Advertisements

ಮೀನು ಹಿಡಿಯಲು ಹೋದ ಹುಡುಗರಿಗೆ ನದಿಯ ತಳದಲ್ಲಿ ಸಿಕ್ಕಿದ್ದು ಏನು ಗೊತ್ತಾ? ಅದನ್ನು ನೋಡಿ ಊರಿಗೆ ಊರೇ ಆಶ್ಚರ್ಯ ಪಟ್ಟಿದ್ದಾರೆ..

Kannada Mahiti

ನಮಸ್ತೆ ಸ್ನೇಹಿತರೆ, ಈ ನಮ್ಮ ಪ್ರಕೃತಿಯ ಬೆಲೆ ಬಾಳುವ ಪುರಾತನ ವಸ್ತುಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಸಮುದ್ರ, ನದಿ ತಳಗಳಲ್ಲಿ ಹುದುಗಿಕೊಂಡಿವೆ.. ಅಕಸ್ಮಾತ್ ಆಗಿ ಭೂಮಿ ಅಗೆಯುವಾಗ ನದಿ ಅಥವಾ ಸಮುದ್ರ ತಳಕ್ಕೆ ಇಳಿದಾಗ ಕೆಲಮೊಮ್ಮೆ ಪುರಾತನ ಕಾಲದ ವಸ್ತುಗಳು ಅಪರೂಪಕ್ಕೆ ಒಮ್ಮೆ ಸಿಕ್ಕಿಬಿಡುತ್ತವೆ.. ಈಗೆ ಒಮ್ಮೆ ಮೀನು ಹಿಡಿಯಲು ಹೋದ ಸುಮಾರು 12 ರಿಂದ 13 ವರ್ಷದ ಇಬ್ಬರು ಹುಡುಗರಿಗೆ ಆ ನದಿಯಲ್ಲಿ ಬರೋಬ್ಬರಿ 17 ಕೇಜಿ ಚಿನ್ನದ ದೇವರ ವಿಗ್ರಹ ಸಿಕ್ಕಿದೆ. ನಂತರ ಆ ವಿಗ್ರಹವನ್ನು ಹುಡುಗರು ಮನೆಗೆ ತಂದು ಮಾಡಿದ್ದೇನು ಗೊತ್ತಾ? ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬಾನು ಎಂಬ ನದಿಗೆ..

Advertisements

ನದಿಯ ಪಕ್ಕ ಒಂದೇ ಕುಟುಂಬದ ಇಬ್ಬರು ಹುಡುಗರು ಮೀನು ಹಿಡಿಯಲು ಹೋಗಿದ್ದರು. ನದಿ ತೀರಕ್ಕೆ ಹೋದ ಹುಡುಗರು ಮೀನು ಹಿಡಿಯಲು ನದಿಗೆ ಬಲೆ ಬೀಸಿದ್ದಾರೆ. ಬಲೆ ಬೀಸಿದಾಗ ಆ ಬಲೆಯು ಯಾವುದೋ ಬಂಡೆಗೆ ಸಿಕ್ಕಿಕೊಂಡಿದೆ.. ಆ ಬಲೆಯನ್ನು ಬಿಡಿಸಲು ಆ ಇಬ್ಬರು ಹುಡುಗರು ನದಿಗೆ ಇಳಿದಿದ್ದಾರೆ. ನದಿಗ ಇಳಿದಾಗ ಯಾವುದೋ ವಸ್ತು ಇವರ ಕಾಲಿಗೆ ತಾಕಿದೆ. ಆ ಹುಡುಗರು ಏನು ಎಂದು ನೋಡಿದಾಗ ಅದು ಸೀತಾ ದೇವಿಯ ವಿಗ್ರಹವಾಗಿತ್ತು.. ವಿಷಯ ಇಷ್ಟೇ ಆಗಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬದಲಾಗಿ ಆ ವಿಗ್ರಹ 17 ಕೇಜಿ 650 ಗ್ರಾಂ ತೂಕದ ಅಷ್ಟ ದಾತುವಿನಿಂದ ತಯಾರಿಸಿದ ಚಿನ್ನದ ವಿಗ್ರಹವಾಗಿತ್ತು.

ಇನ್ನೂ ಆ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋದ ಆ ಹುಡುಗರಿಗೆ ಇದು ಚಿನ್ನದ ವಿಗ್ರಹ ಎಂದು ತಿಳಿಯದೆ ಆ ವಿಗ್ರಹವನ್ನು ಆಟ ಆಡಲು ಬಳಸಿಕೊಳ್ಳುತ್ತಿದ್ದರು.. ಆ ವಿಗ್ರಹವನ್ನು ಗಮನಿಸಿದ ಕೆಲವು ಗ್ರಾಮಸ್ಥರು ಈ ವಿಗ್ರಹ ಚಿನ್ನದ ವಿಗ್ರಹದಂತೆ ಕಾಣುತ್ತಿದೆ ಅಲ್ವಾ ಎಂದು ಅನುಮಾನಿಸಿ ಆ ಹುಡುಗರನ್ನು ಎಲ್ಲಿ ತಂದದ್ದು ಎಂದು ಕೇಳಿದಾಗ ನದಿಯಲ್ಲಿ ಸಿಕ್ಕಿದ್ದು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇನ್ನೂ ತಕ್ಷಣವೇ ಅಲ್ಲಿನ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ.. ಸ್ಥಳಕ್ಕೆ ದಾವಿಸಿ ವಿಗ್ರಹವನ್ನು ಪರಿಶೀಲಿಸಿದ ಪೋಲಿಸರಿಗೆ ಈ ವಿಗ್ರಹ ಚಿನ್ನದ್ದೇ ಎಂದು ತಿಳಿದಿದೆ‌.

ನಂತರ ಆ ವಿಗ್ರಹವನ್ನು ಪುರಾತತ್ತ್ವ ಇಲಾಖೆಗೆ ವರ್ಗಾಯಿಸಿದ್ದಾರೆ.. ನಂತರ ಪುರಾತತ್ತ್ವ ಇಲಾಖೆಯವರು ಪರಿಶೀಲಿಸಿ ಇದು ಸುಮಾರು 15 ರಿಂದ 16ನೇ ಶತಮಾನದ ಚಿನ್ನದ ವಿಗ್ರಹ .. ಈ ವಿಗ್ರಹ ಕೋಟ್ಯಾಂತರ ರುಪಾಯಿ ಬೆಲೆ ಬಾಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಇದಕ್ಕೂ ಮೊದಲು ಬಾನು ನದಿಯಲ್ಲಿ ಮೀನು ಹಿಡಿಯಲು ಹೋದ ಕೆಲವು ಮೀನುಗಾರರಿಗೆ ಇದೇ ರೀತಿಯ ಹಲವಾರು ಪುರಾತನ ವಸ್ತುಗಳು ದೊರೆತಿದ್ದವು ಹಾಗೂ ಆ ಮೀನುಗಾರರು ಸಂಬಂಧ ಪಟ್ಟ ಇಲಾಖೆಗೆ ಆ ವಸ್ತುಗಳನ್ನು ಒಪ್ಪಿಸಿದ್ದಾಗಿ ಪೋಲಿಸರಿಗೆ ತಿಳಿಸಿದ್ದಾರೆ.. ಇನ್ನೂ ಈ ಪೋಲಿಸರು ಈ ವಿಗ್ರಹದ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.