Advertisements

ತಾಯಿನಾ ಸಾಕಲು ಆಗದೆ ದೇವಸ್ಥಾನದ ಹತ್ತಿರ ಬಿಟ್ಟು ಹೋದ ಮಗ! ಆಮೇಲೆ ಏನಾಯ್ತು ಗೊತ್ತಾ? ಕಣ್ಣೀರು ಬರುತ್ತೆ..

Motivation

ನಮಸ್ತೇ ಸ್ನೇಹಿತರೆ, ಚೆನ್ನೈನ ಒಂದು ಮಾಕೊಟ್ಟು ಊನ ದೇವಸ್ಥಾನದಲ್ಲಿ ಹಲವು ಜನ ಭಿಕ್ಷೆ ಬೇಡ್ತಾಯಿರ್ತಾರೆ.. ಆಗ ಆರು ವರ್ಷದ ಚಿಂತನ್ ಹುಡುಗ ಆ ಭಿಕ್ಷುಕರೆಲ್ಲರಿಗೂ ತನ್ನ ಕೈಯಲ್ಲಿದ್ದಂತಹ ಹಣವನ್ನು ಕೊಡ್ತಾ ಬರ್ತಿದ್ದ.. ಇನ್ನೂ ಚಿಂತನ್ ಕೈಗೆ ಅವರ ತಂದೆ ವೇಣು ಹಣಕೊಟ್ಟು ಹಣವನ್ನು ಹಂಚು ಅಂತ ಹೇಳಿದ್ದ. ಇನ್ನೂ ಭಿಕ್ಷುಕರಲ್ಲಿ ಕಡೆಯದಾಗಿ ಒಬ್ಬರು ವಯಸ್ಸಾದ ಅಜ್ಜಿ ಇದ್ದರು.. ಈ ಅಜ್ಜಿ ತುಂಬಾ ಹೀನಾಯ ಸ್ಥಿತಿಯಲ್ಲಿ ಕಾಣುತ್ತಿದ್ದರು. ಆಗ ಚಿಂತನ್ ಅಪ್ಪ ನೀನು ಕೊಟ್ಟ ಹಣ ಖಾಲಿಯಾಗಿದೆ ಈ ಅಜ್ಜಿಗೂ ಕೂಡ ನಾನು ಹಣ ಕೊಡಬೇಕು ಅಂತ ಹೇಳಿ ವೇಣು ಹತ್ತಿರ ಚಿಲ್ಲರೆ ಹಣವನ್ನು ಪಡೆದು ಅಜ್ಜಿಗೆ ಹಣ ಕೊಟ್ಟ. ಆದರೆ ಆ ಅಜ್ಜಿ ಅಲ್ಲಿ ಭಿಕ್ಷೆ ಬೇಡಲು ಕುಳಿತಿರಲಿಲ್ಲಾ.. ಸುಮ್ಮನೆ ಅಲ್ಲಿ ಮಲಗಿದ್ದರು‌. ಆದರೆ ಆಕೆ ಭಿಕ್ಷುಕರ ಸಾಲಿನಲ್ಲಿ ಕೂತಿದ್ದ ಕಾರಣ ಅಲ್ಲಿ ಹೋಗುವವರು ಮತ್ತು ಬರುವವರೆಲ್ಲಾ ಭಿಕ್ಷೆ ಹಾಕುತ್ತಿದ್ದರು. ವಿಧಿಯಿಲ್ಲದೇ ಅಜ್ಜಿ ಆ ಹಣವನ್ನು ಪಡೆದು ಊಟ ಮಾಡ್ತಿದ್ರು.. ಚಿಂತನ್ ತಟ್ಟೆಗೆ ಹಣ ಹಾಕಿದ ತಕ್ಷಣ ಎದ್ದ ಅಜ್ಜಿ ವೇಣು ಮತ್ತು ಚಿಂತನ್ ನೋಡಿ ನಕ್ಕರು. ನಂತರ ವೇಣು ಚಿಂತನ್ ತಮ್ಮ ಪಾಡಿಗೆ ತಾವು ಮನೆಗೆ ಹೊರಟು ಬಿಡ್ತಾರೆ. ಕೆಲ ದಿನಗಳ ಬಳಿಕ ವೇಣು ಆತನ ಹೆಂಡತಿ ಮತ್ತು ಮಗ ಚಿಂತನ್ ಜೊತೆ ದೇವಸ್ತಾನ ಎದುರಿಗೆ ಇದ್ದಂತಹ ಒಂದು ಮನೆಗೆ ಶಿಪ್ಟ್ ಆಗ್ತಾರೆ..

