Advertisements

ನಟ ಭಯಂಕರ ವಜ್ರಮುನಿ ಅವರ ಸಮಾಧಿ ಹಾಗೂ ಅವರ ಕಾರು ಈಗ ಹೇಗಿದೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಸದಾನಂದ ಸಾಗರ್ ಅವರ ಮತ್ತೊಂದು ಹೆಸರು ವಜ್ರಮುನಿ. ಇವರು ಅತ್ಯಂತ ಜನಪ್ರಿಯವಾಗಿದ್ದು ಕೂಡ ಈ ಹೆಸರಿನ ಮೂಲಕ ಎಂದೇ ಹೇಳಬಹುದು.. ನಟ ಭೈರವ, ನಟ ಭ’ಯಕಂರ ಎಂಬ ಬಿರುದಿನಿಂದ ಚಿತ್ರರಂಗದಲ್ಲಿ ತಮ್ಮ ಅದ್ಬುತವಾದ ನಟನೆಯಿಂದ ಗುರುತಿಸಿ ಕೊಂಡಿದ್ದಾರೆ. ಅದ್ಬುತವಾದ ಖಳನಟನಾಗಿ ಚಿತ್ರರಂಗದಲ್ಲಿ ಮೆರೆದಂತಹ ನಟ ಅಂದರೆ ಅದು ವಜ್ರಮುನಿಯವರು.. ಇವರ ಧ್ವನಿಯೆಂದರೆ ಅಭಿಮಾನಿಗಳಿಗೆ ತುಂಬಾನೆ ಅಚ್ಚುಮೆಚ್ಚು. ತಮ್ಮ ಅದ್ಬುತವಾದ ಕಂಠಸಿರಿಯಿಂದ ಕೂಡ ಇವರು ತುಂಬಾನೆ ಫೇಮಸ್ ಆಗಿದ್ದರು..

Advertisements

ಈಗಲೂ ಕೂಡ ವಜ್ರಮುನಿಯವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಅವರ ನೆನಪು ಸದಾ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ಹೇಳಿದರೆ ತಪ್ಪಾಗಲಾರದು.. ಈ ಪೊಟೊದಲ್ಲಿ ನೀವು ಮೊದಲಬಾರಿಗೆ ಅವರ ಸ್ಮಾರಕ ಹೇಗಿದೆ ಎಂದು ನೋಡಬಹುದು. ಅಭಿಮಾನಿಗಳೆಲ್ಲಾ ಸೇರಿ ಇವರ ಸ್ಮಾರಕವನ್ನು ನಿರ್ಮಿಸಿದ್ದಾರೆ.. ಹೂವಿನ ಅಲಂಕಾರವನ್ನು ಕೂಡ ಮಾಡುತ್ತಾರೆ. ಸುಮಾರು 200 ಕ್ಕೂ ಹೆಚ್ಚು ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ.. ವಜ್ರಮುನಿಯವರು ಮೊದಲು ಅಭಿನಯಿಸಿದ ಚಿತ್ರ ಮಲ್ಲಮ್ಮನ ಪವಾಡ..

ನಂತರ ಗೆಜ್ಜೆ ಪೂಜೆ, ಅಳಿಯ ಗೆಳೆಯ, ತಾಯಿಯೇ ದೇವರು, ಸಿಪಾಯಿ ರಾಮು, ನ್ಯಾಯವೇ ದೇವರು, ಸಾಕ್ಷಾತ್ಕಾರ. ಮುಂತಾದ ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಅದ್ಬುತವಾದ ನೈಜ ಅಭಿನಯದಿಂದ ಅಪಾರ ಅಭಿಮಾನಿಗಳ ಪ್ರೀತಿಗೆ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಇವರು ನಮ್ಮನ್ನು ಬಿಟ್ಟು ಅಗಲಿ ಹೋದಾಗ. ಇವರಿಗೆ ಕೇವಲ 61 ವರ್ಷ ವಯಸ್ಸು.. ಇವರಿಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ರಾವಣ ಪಾತ್ರದಲ್ಲಿ ಸಖತ್ತಾಗಿ ಮಿಂಚಿ ಮೆರೆದಿದ್ದರು.. ಈ ಪಾತ್ರದ ಮೂಲಕ ವಜ್ರಮುನಿಯವರು ಒಳ್ಳೆಯ ಹೆಸರನ್ನು ಹಾಗೂ ಪ್ರಖ್ಯಾತಿ ಕೂಡ ಹೊಂದಿದ್ದಾರೆ.

ಮಯೂರ, ಸಂಪತ್ತಿಗೆ ಸವಾಲ್, ಗಿರಿ ಕನ್ಯೆ, ಧಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ.. ಈಗೆ ತುಂಬಾ ಸಿನಿಮಾಗಳಲ್ಲಿ ತಮ್ಮ ಅಧ್ಬುವಾದ ನಟನೆಯನ್ನು ಜನರ ಎದುರಿಗೆ ತೋರಿಸಿ ಎಲ್ಲರನ್ನು ಮನರಂಜಿಸಿದ್ದಾರೆ.. ವಜ್ರಮುನಿಯವರು ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಕೂಡ ಬ’ಳಲುತ್ತಿದ್ದರು. 2006 ರಲ್ಲಿ ಎಲ್ಲರನ್ನು ಬಿಟ್ಟು ಅಗಲಿ ಪ್ರಪಂಚದಿಂದ ದೂರ ಹೊರಟು ಹೋದರು. ಆ ಕ್ಷಣ ಎಲ್ಲರಿಗೂ ನೋವನ್ನು ತಂದಿತ್ತು.. ವಜ್ರಮುನಿಯವರನ್ನು ಇಂದಿಗೂ ಸಹ ಯಾರು ಮರೆತಿಲ್ಲ. ಅನೇಕ ಅಭಿಮಾನಿಗಳಿಗೆ ವಜ್ರಮುನಿ ಅಂದರೆ ತುಂಬಾನೆ ಇಷ್ಟ..

70, 90 ರ ದಶಕದಲ್ಲಿ ಟಾಪ್ ನಟನಾಗಿ ಖ್ಯಾತ ಖಳನಾಯಕನಾಗಿ ವಜ್ರಮುನಿಯವರು ಮಿಂಚಿ ಮೆರೆದಾಡಿದ್ದರು. ಈಗಿನ ಕಾಲದ ಯುವಕರು ವಜ್ರಮುನಿಯವರನ್ನು ಇಂದಿಗೂ ಕೂಡ ನೆನಪಿಸಿಕೊಳ್ಳುತ್ತಾರೆ.. ಅವರ ಸ್ಮಾರಕದಲ್ಲಿ ಇಂದಿಗೂ ಅವರ ಪೂಜೆ ಸದಾಕಾಲ ನಡೆಯುತ್ತಿರುತ್ತದೆ. ಅವರಂತಹ ಒಬ್ಬ ಪ್ರಚಂಡ ಖಳನಾಯಕನನ್ನು ಕಳೆದುಕೊಂಡ ಚಿತ್ರರಂಗಕ್ಕೆ ಒಂದು ದೊಡ್ಡ ಲಾಸ್ ಎಂದೇ ಹೇಳಬಹುದು. ಚಿತ್ರರಂಗದಲ್ಲಿ ಅವರ ಸ್ಥಾನವನ್ನು ತುಂಬಲು ಮತ್ಯಾರಿಂದಲೂ ಸಾಧ್ಯವಿಲ್ಲ ಎಂದೇ ಹೇಳಬಹುದು.. ವಜ್ರಮುನಿಯವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.