಧಿಗಳನ್ನ ಸಿಂಪಡಣೆ ಮಾಡದೆ ನೈಸರ್ಗಿಕ ಪದ್ದತಿಯಲ್ಲಿ ಹೂ, ತರಕಾರಿಗಳನ್ನ ಬೆಳೆದು ತೋರಿಸಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಉಪೇಂದ್ರರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಕೇವಲ ಎರಡು ವರೆ ತಿಂಗಳಿನ ಹಿಂದೆಯಷ್ಟೇ ಹೊಲದಲ್ಲಿ ಸಸಿಗಳನ್ನ ನೆಟ್ಟವು. ಈಗ ಅದರ ಫಲ ಬಂದಿದ್ದು , ಸೌತೆಕಾಯಿ, ಬದನೇಕಾಯಿ, ಹೂಗಳು ಎಷ್ಟು ಅದ್ಭುತವಾಗಿವೆ ನೋಡಿ ಎಂದು ಹೇಳಿದ್ದಾರೆ.

ಯಾವುದೇ ರಾಸಾಯನಿಕ ಕ್ರಿಮಿ ನಾಶಕಗಳನ್ನ ಸಿಂಪಡಿಸದೆ ನೀರು ಮತ್ತು ಗೊಬ್ಬರದಿಂದಲೇ ಇವುಗಳನ್ನ ಬೆಳೆದಿದ್ದೇವೆ. ಆದರೆ ಹುಳು ಬೀಳೋದೇ ಇಲ್ಲ ಅಂತ ಅಲ್ಲ, ಶೇ ೫ ಭಾಗದಷ್ಟು ಹುಳ ಬೀಳುತ್ತವೆ. ಆದರೆ ಅವು ನಮ್ಮ ಜೊತೆ ಬದುಕಬೇಕಲ್ಲವೇ ಎಂದಿರುವ ಉಪ್ಪಿ, ಶೇ ೧೦ಭಾಗದಷ್ಟು ಇಳುವರಿ ಬರುತ್ತದೆ ಎಂದು ನಾವು ರಾಸಾಯನಿಕಗಳನ್ನ ಸಿಂಪಡಿಸಿ ಭೂಮಿಯನ್ನ ಹಾಳು ಮಾಡುತ್ತಿದ್ದೇವೆ. ಆದರೆ ನೈಸರ್ಗಿಕ ಪದ್ದತಿಯಿಂದ ತರಕಾರಿಗಳನ್ನ ಬೆಳೆಯುವುದರಿಂದ ಒಳ್ಳೆಯ ಇಳುವರಿ ಬರುತ್ತದೆ ಜೊತೆಗೆ ಆರೋಗ್ಯಕ್ಕೂ ಉತ್ತಮ ಎಂದಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು ಹೇಳಿದ್ದನ್ನ ಮಾಡಿ ತೋರಿಸುತ್ತಾರೆ ಉಪ್ಪಿ ಬಸ್ ಅಂತೆಲ್ಲಾ ಕಾಮೆಂಟ್ ಗಳನ್ನ ಮಾಡಿದ್ದಾರೆ.