Advertisements

ಜೊತೆಯಾಗಿ ನಟಿಸುತ್ತಿದ್ದ ನಟನನ್ನೇ ಮದುವೆಯಾದ ವೀಣಾ ಸುಂದರ್! ಇಬ್ಬರು ಮಕ್ಕಳು ಹೇಗಿದ್ದಾರೆ ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಹಾಗು ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ ನಟಿ ವೀಣಾ ಸುಂದರ್.. ಧಾರವಾಹಿ ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ತುಂಬಾ ನೈಜವಾಗಿ ನಟಿಸುವ ನಟಿಯರಲ್ಲಿ ನಟಿ ವೀಣಾ ಸುಂದರ್ ಕೂಡ ಒಬ್ಬರು. ಕಿರುತೆರೆ ಹಾಗು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡುವ ನಟ ಸುಂದರ್ ಅವರನ್ನು ವೀಣಾ ಅವರು ಮದುವೆಯಾಗಿದ್ದಾರೆ.. ಆದ್ದರಿಂದಲೇ ತಮ್ಮ ಹೆಸರಿನ ಜೊತೆ ತಮ್ಮ ಪತಿಯ ಹೆಸರನ್ನು ಸೇರಿಸಿಕೊಂಡು ಚಿತ್ರರಂಗದಲ್ಲಿ ವೀಣಾ ಸುಂದರ್ ಎಂದೇ ಖ್ಯಾತಿಯಾಗಿದ್ದಾರೆ.

Advertisements

ವೀಣಾ ಸುಂದರ್ ಮತ್ತು ಪತಿ ಸುಂದರ್ ಅವರು ಖ್ಯಾತ ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಧಾರವಾಹಿಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.. ಇದಲ್ಲದೆ ಹಲವಾರು ಧಾರವಾಹಿಗಳಲ್ಲಿ ಈ ದಂಪತಿ ಜೊತೆಯಲ್ಲಿ ನಟಿಸಿದ್ದಾರೆ. ವೀಣಾ ಮತ್ತು ಸುಂದರ್ ಅವರು ಸುಮಾರು ಹತ್ತು ಚಿತ್ರಗಳಲ್ಲಿ ದಂಪತಿಗಳಾಗಿ ಅಭಿನಯಿಸಿದ್ದಾರೆ.. ವೀಣಾ ಅವರ ಪತಿ ಸುಂದರ್ ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಒಬ್ಬ ಶಿಕ್ಷಕರಾಗಿದ್ದರು. ಸುಂದರ್ ಅವರು ಕೆಲವು ಧಾರವಾಹಿಗಳಿಗೆ ಸಂಭಾಷಣೆಯನ್ನು ಕೂಡ ಬರೆದಿದ್ದಾರೆ..

ವೀಣಾರವರು ಕಿರುತೆರೆ ಹಾಗು ಸಿನಿಮಾಗಳಲ್ಲಿ ಪತ್ನಿಯಾಗಿ, ತಾಯಿಯಾಗಿ, ಅಕ್ಕನಾಗಿ, ಖಳನಾಯಕಿಯಾಗಿ.. ಹೀಗೆ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಕೂಡ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಅದ್ಬುತವಾಗಿ ನಟಿಸುವ ಪ್ರತಿಭಾವಂತ ನಟಿ ವೀಣಾ ಸುಂದರ್. ಕೆಲವು ಸಿನಿಮಾಗಳಲ್ಲಿ ಅತೀ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವೀಣಾ ಸುಂದರ್ ಕೊಟ್ಟ ಪಾತ್ರಗಳನ್ನು ಚೊಕ್ಕವಾಗಿ ನಟಿಸಿ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾರೆ.

ಇನ್ನೂ ವೀಣಾ ಸಂದರ್ ಮತ್ತು ಪತಿ ಸುಂದರ್ ಅವರು ಹಲವಾರು ನಾಟಕಗಳನ್ನು ಆಯೋಜಿಸಿ. ನಟಿಸಿದ್ದಾರೆ.. ವೀಣಾ ಅವರು ರಾಧಿಕಾ ಕುಮಾರಸ್ವಾಮಿ ಅವರ ದಮಯಂತಿ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ವೀಣಾ ಸುಂದರ್ ಅವರು ಒಂದೆರಡು ಜಾಹಿರಾತುಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ.. ಈ ಪೊಟೊದಲ್ಲಿ ನೀವು ವೀಣಾ ಸುಂದರ್ ಅವರ ಪತಿ ಸುಂದರ್ ಮತ್ತು ಮಗ, ಮಗಳನ್ನು ನೋಡಬಹುದು.