Advertisements

ಮಹಾಭಾರತದಲ್ಲಿ ಬರುವ ಪಾತ್ರಗಳಲ್ಲಿ ಅತಿಹೆಚ್ಚು ಅನ್ಯಾಯವಾಗಿದ್ದು ವಾಸುದೇವ ಶ್ರೀ ಕೃಷ್ಣನಿಗೇ ! ಅದು ಹೇಗೆ ಅಂತೀರಾ ?

Adyathma

ನಮಸ್ತೇ ಸ್ನೇಹಿತರೇ, ಸನಾತನ ಕಾಲದಿಂದಲೂ ಮಹಾಭಾರತ ಕತೆ ಹಾಗೂ ಅದರಲ್ಲಿ ಬರುವ ಪಾತ್ರಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಹಾಗಾದ್ರೆ ಮಹಾಭಾರತದ ಪಾತ್ರಗಳಲ್ಲಿ ಅತೀ ಹೆಚ್ಚು ಕಷ್ಟ, ಅ’ವಮಾನ, ನಿಂ’ದನೆಗಳನ್ನ ಅನುಭವಿಸಿದ್ದು ಯಾರು ಎಂಬ ಪ್ರಶ್ನೆ ಬಂದಾಗ ಹಲವು ಪಾತ್ರಗಳು ಕಣ್ಣಮುಂದೆ ಬರುತ್ತವೆ. ಹೌದು, ಅತೀ ಹೆಚ್ಚು ನಿಂ’ದನೆ ಹಾಗೂ ಅ’ವಮಾನಗಳನ್ನ ಅನುಭವಿಸಿದವನು ಮಹಾರಥಿ ದಾನ ಶೂರ ಕರ್ಣ ಎನ್ನುವುದು ಕೆಲವರ ಅಭಿಪ್ರಾಯ. ರಾಜ ಸಭೆಯಲ್ಲಿ ದ್ರೌಪದಿಯ ವಸ್ತ್ರಾಭರಣ, ಪಾಂಡವರ ೧೨ ವರ್ಷ ಅರಣ್ಯವಾಸ ಹಾಗೂ ಒಂದು ವರ್ಷ ಆಜ್ನ್ಯಾತವಾಸದ ವಿಷಯ ತೆಗೆದುಕೊಂಡಾಗ ಇವರು ಕೂಡ ಅ’ವಮಾನ ಅ’ಪಮಾನಗಳಿಗೆ ಗುರಿಯಾಗಿದ್ದಾರೆ ಎಂಬುದು ಕೂಡ ಹಲವರ ಅಭಿಪ್ರಾಯವಾಗಿದೆ. ಆದರೆ ಮಹಾಭಾರತದ ಇತರೆ ಪಾತ್ರಗಳಿಗೆ ಮಿಡಿಯುವ ಮನಸ್ಸು ವಾಸುದೇವ ಕೃಷ್ಣನಿಗೇಕೆ ಮಿಡಿಯುವುದಿಲ್ಲ ?

Advertisements

ಹೌದು ಸ್ನೇಹಿತರೇ, ವಾಸುದೇವ ಸಾಕ್ಷಾತ್ ನಾರಾಯಣನ ಅವತಾರವಾಗಿದ್ದರೂ ಹುಟ್ಟಿನಿಂದಲೇ ಕಷ್ಟಗಳ ಜೊತೆಗೆ ಬೆಳೆಯುತ್ತಾನೆ. ಹೌದು, ತನ್ನ ಜನ್ಮವಾಗುತ್ತಲೇ ತಂದೆ ತಾಯಿಗಳಿಂದ ಬೇರೆಯಾಗುತ್ತಾನೆ. ರಾಜಮನೆತನದಲ್ಲಿ ಜನನವಾಗಿದ್ದರೂ ಗೊ’ಲ್ಲನೆಂಬ ಕಾರಣಕ್ಕಾಗಿ ನಿಂದನೆಗಳನ್ನ ಸಹಿಸಿಕೊಳ್ಳುತ್ತಾನೆ. ಧರ್ಮ ಸಂಸ್ಥಾಪನೆಗೋಸ್ಕರ ತನ್ನ ಬಂಧುಗಳ ವಿರೋಧವನ್ನೇ ಕಟ್ಟಿಕೊಳ್ಳುತ್ತಾನೆ. ತನ್ನ ಇಷ್ಟ ಪರಿವಾರದವರ ಸೌಖ್ಯವನ್ನೇ ಬಯಸುತ್ತಿದ್ದ ಕೃಷ್ಣ ಪಾಂಡವರಿಗೋಸ್ಕರ ಧೂತನಾಗಿ ಕೌರವರೊಡನೆ ಸಂಧಿ ಮಾಡಲು ಹೋಗುತ್ತಾನೆ.