[widget id=”custom_html-3″]

Advertisements

ಹತ್ತಿರವೇ ಇದ್ದಂತಹ ದೇವಸ್ತಾನಕ್ಕೆ ಮತ್ತೊಮ್ಮೆ ವೇಣು ಮತ್ತು ಚಿಂತನ್ ಬಂದು ದೇವರ ದರ್ಶನ ಪಡೆದು ಅಲ್ಲಿನ ಭಿಕ್ಷುಕರಿಗೆ ಹಣ ಕೊಟ್ಟು ಒಬ್ಬೊಬ್ಬರಿಗೆ ಊಟ ಹಂಚಿತಾ ಬರ್ತಾ ಇರ್ತಾರೆ ಕೊನೆಯದಾಗಿ ಅಜ್ಜಿ ಸರದಿ ಬಂದಾಗ ಊಟ ಖಾಲಿಯಾಗುತ್ತೆ.. ಆಗ ವೇಣು ಅಜ್ಜಿಗೆ ಊಟ ಖಾಲಿಯಾಗಿದೆ ಅಂತ ಹೇಳಿ ಹಣ ಕೊಟ್ಟು ಬಾ ಅಂತ ಚಿಂತನ್ ಗೆ ಹೇಳ್ತಾನೆ. ತಂದೆ ಮಾತಿನಂತೆ ಅಜ್ಜಿ ಹತ್ತಿರ ಹೋದ ಚಿಂತನ್ ನಾವು ತಂದಿದ್ದ ಊಟ ಖಾಲಿಯಾಗಿದೆ ತಗೋಳಿ ಹಣ ಎಂದು ಅಜ್ಜಿಗೆ ಕೊಟ್ಟ. ಇನ್ನೂ ಅಜ್ಜಿಯ ಪಕ್ಕದಲ್ಲೇ ಶ್ರವಣ ಎಂಬ ಭಿಕ್ಷುಕ ಭಿಕ್ಷೆ ಬೇಡ್ತಿದ್ದ. ಅಜ್ಜಿಯ ಯೋಗಕ್ಷೇಮವನ್ನು ಈ ಶ್ರವಣಾನೆ ನೋಡಿಕೊಳ್ತಿದ್ದ.. ಅದಾಗಲೇ ಅವನ ಹತ್ತಿರ ಎರಡು ಊಟ ಇದ್ದರಿಂದ ಅಜ್ಜಿಗೆ ಒಂದು ಊಟವನ್ನು ಕೊಟ್ಟು ಹಣವನ್ನು ಒಳಗೆ ಎತ್ತಿಕೊಂಡ. ಶ್ರವಣ ಕೊಟ್ಟ ಊಟವನ್ನು ನೋಡಿ ಅಜ್ಜಿಯ ಕಣ್ಣಲ್ಲಿ ನೀರು ಬರುತ್ತದೆ.. ಇನ್ನೂ ಮತ್ತೊಮ್ಮೆ ವೇಣುವಿನ ಹೆಂಡತಿ ಹುಟ್ಟುಹಬ್ಬ ಇದ್ದ ಕಾರಣ ದೇವಸ್ಥಾನ ಬಳಿ ಹೋಗಿ ತನ್ನ ಹೆಂಡತಿಯ ಕೈಯಲ್ಲೇ ಅಲ್ಲಿನ ಮಹಿಳೆ ಭಿಕ್ಷುಕರಿಗೆ ತಂದಿದ್ದ ಸೀರೆಗಳನ್ನು ಕೊಟ್ಟರು.. ಕೊನೆಯದಾಗಿ ಅಜ್ಜಿಗೂ ಹೊಸ ಸೀರೆಯನ್ನು ಕೊಟ್ಟು ಮನೆಗೆ ಹೋಗ್ತಾರೆ.. ಅಜ್ಜಿ ಏನೂ ಮಾತನಾಡದೇ ಆ ಸೀರೆಯನ್ನು ಎತ್ತಿಕೊಂಡು ಭದ್ರವಾಗಿ ಎತ್ತಿಟ್ಟುಕೊಂಡಳು.

