Advertisements

ಹೊರಗಿನಿಂದ ತಿಂಡಿ ತಿನಿಸುಗಳನ್ನು ತರುವುದಕ್ಕಿಂತ ಮನೆಯಲ್ಲಿಯೇ ಮಾಡಿ ಗರಿಗರಿಯಾದ ಶಂಕರಪೋಳಿ.

Aduge

ಬೇಕಾಗುವ ಸಾಮಗ್ರಿಗಳು : ಮೈದಾಹಿಟ್ಟು 1 ಪಾವು, ತುಪ್ಪ 4 ಟೇಬಲ್ ಚಮಚ, ಉಪ್ಪು1 ಟೀಚಮಚ, ಅಚ್ಚಕಾರದ ಪುಡಿ ಒಂದು ಟೇಬಲ್ ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ : ಈಗ ಒಂದು ಬೇಸನ್ನಿನಲ್ಲಿ ಮೈದಾಹಿಟ್ಟು, ತುಪ್ಪ, ಉಪ್ಪು ಅಚ್ಚಕಾರದ ಪುಡಿ , ಚೆನ್ನಾಗಿ ಕಾಯಿಸಿದ 4 ಟೇಬಲ್ ಚಮಚ ಎಣ್ಣೆ ಎಲ್ಲವನ್ನು ಚೆನ್ನಾಗಿ ಎಲ್ಲವೂ ಬೆರೆಯುವಂತೆ ಕೈಯಲ್ಲಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ಕಲಸಿ. ಕಲೆಸಿಡುವ ಅಗತ್ಯವಿಲ್ಲ. ಕಲೆಸಿದ ತಕ್ಷಣ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ.

Advertisements

ಈಗ ಒಂದು ದಪ್ಪ ನಿಂಬೆಗಾತ್ರದ ಹಿಟ್ಟನ್ನು ತೆಗೆದುಕೊಂಡು ಚಪಾತಿಗಿಂತಲೂ ಸ್ವಲ್ಪ ದಪ್ಪವಾಗಿ ಲಟ್ಟಿಸಿ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಕಾದಿರುವ ಎಣ್ಣೆಯಲ್ಲಿ ಬಿಡಿ. ಆಗಾಗ್ಗೆ ಜಾಲರಿಯಲ್ಲಿ ತಿರುವಿ ಹಾಕುತ್ತಿರಿ. ಅದು ಚೆನ್ನಾಗಿ ಕರಿದ ನಂತರ ಹೊಂಬಣ್ಣ ಬಂದ ಮೇಲೆ ಟಿಶ್ಯೂ ಪೇಪರ್ ಮೇಲೆ ಹಾಕಿ. ಜಾಸ್ತಿ ಪದಾರ್ಥಗಳು ಇಲ್ಲದೇ, ಸುಲಭವಾಗಿ ಮಾಡಬಹುದಾದ, ಎಣ್ಣೆ ಹೀರದ ಕುರುಕು ತಿಂಡಿ ಶಂಕರ್ಪೊಳಿ ತಿನ್ನಲು ರೆಡಿ.

ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕೆನಿಸಿದಾಗ ತಿನ್ನಲು ಕೊಡಿ. ಗರಿಗರಿಯಾದ ಬಾಯಲ್ಲಿಟ್ಟರೆ ಕರಗುವಂತ ಶಂಕರ್ಪೊಳಿ ಈಗ ರೆಡಿ. ಹೊರಗಿನಿಂದ ತಿಂಡಿ ತಿನಿಸುಗಳನ್ನು ತರುವುದಕ್ಕಿಂತ ಮನೆಯಲ್ಲಿಯೇ ಮಾಡಿದಲ್ಲಿ ಶುಚಿಯಾಗಿಯೂ, ರುಚಿಯಾಗಿಯೂ ಇರುವುದು. ಅರೋಗ್ಯಕ್ಕೂ ಒಳ್ಳೆಯದು.

ಸಿಹಿ ಶಂಕರ್ಪೊಳಿ ಮಾಡಬೇಕಾದಲ್ಲಿ ಮೈದಾಹಿಟ್ಟು 1 ಪಾವು, ತುಪ್ಪ 4 ಟೇಬಲ್ ಚಮಚ, ಉಪ್ಪು ಚಿಟಕಿ, ಸಕ್ಕರೆ ಪುಡಿ 4 ಟೇಬಲ್ ಚಮಚ ಹಾಕಿ ಮೇಲೆ ತಿಳಿಸಿದ ರೀತಿ ಮಾಡಿದಲ್ಲಿ ಸಿಹಿ ಶಂಕರಪೋಳಿ ಆಗುವುದು.