ಅಲ್ಲಿಯೂ ಕೂಡ ಗೊಲ್ಲನೆಂಬ ನಿಂ’ಧನೆಗೆ ಒಳಗಾಗುತ್ತಾನೆ. ದುರ್ಯೋಧನ ಹಾಗೂ ಅವನ ದುಷ್ಟಕೂಟದಿಂದ ಅವಮಾನಿತನಾಗುತ್ತಾನೆ. ಇನ್ನು ಕೃಷ್ಣನನ್ನೇ ಬಂ’ಧಿ ಮಾಡಲು ಪ್ರಯತ್ನ ಕೂಡ ಮಾಡಲಾಗುತ್ತದೆ. ಆದರೆ ಇವೆಲ್ಲವುಗಳನ್ನ ಮೆಟ್ಟಿ ನಿಂತ ವಾಸುದೇವ ಕೃಷ್ಣ ಕುರುಕ್ಷೇತ್ರದಂತಹ ಮಹಾ ಸಂಗ್ರಾಮದಲ್ಲಿ ಧರ್ಮದ ಪರವಾಗಿದ್ದ ಪಾಂಡವರ ಪರ ನಿಲ್ಲುತ್ತಾನೆ. ಧರ್ಮಾತ್ಮರಾಗಿದ್ದ ಪಾಂಡವರನ್ನ ಯಾವುದೇ ಫಲಾ ಪೇಕ್ಷೆಯಿಲ್ಲದೆ ವಿಜಯಶಾಲಿಗಳನ್ನಾಗಿ ಮಾಡುತ್ತಾನೆ. ಇದಾದ ಬಳಿಕ ತನ್ನದೇ ಯಾದವ ವಂಶದ ಬಂಧು ಬಳಗವನ್ನ ಕಳೆದುಕೊಳ್ಳುತ್ತಾನೆ. ಅಸ್ತ್ರ ಮಹಾಸ್ತ್ರಗಳನ್ನು ಹಾಗೂ ಅತಿರಥ ಮಹಾರಥರನ್ನ ಕಂಡಿದ್ದ ಹಾಗೂ ಸ್ವತಃ ಭಗವಂತನೇ ಆಗಿದ್ದರೂ ಕೇವಲ ಒಬ್ಬ ಬೇಡನ ಸಾಮಾನ್ಯ ಬಾಣದಿಂದ ತನ್ನ ಜೀವನ ಕಳೆದುಕೊಳ್ಳುತ್ತಾನೆ.

ಹೀಗೆ ಇಡೀ ಜೀವನ ಪರ್ಯಂತ ತನಗಾಗಿ ಯಾವುದೇ ಲಾಭಾಪೇಕ್ಷೆ ಮಾಡದೇ ಜೀವನದುದ್ದಕ್ಕೂ ಬೇರೆಯವರ ಹಿತವನ್ನೇ ಬಯಸುತ್ತಾನೆ. ಆದರೆ ಇಷ್ಟೆಲ್ಲಾ ಆದಮೇಲೂ ವಾಸುದೇವ ಕೃಷ್ಣನಿಗೆ ಸಿಕ್ಕ ಬಿರುದು ಕಪಟನಾಟಕ ಸೂತ್ರಧಾರಿ ಎಂದು ! ಹೀಗೆ ಶ್ರೀಕೃಷ್ಣ ಸಾಕ್ಷಾತ್ ಭಗವಂತನಾಗಿದ್ದರೂ ತನ್ನ ಮಾನವ ಜನ್ಮವನ್ನ ಸಾರ್ಥಕಗೊಳಿಸುವಂತೆ ಜೀವಿಸಿದ..ಆದರೆ ಮಹಾಭಾರತದ ಬೇರೆ ಪಾತ್ರಗಳ ಬಗ್ಗೆ ಇರುವ ಕರುಣೆ, ಮಿಡಿಯುವ ಮನಸ್ಸು ಕೃಷ್ಣನಿಗೇಕೆ ಉತ್ತರವೇ ಇಲ್ಲದ ಪ್ರಶ್ನೆಯಾಗಿದೆ ?