Advertisements

ಖ್ಯಾತ ಖಳನಟ ವಜ್ರಮುನಿ ಮೊಮ್ಮಗನ ಈ ಡೈಲಾಗ್ ಗಳನ್ನ ಕೇಳಿದ್ರೆ ಅಚ್ಚರಿಪಡ್ತೀರಾ ! ಈ ವಿಡಿಯೋ ನೋಡಿ..

Uncategorized

ನಮಸ್ತೇ ಸ್ನೇಹಿತರೇ, ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ಖ್ಯಾತ ಖಳ ನಟರಲ್ಲಿ ನಟ ಭಯಂಕರ ಎಂದೇ ಖ್ಯಾತರಾದ ವಜ್ರಮುನಿಯವರು ಕೂಡ ಒಬ್ಬರು. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಜ್ರಮುನಿಯವರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇನ್ನು ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್ ಎಂದು. ನಟನೆಯಲ್ಲಿ ಅಪಾರ ಆಸಕ್ತಿಯನ್ನ ಹೊಂದಿದ್ದ ವಜ್ರಮುನಿಯವರು ರಂಗಭೂಮಿ ಕಲಾವಿದವನಾಗಿ ತಮ್ಮ ವೃತ್ತಿ ಬದುಕನ್ನ ಶುರುಮಾಡುತ್ತಾರೆ. ಖಳನಟನಿಂದ ಹಿಡಿದು ಪೋಷಕ ನಟ ಹಾಗೂ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದಾರೆ ನಟ ವಜ್ರಮುನಿಯವರು.

Advertisements

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಮಲ್ಲಮ್ಮನ ಪವಾಡ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು ನಟ ವಜ್ರಮುನಿ. ಇನ್ನು ೭೦, ೮೦ರ ಆಸುಪಾಸಿನಲ್ಲಿ ಅಣ್ಣಾವ್ರು ರಾಜ್ ಕುಮಾರ್ ಮತ್ತು ವಜ್ರಮುನಿಯವರ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಪ್ರಚಂಡ ರಾವಣ ನಾಟಕದಲ್ಲಿ ರಾವಣನಾಗಿ ಆರ್ಭಟಿಸುವ ಮೂಲಕ ಜನಪ್ರಿಯತೆ ಗಳಿಸಿದ ವಜ್ರಮುನಿಯವರು, ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನ ಗೌರವಿಸಿ ಕರ್ನಾಟಕ ಸರ್ಕಾರ ಇವರಿಗೆ ಕನ್ನಡ ಚಿತ್ರ ಜೀವಮಾನ ಸಾಧನೆ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ಇನ್ನು ಖ್ಯಾತ ಖಳನಟನಿಗೆ ಮೂರು ಜನ ಗಂಡು ಮಕ್ಕಳಿದ್ದು ಅವರು ಯಾರೂ ಕೂಡ ಸಿನಿಮಾ ರಂಗದಲ್ಲಿ ನಟಿಸಿಲ್ಲ.

ಬೇಸರದ ಸಂಗತಿಯೆಂದರೆ ಧೀರ್ಘಕಾಲದ ಮಧುಮೇಹ ಸೇರಿದಂತೆ ಕಿಡ್ನಿ ಸಂಬಂದಿತ ಕಾಯಿಲೆಯಿಂದ ಬಳಳುತ್ತಿದ್ದ ವಜ್ರಮುನಿಯವರು ಜನವರಿ 5, 2006ರಲ್ಲಿ ಸ್ವರ್ಗಸ್ಥರಾಗುತ್ತಾರೆ. ಆದರೆ ಇಂದಿಗೂ ಕೂಡ ವಜ್ರಮುನಿಯವರು ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿರುವುದು ಅವರ ಮೇರು ಅಭಿನಯಕ್ಕೆ ಸಾಕ್ಷಿಯಾಗಿದೆ. ಇನ್ನು ಈಗ ವಜ್ರಮುನಿಯವರ ಕುಟುಂಬದ ಕುಡಿ ತನ್ನ ತಾತನ ಸಿನಿಮಾದ ಡೈಲಾಗ್ ಗಳನ್ನ ಹೇಳುವ ಮೂಲಕ ಮುಂದೆ ನಟನೆಯಲ್ಲಿ ಸದ್ದು ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ.

ಹೌದು, ವಜ್ರಮುನಿಯವರ ಮೂರನೆಯ ಮಗ ವಜ್ರಮುನಿ ಜಗದೀಶ್ ಅವರ ಪುತ್ರ ಆಕರ್ಷ್, ತನ್ನ ತಾತನಂತೆ ಡೈಲಾಗ್ ಹೇಳುವುದನ್ನ ಕಲಿತಿದ್ದಾನೆ. ತಾತನ ಪ್ರಚಂಡ ರಾವಣ ನಾಟಕದ ರಾವಣ ಪಾತ್ರದ ಸಂಭಾಷಣೆಯನ್ನ ಹರಳು ಹುರಿದಂತೆ ಹೇಳುವ ಆಕರ್ಷ್ ತನ್ನ ತಾತ ವಜ್ರಮುನಿಯವರನ್ನ ನೆನಪು ಮಾಡುತ್ತಿದ್ದಾನೆ. ಆಕರ್ಷ್ ತನ್ನ ತಾತ ವಜ್ರಮಿನಿಯವರ ಡೈಲಾಗ್ ಗಳನ್ನ ಹೇಳುತ್ತಾ ಅಬ್ಬರಿಸಿರುವ ವಿಡಿಯೋ ಮೇಲಿದೆ ನೋಡಿ..ನಿಮ್ಮ ಅನಿಸಿಕೆ ತಿಳಿಸಿ..