[widget id=”custom_html-3″]

ನಂತರ ಅಜ್ಜಿ ಶ್ರವಣ ಹತ್ತಿರ ಕೇಳ್ತಾಳೆ ಈ ಸೀರೆಯನ್ನ ಯಾಕೆ ಕೊಟ್ಟರು ಅಂಥ! ಅದಕ್ಕೆ ಶ್ರವಣ ಆಕೆಯ ಹುಟ್ಟುಹಬ್ಬ ಇದ್ದ ಕಾರಣ ಸೀರೆ ಕೊಟ್ಟು ಹೋಗಿದ್ದಾರೆ ಅಂತ ಹೇಳ್ತಾನೆ.. ವೇಣು ದೇವಸ್ಥಾನದ ಹತ್ತಿರವೇ ಮನೆ ಮಾಡಿಕೊಂಡಿದ್ದಾನೆ ಎಂಬ ವಿಷಯ ಅಜ್ಜಿಗೆ ಗೊತ್ತಾಗಿದ್ದೆ ತಡ ಶ್ರವಣನ ಬಳಿ ಪೆನ್ ಮತ್ತು ಪೇಪರ್ ಕೊಡುವಂತೆ ಹೇಳಿ ಅದರಲ್ಲಿ ಬರೆಯಲು ಶುರು ಮಾಡ್ತಾರೆ. ಅಜ್ಜಿ ಎನೋ ಬರೆಯುತ್ತಿರುವುದನ್ನು ಕಂಡ ಶ್ರವಣ ನಿನಗೆ ಓದಲು ಬರೆಯೋದು ಬರುತ್ತೆ ಅಂತ ಕೇಳ್ತಾನೆ.. ಆಗ ಅಜ್ಜಿ ನಕ್ಕು ಒಂದು ಸಹಾಯ ಮಾಡು ಎಂದು ಶ್ರವಣನಿಗೆ ಹೇಳ್ತಾಳೆ. ಶ್ರವಣನೂ ಕೂಡ ಅಯ್ತು ಮಾಡ್ತಿನಿ ಅಂತ ಹೇಳ್ತಾನೆ. ಆಗ ಅಜ್ಜಿ ನಾನು ಅಕಸ್ಮಾತ್ ಸ’ತ್ತು ಹೋದರೆ ಈ ಪತ್ರವನ್ನು ನಮಗೆ ಊಟ ಹಣ ಕೊಟ್ಟ ವೇಣುಗೆ ಕೊಡು ಅಂತ ಹೇಳ್ತಾಳೆ.. ಈ ರೀತಿ ಹೇಳಿದ ಒಂದೇ ತಿಂಗಳಿಗೆ ಗುಡಿಸಲಿನಲ್ಲಿ ನೆಲೆಸಿದ್ದ ಅಜ್ಜಿ ತೀರಿಕೊಂಡಳು.. ಆಗ ಅಜ್ಜಿ ಹೇಳಿದ ಪತ್ರದ ವಿಷಯದ ಬಗ್ಗೆ ಶ್ರವಣನಿಗೆ ನೆನಪಾಗುತ್ತೆ. ಕೂಡಲೇ ಅಜ್ಜಿ ಚೀಲದಲ್ಲಿ ಇದ್ದಂತಹ ಪತ್ರವನ್ನು ತೆಗೆದುಕೊಂಡು ಅಜ್ಜಿ ಹೇಳಿದಂತೆ ವೇಣುಗೆ ನೀಡುತ್ತಾನೆ.. ವೇಣು ಈ ಪತ್ರವನ್ನು ಎತ್ತಿಕೊಂಡು ಓದಲು ಶುರುಮಾಡ್ತಾನೆ. ಆ ಪತ್ರದಲ್ಲಿ ಭಿಕ್ಷುಕ ಅಜ್ಜಿ ಈ ರೀತಿ ಬರೆದಿರುತ್ತಾಳೆ.. ಮಗನೇ ವೇಣು ನಾನೆಪಾ ನಿನ್ನನ್ನು ಒಂಬತ್ತು ತಿಂಗಳು ಎತ್ತು ಹೊತ್ತು ಸಾಕಿದ ತಾಯಿ. ನೀನು ಪತ್ರ ಓದುತ್ತಿರುವ ಸಂದರ್ಬದಲ್ಲಿ ನಾನು ಸ’ತ್ತು ಹೋಗಿರ್ತೀನಿ..

