Advertisements

ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ತಕ್ಷಣ ಅಪ್ಪಿತಪ್ಪಿಯೂ ಮಾಡಲೇಬೇಡಿ ಈ ಕೆಲಸಗಳನ್ನ?

Health

ಕರೋನಾ ಸೋಂಕು ಹೆಚ್ಚಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ವೈದ್ಯರು, ಸರ್ಕಾರಗಳು ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಸಲಹೆ ನೀಡಿದ್ದಾರೆ. ಇನ್ನು ಕರೋನ ಶುರುವಾದಾಗಿನಿಂದಲೂ ಸ್ಯಾನಿಟೈಸರ್ ಬಳಸುವುದು ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ. ಆದರೆ ಸ್ಯಾನಿಟೈಸರ್ ಬಳಸುವಾಗ ಎಚ್ಚರಿಕೆಯ ಅಗತ್ಯವೂ ಇದೆ. ಏಕೆಂದರೆ ಸ್ಯಾನಿಟೈಸರ್ ನಿಂದ ಕೈ ತೊಳೆದ ತಕ್ಷಣ ಮಾಡುವ ಕೆಲಸಗಳಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುವ ಸಾಧ್ಯತೆಗಳಿವೆ.

Advertisements

ಹೌದು,ಈಗ ನಮ್ಮ ಜೀವನದ ಭಾಗವಾಗಿರುವ ಸ್ಯಾನಿಟೈಸರ್ ತಯಾರಿಸಲು ಹಲವಾರು ರೀತಿಯ ಕೆಮಿಕಲ್ಸ್ ಗಳನ್ನ ಬಳಸಲಾಗುತ್ತೆ. ಇನ್ನು ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದ್ದು, ಬ್ಯಾಕ್ಟಿರಿಯಾಗಳ್ನನ್ನನಾಶ ಮಾಡುತ್ತದೆ. ಇನ್ನು ಇದರಿಂದ ಕೈತೊಳೆದ ತಕ್ಷಣ ಊಟವಾಗಲಿ ಏನನ್ನಾದರೂ ಸೇವನೆ ಮಾಡಿದ್ರೆ,ಇದರಲ್ಲಿರುವ ಆಲ್ಕೋಹಾಲ್ ಮತ್ತು ರಾಸಾಯನಿಕ ಅಂಶಗಳು ಹೊಟ್ಟೆಯನ್ನ ಸೇರುತ್ತವೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಇನ್ನು ಹ್ಯಾಂಡ್ ಸ್ಯಾನಿಟೈಸರ್ ನಿಂದ ಕೈಗಳನ್ನ ತೊಳೆದ ತಕ್ಷಣ, ನಿಮ್ಮ ಮುಖವನ್ನ ಕೈನಿಂದ ಮುಟ್ಟಬೇಡಿ. ಏಕೆಂದರೆ ಕೆಲವರಿಗೆ ಸೂಕ್ಷ್ಮವಾದ ಚರ್ಮ ಇದ್ದು, ಅದು ಅಲರ್ಜಿಗೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇನ್ನು ಹ್ಯಾಂಡ್ ಸ್ಯಾನಿಟೈಸರ್ ನ್ನ ಹೆಚ್ಚಾಗಿ ಬಳಕೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ನಮ್ಮ ದೇಹಕ್ಕೆ ಬೇಕಾದ ಒಳ್ಳೆಯ ಬ್ಯಾಕ್ಟಿರಿಯಾಗಳು ಕೂಡ ನಾಶವಾಗುವ ಸಾಧ್ಯತೆ ಇದೆ. ಇದೆಲ್ಲಾ ಕಾರಣಗಳಿಂದ ನೀವು ಮನೆಯಲ್ಲಿದ್ದಾಗ ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಬದಲು, ಸೋಪನ್ನೇ ಬಳಸುವುದು ಉತ್ತಮ.