Advertisements

ತನ್ನ ಕಣ್ ನೋಟದಲ್ಲೇ ಮೋಡಿ ಮಾಡಿದ್ದ ನಟಿ ವನಿತಾ ವಾಸು ಅವರ ಮಗ ಈಗ ಹೇಗಿದ್ದಾನೆ ಗೊತ್ತಾ ?

Cinema

ಚಂದನವನ ಕಂಡ ಸುಂದರ ನಟಿಯರಲ್ಲಿ ವನಿತಾವಾಸು ಕೂಡ ಒಬ್ಬರು. ೯೦ರ ದಶಕದಲ್ಲಿ ಸ್ಯಾಂಡಲ್ವುಡ್ ನಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ ನಟಿ ವನಿತಾ ವಾಸು ಎಂದರೆ ತಪ್ಪಾಗೊದಿಲ್ಲ. ಇನ್ನು ಆ ಸಮಯದಲ್ಲಿ ಈ ನಟಿಯ ಕಣ್ಣಿನ ನೋಟ ಕಂಡೆ ಎಷ್ಟೋ ಹುಡುಗರು ಹಾಗೂ ನಟರೂ ಕೂಡ ತಮ್ಮ ಕನಸಿನ ಹುಡುಗಿ ಇದ್ದರೆ ವನಿತಾ ವಾಸು ಅವರ ತರಾನೇ ಇರಬೇಕೆಂದು ಕನಸನ್ನ ಕಂಡಿದ್ದರು. 90ರ ದಶಕದ ಕನ್ನಡ ಚಿತ್ರರಂಗದಲ್ಲಿ ಇವರೂ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ಖ್ಯಾತ ನಟಿ ಎನಿಸಿಕೊಂಡವರು. ಸಿನಿಮಾ ಬಳಿಕ ಮನೆಯೊಂದು ಮೂರು ಬಾಗಿಲು ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಸೀರಿಯಲ್ ಲೋಕವನ್ನೇ ಆಳಿದವರು ಈ ನಟಿ.

Advertisements

ಇನ್ನು ನಟಿ ವನಿತಾ ವಾಸು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಇನ್ನು ಶಾಲೆಯ ದಿನಗಳಲ್ಲಿ ಬುದ್ದಿವಂತ ವಿದ್ಯಾರ್ಥಿನಿಯಾಗಿದ್ದ ನಟಿ ವನಿತಾ ವಾಸು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕ್ಲಾಸ್ ಮಾನೀಟರ್ ಆಗಿದ್ದವರು. ಇನ್ನು ಕಾಲೇಜಿನ ದಿನಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ವನಿತಾ ವಾಸು ಅವರ ಫ್ಯಾಶನ್ ಮತ್ತು ಸ್ಟೈಲ್ ನ್ನ ಕಂಡ ಹಲವಾರು ಸಂಸ್ಥೆಗಳು ತಮ್ಮ ಕಂಪನಿಯ ಬ್ರಾಂಡ್ ಗಳಿಗೆ ಮಾಡೆಲಿಂಗ್ ಮಾಡುವಂತೆ ಕಂಪನಿಗಳು ಕೇಳಿಕೊಂಡಿದ್ದವು. ಇನ್ನು ಆಗ ೯೦ರ ದಶಕದಲ್ಲೇ ಮಾಡೆಲ್ ಆಗಿ ಮಿಂಚುತ್ತಿದ್ದ ನಟಿ ವನಿತಾ ವಾಸು ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು. ಇನ್ನು ಫ್ರೆಂಡ್ಲಿ ನೇಚರ್ ಇರುವ ವನಿತಾ ವಾಸು ಅವರು ಸಿನಿಮಾ ಸೆಟ್ ನಲ್ಲಿದ್ದಾಗ ಹೀರೊನಿಂದ ಹಿಡಿದು ಲೈಟ್ ಬಾಯ್ ಸೇರಿದಂತೆ ಎಲ್ಲರ ಜೊತೆ ಬೆರೆಯುತ್ತಿದ್ದವರು.

ಎಲ್ಲರ ಜೊತೆ ಆತ್ಮೀಯರಾಗಿ ಮಾತನಾಡುತ್ತಿದ್ದರು. ಇನ್ನು ವಿಶೇಷ ಎಂದರೆ ವನಿತಾ ವಾಸು ಅವರಿಗೆ ಹಬ್ಬಗಳನ್ನ ಆಚರಿಸುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಎಲ್ಲಾ ರೀತಿಯ ಹಬ್ಬಗಳನ್ನ ಆಚರಿಸುತ್ತಿದ್ದ ಅವರು ಎಲ್ಲರನ್ನು ಕರೆದು ಹಬ್ಬದ ಊಟವನ್ನ ಮಾಡಿಸುತ್ತಿದ್ದರು. ಇನ್ನು ವನಿತಾ ವಾಸು ಅವರಿಗೆ ಪುತ್ರನೊಬ್ಬನಿದ್ದಾನೆ. ಅವರ ಹೆಸರು ಕಷಿಸ್ ಎಂದು. ಇನ್ನು ವನಿತಾ ಅವರ ವೀಕ್ನೆಸ್ ಕೂಡ ಮಗನೇ, ಶಕ್ತಿಯೂ ಕೂಡ ಮಗನೇ. ಇನ್ನು ಕನ್ನಡ ಚಿತ್ರರಂಗ ಕಂಡ ನಿಷ್ಕಲ್ಮಶ ಹೃದಯವಂತಿಕೆ ನಟರಲ್ಲಿ ವನಿತಾ ವಾಸು ಕೂಡ ಒಬ್ಬರು. ಸ್ನೇಹಿತರೇ, ವನಿತಾ ವಾಸು ಅವರು ಅಭಿನಯಿಸಿದ್ದ ಯಾವ ಚಿತ್ರ ನಿಮಗೆ ಇಷ್ಟ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..