[widget id=”custom_html-3″]

ನನ್ನ ಅಂ’ತ್ಯ ಸಂಸ್ಕಾರವನ್ನು ನೀನೆ ಮಾಡು, ನೀನು ಹಣ ಖರ್ಚು ಮಾಡಬೇಡ. ಭಿಕ್ಷೆ ಬೇಡಿ ಒಂದಷ್ಟು ಹಣ ಕೂಡಿಟ್ಟಿದೀನಿ ಅದೇ ಹಣ ತೆಗೆದುಕೊಂಡು ನನ್ನ ಕಾರ್ಯಗಳಿಗೆ ಖರ್ಚು ಮಾಡು.. ನಾನು ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ನೋ ಗೊತ್ತಿಲ್ಲಾ. ನನ್ನನ್ನು ಒಂದು ದೇವಸ್ಥಾನದಲ್ಲಿ ಬಿಟ್ಟು ಇಲ್ಲೇ ಇರು ಬರ್ತೀನಿ ಅಂತ ಹೇಳಿ ಹೋದೆ. ಆದರೆ ನೀನು ಬರಲೇ ಇಲ್ಲಾ.. ನನ್ನ ಹತ್ತಿರ ಹಣವಿತ್ತು, ಮನೆಗೆ ಬರುವ ಜಾಗ ಕೂಡ ಗೊತ್ತಿತ್ತು. ಆದರೆ ನೀನು ಬರ್ತಿಯಾ ಕರೆದುಕೊಂಡು ಹೋಗ್ತಿಯಾ ಎನ್ನುವ ನಂಬಿಕೆಯಿಂದ ಇದ್ದೆ.. ಆದರೆ ಕೊನೆಗೂ ನೀನು ಬರಲೇ ಇಲ್ಲಾ. ಆಗ ನನಗೆ ಗೊತ್ತಾಯಿತು ನಾನು ನಿನಗೆ ಭಾರವಾಗಿದ್ದೇನೆ ಅಂತ.. ಕೊನೆಗೂ ನೀನು ಮೊಮ್ಮಗನ ಕೈಯಲ್ಲಿ ಭಿಕ್ಷೆ ಆಕಿಸಿದೆ, ಹೆಂಡತಿ ಕೈಯಲ್ಲಿ ಸೀರೆ ಕೊಡಿಸಿದೆ ನೋಡು ದೇವರ ಆಟ ಹೇಗಿದೆ.. ನೀನು ಕೊಟ್ಟ ಸೀರೆ ಇನ್ನೂ ಜೋಪಾನವಾಗಿ ಇದೆ ನನ್ನ ಶ’ವಕ್ಕೆ ಉಡಿಸು, ನೀನು ಕೊಟ್ಟ ಹಣದಿಂದಲೇ ನನ್ನ ಚಿ’ತೆ’ಗೆ ಬೆಂ’ಕಿ ಇಡು ಎಂದು ಆ ಅಜ್ಜಿ ಪತ್ರದಲ್ಲಿ ಬರೆದಿದ್ದಳು‌. ಈ ಪತ್ರವನ್ನು ಓದಿ ಕಣ್ಣೀರು ಸುರಿಸಿದ ವೇಣು ಕೂಡಲೇ ತಾಯಿ ಹತ್ತಿರ ಹೋಗಿ ದಯವಿಟ್ಟು ಕ್ಷಮಿಸುಬಿಡು ನಾನು ಪಾಪಿ ಅಂಥ ತಬ್ಬಿಕೊಳ್ತಾನೆ.. ನಂತರ ತನ್ನ ತಾಯಿಯ ಕಾರ್ಯವನ್ನು ಮುಗಿಸುತ್ತಾನೆ. ಈ ಸ್ಟೋರಿ ಹೇಗಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.