Advertisements

ಗ್ರಾಮೀಣ ಪ್ರದೇಶದಲ್ಲಿ ಓದಿದ ಮಕ್ಕಳು ಏನು ಬೇಕಾದರೂ ಸಾಧಿಸುತ್ತಾರೆ ಅನ್ನೊದಕ್ಕೆ ಈ ಯುವತಿ ಸಾಕ್ಷಿ. ಈಕೆ ಪರೀಕ್ಷೆಯಲ್ಲಿ ಪಡೆದ ರ‍್ಯಾಂಕ್ ಎಷ್ಟು ಗೊತ್ತಾ?

Inspire

ಗ್ರಾಮೀಣ ಪ್ರದೇಶದಲ್ಲಿ ಓದಿದ ಮಕ್ಕಳು ಏನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಈ ಯುವತಿ ಕಣ್ಣೆದುರಿನ ಸಾಕ್ಷಿಯಾಗಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚಾಣೂರು ಗ್ರಾಮದವರಾದ ಬಿ‌. ಯಶಸ್ವಿನಿ ಅವರು 2019 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 71 ನೇ ಸ್ತಾನವನ್ನು ಗಳಿಸಿದ್ದಾರೆ.

Advertisements

ಇನ್ನೂ ಇವರ ತಂದೆ ಬಿ.ಎಸ್. ಬಸವರಾಜಪ್ಪ ತಾಲೂಕಿನ ಗುಬ್ಬಿಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ. ಯಶಸ್ವಿನಿ ಅವರು ಬಾಣೂರು ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದರು. ನಂತರ ಕಡೂರಿನ ವಿದ್ಯಾ ಮಂದಿರದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸುತ್ತಾರೆ, ನಂತರ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮುಗಿಸುತ್ತಾರೆ, ಇನ್ನೂ ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಅರ್.ವಿ. ಕಾಲೇಜಿನಲ್ಲಿ ಮುಗಿಸುತ್ತಾರೆ.

ಯಶಸ್ವಿನಿ ಯವರು ದೆಹಲಿ ವಾಜೀರಾಂ, ರವಿ ಇನ್ಸ್ ಟಿಟ್ಯೂಟ್‍ನಲ್ಲಿ ತರಬೇತಿಯನ್ನು ಪಡೆದು ಪ್ರಸ್ತುತ ಐಡಿಇಎಸ್ ನಲ್ಲಿ ಉದ್ಯೋಗದ ತರಬೇತಿಯನ್ನು ಮಾಡುತ್ತಿದ್ದಾರೆ. ಕಳೆದ ಬಾರಿ ಇವರು ಯುಪಿಎಸ್.ಸಿ ಪರೀಕ್ಷೆಯನ್ನು ಬರೆದು 293 ರ‍್ಯಾಂಕ್ ಪಡೆದಿದ್ದರು‌. ಯಶಸ್ವಿನಿಯವರಿಗೆ ಚಿಕ್ಕವಯಸ್ಸಿನಲ್ಲಿ ಓದಿನಲ್ಲಿ ಮುಂದಿದ್ದು ಐಎಎಸ್ ಅಧಿಕಾರಿ ಅಗಬೇಕು ಎನ್ನುವ ಕನಸನ್ನು ಹೊತ್ತಿದ್ದಾರೆ‌. ಕಳೆದ ಬಾರಿ 293 ರ‍್ಯಾಂಕ್ ಪಡೆದಿದ್ದರು ಈ ರ‍್ಯಾಂಕ್ ಕಡಿಮೆ ಎನ್ನಿಸಿ ಮತ್ತೇ ಯುಪಿಎಸ್‍ಸಿ ಪರೀಕ್ಷೆಯನ್ನು ಬರೆದು ಈಗ 71 ನೇ ರ‍್ಯಾಂಕ್ ಪಡೆದಿದ್ದಾರೆ‌.

‌ತಂದೆ ಬಸವರಾಜಪ್ಪ ತಾಯಿ ಇಂದಿರಾ ತಮ್ಮ ಪುತ್ರಿ ಯಶಸ್ವಿನಿಯ ಸಾಧನೆಯನ್ನು ಕಂಡು ಸಂತೋಷವನ್ನು ಅಂಚಿಕೊಂಡಿದ್ದಾರೆ. ನನ್ನ ಗುರಿಗೆ ಬೆನ್ನುಲುಬಾಗಿ ನಿಂತವರು ನನ್ನ ತಂದೆ ತಾಯಿ ಹಾಗೂ ನಾನು ಓದಿದ ಶಾಲೆಯ ಗುರುಗಳ ಮಾರ್ಗದರ್ಶನದಿಂದ ಈ ಸ್ಥಾನಕ್ಕೆ ಬರಲು ಕಾರಣವಾಯಿತು. ಜನರ ಸೇವೆ ಮಾಡಬೇಕೆನ್ನುವ ನನ್ನ ಕನಸಿಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಸಹ ಯಶಸ್ವಿನಿ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.