Advertisements

ಇಲ್ಲಿನ ಹುತ್ತದ ತೀರ್ಥಕ್ಕೆ ಭಾರಿ ಡಿಮ್ಯಾಂಡ್! ಕೇಳಿದ್ದನ್ನ ದಯಪಾಲಿಸುತ್ತಾಳೆ ಈ ತಾಯಿ.. ಎಲ್ಲಿರುವುದು ಗೊತ್ತಾ?

Temples

ಸಕಲ ದೇವಾನುದೇವತೆಗಳು ಬಂದು ದೇವಿಯನ್ನು ವರ್ಷಕ್ಕೆ ಒಮ್ಮೆ ಆರಾಧಿಸುತ್ತಾರೆ. 12 ಅಡಿ ಹುತ್ತ ದಿಂದಲೇ ಸುತ್ತುವರೆದ ಆ ತಾಯಿ ಅಪಾರ ಶಕ್ತಿವಂತೆ. ಇಲ್ಲಿ ಬರುವ ಭಕ್ತರಿಗೆ ಹುತ್ತದ ನೀರನ್ನು ತೀರ್ಥವಾಗಿ ನೀಡಲಾಗುತ್ತದೆ. ಇದರಿಂದ ಸಕಲ ಚರ್ಮರೋಗಗಳು ನಿವಾರಣೆಯಾಗುತ್ತವೆ ಎಂದು ನಂಬಿಕೆ ಇದೆ. ಹಾಗಾದರೆ ಈ ದೇವತೆ ಇಲ್ಲಿ ನೆಲೆಸಿದ್ದಾರೆ? ಹಾಗೆ ದೇವಸ್ಥಾನದ ವಿಶೇಷತೆಗಳು ಏನು? ಅಂತ ಹೇಳ್ತಿವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಈ ದೇವಿ ಸಂತಾನ ಇಲ್ಲದವರು ಬಳಿ ಪೂಜೆ ಸಲ್ಲಿಸಿದರೆ ಸಾಕು ಸಂತಾನವನ್ನು ಕರುಣಿಸುತ್ತಾಳೆ. ಈ ದೇವಿ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಶಕ್ತಿ ದೇವಿ ಎಂದೇ ಕರೆಸಿಕೊಳ್ಳುವ ಈ ತಾಯಿ ಮಲೆನಾಡು, ಉತ್ತರ ಕರ್ನಾಟಕ, ಆಂಧ್ರ ತೆಲಂಗಾಣ ಲಕ್ಷಾಂತರ ಭಕ್ತರನ್ನು ಹೊಂದಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಮೀಪದ ‘ಒಡನಬೈಲು’ ನಲ್ಲಿರುವ ದೇವಸ್ಥಾನ ಪದ್ಮಾವತಿ ದೇವಿ ದೇವಸ್ಥಾನ.

[widget id=”custom_html-3″]

Advertisements

ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರ ಇದು ಮೊದಲು ಲಿಂಗನಮಕ್ಕಿಯ ಹಬೈಲ್ ನಲ್ಲಿತ್ತು. ಜಲಾಶಯದ ಭರ್ತಿ ನಂತರ ಈ ದೇವಿಗೆ ಪೂಜೆ ನಿಂತಿತ್ತು. ನಂತರ ದೇವಾಲಯದ ವಂಶಸ್ಥರಾದ ವೀರರಾಜ ಜೈನ್ ಎಂಬುವರ ಕನಸಿನಲ್ಲಿ ಬಂದು ನನಗೆ ದಿನನಿತ್ಯ ಪೂಜೆ ಸಲ್ಲಿಸುವಂತೆ ದೇವಿ ಕೇಳಿದಳಂತೆ. ಆಗ ರಾಜಯ್ಯ ಮೂರ್ತಿ ಸುತ್ತ ಮೊದಲಿನಂತೆ ಹುತ್ತಗಳು ನಿರ್ಮಾಣವಾದರೆ ಮಾತ್ರ ಪೂಜಿಸುವುದಾಗಿ ಸವಾಲ್ ಎಸದರಂತೆ. ಆಗ ಮರುದಿನ ಎದ್ದು ನೋಡಿದರೆ ದೇವಿ ಮೂರ್ತಿ ಸುತ್ತಲೂ ಹುತ್ತ ಬೆಳೆದು ನಿಂತಿತ್ತಂತೆ. ಈ ವಿಸ್ಮಯ, ಪವಾಡವನ್ನು ಕಂಡ ರಾಜಯ್ಯ್ ಅವರು ದೇವಿಗೆ ಶರಣರಂತೆ. ಈಗಲೂ ದೇವಿಗೆ 12 ಅಡಿಯಷ್ಟು ಎತ್ತರವಾಗಿ ಹುತ್ತಗಳು ಸುತ್ತುವರೆದಿವೆ.

[widget id=”custom_html-3″]

ಪ್ರತಿದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹುತ್ತದ ಮಂದಿರುವ ತೀರ್ಥವನ್ನು ಸೇವಿಸಿ ರೋಗಗಳಿಂದ ಮುಕ್ತವಾಗುತ್ತಿದ್ದಾರೆ. ಹಾಗೆ ಕನ್ಯೆಯರು ಬಂಗಾರ, ಬೆಳ್ಳಿ,ತಾಮ್ರ, ಕಂಚಿನ ತಾಳಿಯನ್ನು ಮಾಡಿಸಿಕೊಟ್ಟರೆ ವಿವಾಹ ಭಾಗ್ಯವನ್ನು ಕಲ್ಪಿಸುವಂತೆ ದೇವಿ ಪದ್ಮಾವತಿ. ಮಕ್ಕಳಿಲ್ಲದವರು ಬಳೆ ಪೂಜೆ ಸಲ್ಲಿಸಿದರೆ ಸಾಕು ತಾಯಿ ಪದ್ಮಾವತಿ ಸಂತೃಪ್ತಳಾಗಿ ಮಕ್ಕಳನ್ನು ಕರುಣಿಸುತ್ತಾಳೆ ಎಂದು ಇಲ್ಲಿಯ ಜನರು ಹೇಳುತ್ತಾರೆ. ವಿಸ್ಮಯಗಳಿಗೆ ಈ ತಾಯಿ ಹೆಸರು ಆಗಿದ್ದರಿಂದಲೇ ದಿನದಿಂದ ದಿನಕ್ಕೆ ಈ ತಾಯಿಯ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಏರುತ್ತಲೇ ಇದೆ. ನೀವು ಕೂಡ ಜೋಗಕ್ಕೆ ಭೇಟಿ ನೀಡಿದಾಗ ತಪ್ಪದೆ ಈ ತಾಯಿಯ ದರ್ಶನವನ್ನು ಪಡೆದು ಪುನೀತರಾಗಿ.

[widget id=”custom_html-3″]